ತುಮಕೂರುನಲ್ಲಿ ಸಿಎಂ ಸಿದ್ದರಾಮಯ್ಯ ಕಾರು ತಡೆದು ವಾಸಕ್ಕೆ ಮನೆ ಕೇಳಿದ ಶಿರಾದ ಬೀಡಿ ಕಾರ್ಮಿಕೆ

ತುಮಕೂರುನಲ್ಲಿ ಸಿಎಂ ಸಿದ್ದರಾಮಯ್ಯ ಕಾರು ತಡೆದು ವಾಸಕ್ಕೆ ಮನೆ ಕೇಳಿದ ಶಿರಾದ ಬೀಡಿ ಕಾರ್ಮಿಕೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 02, 2024 | 6:58 PM

ವೇದಿಕೆ ಮೇಲೆ ನಿಂತು ಭಾಷಣ ಮಾಡುವಾಗ ಮುಖ್ಯಮಂತ್ರಿಯವರು ಮಹಿಳೆಯರ ಹಕ್ಕು, ಸಮಾನತೆ ಮತ್ತು ಸಬಲೀಕರಣದ ಬಗ್ಗೆ ಮಾತಾಡುತ್ತಾರೆ, ಹೃದ್ರೋಗಿಯಾಗಿರುವ ಗಂಡ ಮತ್ತು ಮಕ್ಕಳೊಡನೆ ಬಾಡಿಗೆ ಮನೆಯಲ್ಲಿ ಬೀಡಿ ಕಟ್ಟಿಕೊಂಡು ಬದುಕು ನಿರ್ವಹಣೆ ಮಾಡುತ್ತಿರುವ ತನಗೆ ಒಂದು ಮನೆಯನ್ಯಾಕೆ ಸಿಎಂ ಅವರು ಕಲ್ಪಿಸಿಕೊಡಬಾರದು ಎಂದು ರಬಿಯಾ ಪ್ರಶ್ನಿಸುತ್ತಾರೆ.

ತುಮಕೂರು: ಶಿರಾ ಮೂಲದ ಮಹಿಳೆಯೊಬ್ಬರು ಇಂದು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನು ಅಡ್ಡಗಟ್ಟಿ ವಾಸಕ್ಕೆ ಮನೆಕೇಳಿದ ಪ್ರಸಂಗ ನಡೆಯಿತು. ಮಹಿಳೆಯ ಬೇಡಿಕೆಗೆ ಮುಖ್ಯಮಂತ್ರಿ ಅವಸರದಲ್ಲಿ ಪ್ರತಿಕ್ರಯಿಸಿ ಜಿಲ್ಲಾಧಿಕಾರಿಗೆ ಹೇಳಿದ್ದೀನಿ ಅವರು ಮಾಡಿಕೊಡುತ್ತಾರೆ ಅನ್ನುತ್ತಾರೆ. ಅಸಲಿಗೆ 40ವರ್ಷದಿಂದ ಬಾಡಿಗೆ ಮನೆಯೊಂದರಲ್ಲಿ ವಾಸಾವಾಗಿರುವ ರಬಿಯಾಗೆ ಜನತಾ ಕಾರ್ಯಕ್ರಮವೊದರಲ್ಲಿ ಸ್ಥಳೀಯ ಶಾಸಕ ಟಿವಿ ಜಯಚಂದ್ರ ಮನೆ ಕೊಡುವ ಭರವಸೆ ನೀಡಿದ್ದರಂತೆ, ಆದರೆ ಒಂದೂವರೆ ವರ್ಷದಿಂದ ಅದು ಭರವಸೆಯಾಗೇ ಉಳಿದಿದೆ, ಮನೆಗಾಗಿ ರಬಿಯಾ ವಸತಿ ಸಚಿವ ಜಮೀರ್ ಅಹ್ಮದ್​ರನ್ನು ಭೇಟಿಯಾದರೂ ಪ್ರಯೋಜನವಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಂವಿಧಾನ ಬದಲಿಸಬೇಕೆಂದು ಹೇಳಿಯೇ ಇಲ್ಲ, ಸಿದ್ದರಾಮಯ್ಯ ಪರಿಶೀಲಿಸಿ ಮಾತನಾಡಬೇಕಿತ್ತು: ಪೇಜಾವರ ಶ್ರೀ