ಸದಾನಂದಗೌಡರ ಮನೆಯಲ್ಲಿ ಅಶೋಕ, ಬೊಮ್ಮಾಯಿ, ಅಶ್ವಥ್ ಮತ್ತು ಸಿಟಿ ರವಿ ಮೀಟಿಂಗ್!
ರಾಜ್ಯ ಬಿಜೆಪಿಯಲ್ಲಿ ಒಳಜಗಳಗಳು ಜೋರಾಗಿ ನಡೆಯುತ್ತಿವೆ, ಇವತ್ತು ಮಾಜಿ ಸಚಿವ ಬಿ ಶ್ರೀರಾಮುಲು ಮತ್ತು ಅವರ ಖಾಸಾ ಗೆಳೆಯ ಗಾಲಿ ಜನಾರ್ಧನರೆಡ್ಡಿ ನಡುವೆ ಕಿತ್ತಾಟ ಶುರುವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿವೈ ವಿಜಯೇಂದ್ರ ನಡುವಿನ ಜಗಳ ಬೇರೆ ಗ್ರಹದವರಿಗೂ ಗೊತ್ತಾಗಿದೆ. ಕೆಲ ಹಿರಿಯ ಬಿಜೆಪಿ ನಾಯಕರೂ ರಾಜ್ಯ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರೋದು ಗೊತ್ತಾಗುತ್ತಿದೆ.
ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಏನು ನಡೆಯುತ್ತಿದೆ ಅಂತ ಗೊತ್ತಾಗುತ್ತಿಲ್ಲ ಮಾರಾಯ್ರೇ. ನಿನ್ನೆ ಒಂದರ ನಂತರ ಮತ್ತೊಂದರಂತೆ ಮೂರು ಮೀಟಿಂಗ್ ಗಳು. ಸಭೆಗಳ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಆರ್ ಅಶೋಕ ಎಂದಿನಂತಿರದೆ ಮುಖ ಗಂಟಿಕ್ಕಿಕೊಂಡಿದ್ದರು. ಇವತ್ತು ಅವರು ಸೇರಿದಂತೆ ಕೆಲ ಪ್ರಮುಖ ನಾಯಕರು ಹಿರಿಯ ಬಿಜೆಪಿ ನಾಯಕ ಡಿವಿ ಸದಾನಂದಗೌಡ ಮನೆಯಲ್ಲಿ ಸಭೆ ಸೇರಿದ್ದಾರೆ. ಅಶೋಕ ನಂತರ ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ, ಪರಿಷತ್ ಸದಸ್ಯ ಸಿಟಿ ರವಿ ಅವರು ಸದಾನಂದಗೌಡರ ಮನೆಗೆ ಆಗಮಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ರಾಜ್ಯಾಧ್ಯಕ್ಷನ ಚುನಾವಣೆ ಬಗ್ಗೆ ಚರ್ಚೆ ಆಗಿಲ್ಲ: ಆರ್ ಅಶೋಕ