ಪಂಚೆಯುಟ್ಟು ಹ್ಯಾಟ್ ತೊಟ್ಟು ಕೈಯಲ್ಲಿ ಬ್ಯಾಟ್ ಹಿಡಿದು ಒಂದೇ ಎಸೆತ ಎದುರಿಸಿ ಹಿಂದೆ ಸರಿದ ಸಿದ್ದರಾಮಯ್ಯ!

ಪಂಚೆಯುಟ್ಟು ಹ್ಯಾಟ್ ತೊಟ್ಟು ಕೈಯಲ್ಲಿ ಬ್ಯಾಟ್ ಹಿಡಿದು ಒಂದೇ ಎಸೆತ ಎದುರಿಸಿ ಹಿಂದೆ ಸರಿದ ಸಿದ್ದರಾಮಯ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 02, 2024 | 7:57 PM

ರಾಜಕಾರಣಿಗಳ ಗುಂಪಿನಲ್ಲಿ ಒಬ್ಬ ರೀಯಲ್ ಕ್ರಿಕೆಟರ್ ಇದ್ದಾರೆ ಅವರನ್ನು ಗುರುತಿಸಬಲ್ಲಿರಾ? ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಕೆ ರಾಠೋಡ್ ರಾಜಕಾರಣಕ್ಕೆ ಬರುವ ಮೊದಲು ಪ್ರಥಮ ದರ್ಜೆ ಕ್ರಿಕೆಟರ್ ಅಗಿದ್ದರು ಮತ್ತು 80 ರ ದಶಕದಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಎಡಗೈ ಸ್ಪಿನ್ನರ್ ಆಗಿದ್ದ ಅವರು ಕೈಯಲ್ಲಿ ಬಾಲು ಹಿಡಿದಿರುವ ರೀತಿಯಿಂದಲೇ ಓಬ್ಬ ಮಾಜಿ ಕ್ರಿಕೆಟರ್ ಅನ್ನೋದು ಗೊತ್ತಾಗುತ್ತದೆ.

ತುಮಕೂರು: ನೀವು ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅಥವಾ ಯಶಸ್ವೀ ಜೈಸ್ವಾಲ್ ಬ್ಯಾಟ್ ಮಾಡುವುದನ್ನು ನೋಡಿರುತ್ತೀರಿ, ಆದರೆ ನಾಡಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಬಾಲ್​​ಗೆ ಬಾರಿಸುವುದನ್ನು ನೋಡಿರಲಾರಿರಿ. ಇಲ್ಲಿದೆ ಸೆಲಿಬ್ರಿಟಿ ಕ್ರಿಕೆಟ್ ಲೀಗ್​ನ ಒಂದು ಝಲಕ್! ಮೊದಲು, ಪಂಚೆಯುಟ್ಟ ಓಪನಿಂಗ್ ಬ್ಯಾಟರ್ ಸಿದ್ದರಾಮಯ್ಯ ಒಂದು ಬಾಲ್ ಎದುರಿಸಿ ಬ್ಯಾಟನ್ನು ಸ್ಥಳೀಯ ಪ್ರತಿಭೆ ಜಿ ಪರಮೇಶ್ವರ್ ಅವರಿಗೆ  ನೀಡುತ್ತಾರೆ. ಲೋಕಲ್ ಹೀರೋ ಹೇಗೆ ಬೋಲ್ ಮಾಡಬೇಕೆಂದು ಬೌಲರ್ ಗೆ ಹೇಳಿ ಒಂದು ಸ್ಟ್ರೇಟ್ ಡ್ರೈವ್ ಕೂಡ ಬಾರಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತುಮಕೂರುನಲ್ಲಿ ಸಿಎಂ ಸಿದ್ದರಾಮಯ್ಯ ಕಾರು ತಡೆದು ವಾಸಕ್ಕೆ ಮನೆ ಕೇಳಿದ ಶಿರಾದ ಬೀಡಿ ಕಾರ್ಮಿಕೆ