ಮೊದಲ ಮಗು ಹೆಣ್ಣಾದರೆ ಅದೃಷ್ಟಗಳ ಮಹಾಪೂರ!

Updated on: Jun 11, 2026 | 6:26 AM

ಮೊದಲ ಮಗು ಹೆಣ್ಣು ಮಗುವಾದರೆ ಅದು ಅದೃಷ್ಟದ ಸಂಕೇತವೆಂದು ನಮ್ಮ ಧರ್ಮಗ್ರಂಥಗಳು ಹೇಳುತ್ತವೆ. ಇದು ಮಹಾಲಕ್ಷ್ಮಿ ಸ್ವರೂಪವಾಗಿದ್ದು, ಕುಟುಂಬಕ್ಕೆ ಅದರಲ್ಲೂ ತಂದೆಗೆ ಅಪಾರ ಅದೃಷ್ಟವನ್ನು ತರುತ್ತದೆ. ಹೆಣ್ಣು ಮಗು ಪೂರ್ವಿಕರ ಆಶೀರ್ವಾದದೊಂದಿಗೆ ಬಂದು, ಮನೆಯಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಬಲವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ.

ಮೊದಲ ಮಗು ಹೆಣ್ಣು ಮಗುವಾದರೆ ಅದು ಅದೃಷ್ಟವೇ, ಅಶುಭವೇ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗಿದೆಯಾದರೂ, ಹಲವರ ಮನಸ್ಸಿನಲ್ಲಿ ಇನ್ನೂ ಇದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್​’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಅವರು ಹೇಳಿರುವಂತೆ, ನಮ್ಮ ಸನಾತನ ಸಂಸ್ಕೃತಿಯ ಪ್ರಕಾರ, ಮೊದಲ ಹೆಣ್ಣು ಮಗು ಜನಿಸುವುದು ಮನೆಗೆ ಮಹಾಲಕ್ಷ್ಮಿಯ ಆಗಮನಕ್ಕೆ ಸಮಾನ. ಇದು ಕೇವಲ ಶುಭ ಸಂಕೇತ ಮಾತ್ರವಲ್ಲದೆ, ಕುಟುಂಬಕ್ಕೆ, ವಿಶೇಷವಾಗಿ ತಂದೆಗೆ, ಅಪಾರ ಅದೃಷ್ಟವನ್ನು ತರುತ್ತದೆ.

ಮೊದಲ ಹೆಣ್ಣು ಮಗು ತಂದೆಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದು ನಂಬಲಾಗಿದೆ. ಈ ಮಗು ಪೂರ್ವಿಕರ ಅನುಗ್ರಹವನ್ನು ಹೊತ್ತು ತರುತ್ತದೆ. ಮನೆಯಲ್ಲಿ ಚಂದ್ರ ಮತ್ತು ಶುಕ್ರ ಗ್ರಹಗಳ ಬಲವನ್ನು ಹೆಚ್ಚಿಸುತ್ತದೆ. ಚಂದ್ರನು ಮನಃಕಾರಕನಾದರೆ, ಶುಕ್ರನು ಸೌಂದರ್ಯ, ಐಷಾರಾಮಿ ಮತ್ತು ಸಮೃದ್ಧಿಯ ಪ್ರತೀಕ. ಹೆಣ್ಣು ಮಗು ಬೆಳೆದಂತೆಲ್ಲಾ ಕುಟುಂಬದಲ್ಲಿ ಸಂಪತ್ತು ವೃದ್ಧಿಯಾಗಿ, ಸುಖ ಸಂತೋಷಗಳು ತುಂಬುತ್ತವೆ. ಆದ್ದರಿಂದ, ಮೊದಲ ಹೆಣ್ಣು ಮಗು ಅದೃಷ್ಟದ ಸಂಕೇತವೇ ಹೊರತು ಯಾವುದೇ ಅಶುಭವಲ್ಲ ಎಂದಿದ್ದಾರೆ ಗುರೂಜಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us