‘ಮೊದಲು ಸಿನಿಮಾ ನೋಡಿ ಆಮೇಲೆ ಮಾತನಾಡೋಣ’; ಕಾಳಿ ಸ್ವಾಮೀಜಿಗೆ ನೇರವಾಗಿ ಹೇಳಿದ ‘ಮಠ’ ನಿರ್ದೇಶಕ
ಈ ಚಿತ್ರದ ಬಗ್ಗೆ ಕಾಳಿ ಸ್ವಾಮಿ (ರಿಷಿಕುಮಾರ ಸ್ವಾಮಿ) ತಕರಾರು ತೆಗೆದಿದ್ದಾರೆ. ‘ಹಾಸ್ಯ ಮಾಡೋಕೆ ನಿಮಗೆ ಬೇರೆ ಧರ್ಮ ಇಲ್ಲವೇ?’ ಎಂದು ಕಾಳಿ ಸ್ವಾಮಿ ಪ್ರಶ್ನೆ ಮಾಡಿದ್ದರು.
‘ಮಠ’ ಸಿನಿಮಾ (Matha Movie) ರಿಲೀಸ್ಗೆ ರೆಡಿ ಇದೆ. ರವೀಂದ್ರ ವಂಶಿ (Ravindra Vamshi) ನಿರ್ದೇಶನದ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಸಿನಿಮಾ ವಿವಾದ ಹೊತ್ತಿಸುವ ಸೂಚನೆ ನೀಡಿದೆ. ಈ ಚಿತ್ರದ ಬಗ್ಗೆ ಕಾಳಿ ಸ್ವಾಮಿ (ರಿಷಿಕುಮಾರ ಸ್ವಾಮಿ) ತಕರಾರು ತೆಗೆದಿದ್ದಾರೆ. ‘ಹಾಸ್ಯ ಮಾಡೋಕೆ ನಿಮಗೆ ಬೇರೆ ಧರ್ಮ ಇಲ್ಲವೇ?’ ಎಂದು ಕಾಳಿ ಸ್ವಾಮಿ ಪ್ರಶ್ನೆ ಮಾಡಿದ್ದರು. ಇದಕ್ಕೆ ನಿರ್ದೇಶಕ ರವೀಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಮೊದಲು ಸಿನಿಮಾ ನೋಡಿ ಆಮೇಲೆ ಮಾತನಾಡೋಣ’ ಎಂದು ಅವರು ಹೇಳಿದ್ದಾರೆ.
Latest Videos