ಫಿನಾಲೆ ಸಮೀಪಿಸುತ್ತಿದ್ದಂತೆ ಶಾಂತಮೂರ್ತಿಯಾದ ಅಶ್ವಿನಿ; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ?
ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸದಾ ಕಿತ್ತಾಟ ಮಾಡುತ್ತಲೇ ಕಾಣಿಸಿಕೊಳ್ಳುತ್ತಾರೆ. ಈಗ ಅವರು ಶಾಂತಮೂರ್ತಿಯಾಗಿದ್ದಾರೆ. ಇದರ ಹಿಂದೆ ಇರುವ ಕಾರಣ ಏನು ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಫಿನಾಲೆ ಬಂದಿದ್ದರಿಂದ ಲೆಕ್ಕಾಚಾರ ಹಾಕಿ ಅವರು ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ಸಮೀಪಿಸುತ್ತಿದ್ದಂತೆ ಅಶ್ವಿನಿ ಗೌಡ ಶಾಂತಮೂರ್ತಿ ಆಗಿದ್ದಾರೆ. ಎದುರಾಳಿಗಳ ಆಟ ಹಾಳು ಮಾಡಲು ಅಶ್ವಿನಿಗೆ ಅವಕಾಶ ನೀಡಲಾಯಿತು. ಈ ವೇಳೆ ಅವರು ಶಾಂತ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ರಕ್ಷಿತಾ ಪ್ರಶ್ನೆ ಮಾಡಿದ್ದಾರೆ. ‘ಅದು ನನ್ನ ವ್ಯಕ್ತಿತ್ವ ಅಲ್ಲ’ ಎಂದಿದ್ದಾರೆ ಅಶ್ವಿನಿ. ‘ಮುಖವಾಡ ಬದಲಿಸುತ್ತಾರೆ’ ಎಂಬ ಅಭಿಪ್ರಾಯವನ್ನು ರಕ್ಷಿತಾ ಹೊರಹಾಕಿದ್ದಾರೆ. ಫಿನಾಲೆ ಸಮೀಪಿಸಿದ್ದರಿಂದ ಅವರು ಮಾಡಿಕೊಂಡಿರುವ ತಂತ್ರ ಇದಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

