‘ಅವಳಿಗಾಗಿ ನಾಯಿ ತರ ಅಲೆದಾಡಿದ್ದೆ’: ಕಮಲಾಕರನ ಒಂದೊಂದೇ ರಂಗಿನಾಟ ಬಯಲು!

Edited By:

Updated on: Feb 06, 2026 | 10:42 AM

ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದು, ಅವರ ಅಕ್ರಮ ಸಂಬಂಧದ ರಹಸ್ಯಗಳು ಒಂದೊಂದಾಗಿ ಬಯಲಾಗುತ್ತಿವೆ. ಕಮಲಾಕರ್ ಸುಚಿತ್ರಾಳ ಹಿಂದೆ ಬಿದ್ದಿದ್ದ ಪರಿ, ಸುಚಿತ್ರಾಳ ಹಣದ ಆಸಕ್ತಿ ವೈರಲ್ ಆಡಿಯೋ ಮತ್ತು ಸಾಮಾಜಿಕ ಮಾಧ್ಯಮದ ಬಯೋ ಮೂಲಕ ಬಹಿರಂಗಗೊಂಡಿವೆ.

ಕಾರವಾರ, ಫೆಬ್ರವರಿ 6: ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಬಂಧನಕ್ಕೊಳಗಾಗಿದ್ದು, ಅವರ ಅಕ್ರಮ ಸಂಬಂಧದ ಕುರಿತು ಹಲವು ಸ್ಫೋಟಕ ವಿಚಾರಗಳು ಒಂದೊಂದಾಗಿ ಹೊರಬರುತ್ತಿವೆ. ಕಮಲಾಕರ್ ಸುಚಿತ್ರಾಳನ್ನು ಎಷ್ಟು ಹಚ್ಚಿಕೊಂಡಿದ್ದ ಎಂಬುದು ಆತನದ್ದು ಎನ್ನಲಾದ ವೈರಲ್ ಆಡಿಯೋದಿಂದ ಬಹಿರಂಗವಾಗಿದೆ. ‘ಅವಳೇ ನನ್ನ ಸರ್ವಸ್ವ, ಆಕೆಗಾಗಿ ನಾಯಿಯಂತೆ ಅಲೆದಿದ್ದೇನೆ’ ಎಂದು ಕಮಲಾಕರ್ ಭಟ್ ಹೇಳಿರುವುದು ವೈರಲ್ ಆಡಿಯೋದಲ್ಲಿದೆ. ಮತ್ತೊಂದೆಡೆ, ಸುಚಿತ್ರಾ ಸಹ ಇನ್‌ಸ್ಟಾಗ್ರಾಮ್ ಬಯೋದಲ್ಲಿ ‘ಪ್ರೀತಿ ಗೀತಿ ಇಲ್ಲ, ಇನ್ಮೇಲೆ ಓನ್ಲಿ ಮನಿ ಮನಿ’ ಎಂದು ಬರೆದುಕೊಂಡಿದ್ದು, ಆಕೆಯ ಹಣದ ಆಸಕ್ತಿಯನ್ನು ಬಹಿರಂಗಪಡಿಸಿದೆ. ಕಮಲಾಕರ್ ಸುಚಿತ್ರಾಗಾಗಿ ಶಿವಮೊಗ್ಗದಲ್ಲಿ ಬಾಡಿಗೆ ಮನೆ, ಎರಡು ಕಾರು ಮತ್ತು ಬುಲೆಟ್ ಬೈಕ್ ಕೊಡಿಸಿದ್ದು, ಅವಳಿಗೆ ಬುಲೆಟ್ ಚಲಾಯಿಸುವುದನ್ನು ಕಲಿಸಿದ್ದರು ಎಂದು ಮನೆ ಮಾಲೀಕರು ಹೇಳಿದ್ದಾರೆ. ಏತನ್ಮಧ್ಯೆ, ಕುಟುಂಬಸ್ಥರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 06, 2026 10:41 AM
Follow Us
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More