ಯತ್ನಾಳ್​ಗೆ ನೀಡಿದ ನೋಟೀಸ್ ಬಗ್ಗೆ ಪ್ರಶ್ನೆ ಕೇಳಿದಾಗ ಅಶೋಕರಿಂದ ಗೊಂದಲಮಯ ಉತ್ತರ

|

Updated on: Dec 02, 2024 | 5:38 PM

ಪತ್ರಕರ್ತರು ಯತ್ನಾಳ್​ಗೆ ನೀಡಿದ ನೋಟೀಸ್ ಬಗ್ಗೆ ಅಶೋಕ ಅವರಿಗೆ ಪ್ರಶ್ನೆ ಕೇಳಿದಾಗ ಅವರ ಬಲಭಾಗದಲ್ಲಿ ಕೂತಿದ್ದ ಎಂಎಲ್​ಸಿ ಸಿಟಿ ರವಿ ಉತ್ತರವನ್ನು ಪ್ರಾಂಪ್ಟ್ ಮಾಡುತ್ತಾರೆ. ಯತ್ನಾಳ್ ಕುತಿತು ಕೇಳುವ ಪ್ರಶ್ನೆ ಹಿರಿಯ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಹೈಕಮಾಂಡ್ ಮತ್ತು ಯತ್ನಾಳ್ ಇಬ್ಬರನ್ನೂ ಬಿಟ್ಟುಕೊಡಲಾಗದ ಸ್ಥಿತಿ.

ಮೈಸೂರು: ಬಿಜೆಪಿಯ ಕೇಂದ್ರ ಶಿಸ್ತುಪಾಲನಾ ಸಮಿತಿಯು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜಾರಿ ಮಾಡಿರುವ ಶೋಕಾಸ್ ನೋಟೀಸ್ ಬಗ್ಗೆ ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು ನೀಡಿದ ಪ್ರತಿಕ್ರಿಯೆ ಆಶ್ಚರ್ಯ ಹುಟ್ಟಿಸುವಂತಿತ್ತು. ಅದರ ಬಗ್ಗೆ ತನಗೆ ಹೆಚ್ಚು ಗೊತ್ತಿಲ್ಲ, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ತಮ್ಮ ರಾಷ್ಟ್ರೀಯ ನಾಯಕರು ಈಗಾಗಲೇ ಚರ್ಚೆ ಅರಂಭಿಸಿದ್ದಾರೆ, ಇನ್ನೊಂದು ವಾರದೊಳಗೆ ಎಲ್ಲವೂ ಸುಖಾಂತ್ಯ ಕಾಣಲಿದೆ ಎಂದು ಹೇಳುತ್ತಾ ಅಶೋಕ ಪತ್ರಿಕಾ ಗೋಷ್ಠಿ ಮೊಟಕುಗೊಳಿಸಿ ಪಲಾಯನ ಮಾಡುವ ಹಾಗೆ ಎದ್ದುನಿಂತರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ಕಿರುಕುಳ ನೀಡಿದರೆ ಬೀದಿಗಿಳಿದು ಹೋರಾಟ: ಆರ್ ಅಶೋಕ