Loading video

ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ

Updated on: Jun 02, 2025 | 6:37 PM

ಅಸ್ಸಾಂನ ಎರಡನೇ ಅತಿದೊಡ್ಡ ನಗರವಾದ ಸಿಲ್ಚಾರ್ 24 ಗಂಟೆಗಳಲ್ಲಿ 415.8 ಮಿ.ಮೀ ಮಳೆಯನ್ನು ಕಂಡಿದೆ. ಇದು 1893ರ ನಂತರದ ಒಂದು ದಿನದಲ್ಲಿ ದಾಖಲಾಗಿರುವ ಅತ್ಯಧಿಕ ಮಳೆಯಾಗಿದೆ. ಭಾರೀ ಮಳೆಯಿಂದ ಸಿಕ್ಕಿಂನ ಅನೇಕ ಭಾಗಗಳು ಜಲಾವೃತವಾಗಿವೆ. 2022ರಲ್ಲಿ ಬೇತ್ಕುಂಡಿಯಲ್ಲಿ ಬರಾಕ್ ನದಿಯ ಅಣೆಕಟ್ಟು ಒಡೆದ ಕಾರಣ ಸಿಲ್ಚಾರ್ ಅತ್ಯಂತ ಭೀಕರ ಪ್ರವಾಹವನ್ನು ಅನುಭವಿಸಿತು. ಅಣೆಕಟ್ಟಿನಿಂದ 1 ಕಿಲೋಮೀಟರ್ ದೂರದಲ್ಲಿರುವ ಸಿಲ್ಚಾರ್ ಪಟ್ಟಣದ ಶೇ. 90ರಷ್ಟು ಭಾಗವು ನೀರಿನಲ್ಲಿ ಮುಳುಗಿತ್ತು.

ಗುವಾಹಟಿ, ಜೂನ್ 2: ಜೂನ್ ತಿಂಗಳ ಮೊದಲ ದಿನವೇ ಅಸ್ಸಾಂನಲ್ಲಿ ಪ್ರವಾಹ ಉಂಟಾಗಿದೆ. ಅಸ್ಸಾಂನ (Assam Flood) ಎರಡನೇ ಅತಿದೊಡ್ಡ ನಗರವಾದ ಸಿಲ್ಚಾರ್ 24 ಗಂಟೆಗಳಲ್ಲಿ 415.8 ಮಿ.ಮೀ ಮಳೆಯನ್ನು ಕಂಡಿದೆ. ಇದು 1893ರ ನಂತರದ ಒಂದು ದಿನದಲ್ಲಿ ದಾಖಲಾಗಿರುವ ಅತ್ಯಧಿಕ ಮಳೆಯಾಗಿದೆ. ಜೂನ್ 1ರಂದು ಸಿಲ್ಚಾರ್ ನಲ್ಲಿ ಬಿದ್ದ ಮಳೆಯು 132 ವರ್ಷಗಳ ಹಳೆಯ ದಾಖಲೆಯಾದ 290.3 ಮಿ.ಮೀ ಮಳೆಯನ್ನು ಮುರಿದಿದೆ. 2022ರಲ್ಲಿ ಬೇತ್ಕುಂಡಿಯಲ್ಲಿ ಬರಾಕ್ ನದಿಯ ಅಣೆಕಟ್ಟು ಒಡೆದ ಕಾರಣ ಸಿಲ್ಚಾರ್ ಅತ್ಯಂತ ಭೀಕರ ಪ್ರವಾಹವನ್ನು ಅನುಭವಿಸಿತು. ಅಣೆಕಟ್ಟಿನಿಂದ 1 ಕಿಲೋಮೀಟರ್ ದೂರದಲ್ಲಿರುವ ಸಿಲ್ಚಾರ್ ಪಟ್ಟಣದ ಶೇ. 90ರಷ್ಟು ಭಾಗವು ನೀರಿನಲ್ಲಿ ಮುಳುಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Jun 02, 2025 05:14 PM