News9 Global Summit: ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್ಗಳನ್ನು ಬಹಿರಂಗಪಡಿಸಿದ ಸಚಿವ ಅಶ್ವಿನಿ ವೈಷ್ಣವ್
ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯುತ್ತಿರುವ ಮೂರು ದಿನಗಳ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಭಾತರದ ಸಚಿವ ಅಶ್ವಿನಿ ವೈಷ್ಣವ್ ಭಾಗವಹಿಸಿ ಭಾರತದ ಬೆಳವಣಿಗೆಯಲ್ಲಿ ನಾಲ್ಕು ಪಿಲ್ಲರ್ಗಳನ್ನು ವಿವರಿಸಿದ್ದಾರೆ.
ಸ್ಟುಟ್ಗಾರ್ಟ್(ಜರ್ಮನಿ), (ನವೆಂಬರ್ 21): ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9 ಆಯೋಜಿಸಿರುವ ಮೂರು ದಿನಗಳ ಗ್ಲೋಬಲ್ ಸಮ್ಮಿಟ್ ಇಂದು ಜರ್ಮನಿಯಲ್ಲಿ ಆರಂಭವಾಗಿದೆ. ಬುಂಡೆಸ್ಲೀಗಾ ಕ್ಲಬ್ VfB ಸ್ಟಟ್ ಗಾರ್ಟ್ ಸಹಯೋಗದಲ್ಲಿ ನಡೆಯುತ್ತಿರುವ ನ್ಯೂಸ್ 9 ಗ್ಲೋಬಲ್ ಸಮ್ಮಿಟ್ನಲ್ಲಿ ಭಾರತದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಭಾಗವಹಿಸಿ ಭಾರತದ ಅಭಿವೃದ್ಧಿ ಹಾದಿ ಬಗ್ಗೆ ಬಿಟ್ಟರು. ಅಲ್ಲದೇ ಭಾರತದ ಬೆಳವಣಿಗೆಯಲ್ಲಿ ನಾಲ್ಕು ಪಿಲ್ಲರ್ಗಳನ್ನು ವಿವರಿಸಿದರು.
ಭಾರತದ ಪ್ರಗತಿಯ ಕಾರ್ಯತಂತ್ರವು ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಮೊದಲನೆಯದು ಇನ್ಫ್ರಾಸ್ಟ್ರಕ್ಚರ್ನಲ್ಲಿ ಸಾರ್ವಜನಿಕ ಹೂಡಿಕೆ. ಎರಡನೆಯದು ಸಮಗ್ರ ಪ್ರಗತಿ. ಮೂರನೆಯದು ಮ್ಯಾನುಫ್ಯಾಕ್ಚರಿಂಗ್ ಮತ್ತು ಇನ್ನೋವೇಶನ್. ನಾಲ್ಕನೆಯದು ಕಾನೂನುಗಳ ಸರಳೀಕರಣ ಎಂದು ಹೇಳಿದರು.
Latest Videos