Assam Flood: ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ವ್ಯಕ್ತಿ

|

Updated on: Jul 04, 2024 | 10:32 PM

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಹದಗೆಡುತ್ತಲೇ ಇದ್ದು, ಕಾಝಿರಂಗ ನ್ಯಾಷನಲ್ ಪಾರ್ಕ್​ನಲ್ಲಿ 31 ವನ್ಯ ಪ್ರಾಣಿಗಳು ಮೃತಪಟ್ಟಿವೆ. ಹಾಗೇ, ಸುತ್ತಮುತ್ತಲಿನ ಅಭಯಾರಣ್ಯದಲ್ಲಿ ಅನೇಕ ಕಾಡು ಪ್ರಾಣಿಗಳ ಶವಗಳು ಪ್ರವಾಹದ ನೀರಿನಲ್ಲಿ ತೇಲಿ ಬರತೊಡಗಿವೆ. ಮೋರಿಗಾಂವ್ ಜಿಲ್ಲೆಯಲ್ಲಿ 55,000ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ತತ್ತರಿಸಿದ್ದಾರೆ.

ಅಸ್ಸಾಂನಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಘೋರವಾಗಿದೆ. ಇಲ್ಲಿ 55,000ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಪ್ರವಾಹದ ನೀರು ತಮ್ಮ ಮನೆಗಳಿಗೆ ಪ್ರವೇಶಿಸಿದ ನಂತರ ಸಾವಿರಾರು ಗ್ರಾಮಸ್ಥರು ಈಗ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಇನ್ನೂ 194 ಗ್ರಾಮಗಳು ಪ್ರವಾಹದಲ್ಲಿ ಮುಳುಗಿವೆ.

ಈ ನಡುವೆ ತಾವು ಮಾತ್ರ ಪ್ರಾಣ ಕಾಪಾಡಿಕೊಳ್ಳುವುದಲ್ಲದೆ ತಮ್ಮನ್ನೇ ನಂಬಿಕೊಂಡ ಸಾಕು ಪ್ರಾಣಿಗಳನ್ನು ಕೂಡ ಪ್ರವಾಹದಿಂದ ಬಚಾವ್ ಮಾಡಲು ಜನರು ಹೆಣಗಾಡುತ್ತಿದ್ದಾರೆ. ಅಸ್ಸಾಂನ ದುಲಿಯಾಜಾನ್​ನಲ್ಲಿ ವ್ಯಕ್ತಿಯೊಬ್ಬರು ಉಕ್ಕಿ ಹರಿಯುತ್ತಿದ್ದ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಪುಟ್ಟ ಕರುವೊಂದನ್ನು ತಮ್ಮ ಪ್ರಾಣದ ಹಂಗು ತೊರೆದು ಕಾಪಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ