ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಸುಲಭದ ವಿಧಾನ!
ಕಷ್ಟಕಾಲದಲ್ಲಿ ಅಡವಿಟ್ಟ ಚಿನ್ನಾಭರಣಗಳನ್ನು ಮರಳಿ ಪಡೆಯುವುದು ಸವಾಲಾಗಿ ಪರಿಣಮಿಸುತ್ತದೆ. ಶುಕ್ರವಾರದ ಬ್ರಾಹ್ಮೀ ಮುಹೂರ್ತದಲ್ಲಿ ಹಳದಿ ಬಟ್ಟೆ, ಅರಿಶಿನ ಕೊಂಬು, ಒಂದು ರೂಪಾಯಿ ನಾಣ್ಯ ಮತ್ತು ಬಿಳಿ ಸಾಸಿವೆಯನ್ನು ಬಳಸಿ ಮಾಡುವ ಈ ವಿಶಿಷ್ಟ ಪೂಜೆಯು ಆರ್ಥಿಕ ಸಂಕಷ್ಟಗಳನ್ನು ನಿವಾರಿಸಿ, ಅಡವಿಟ್ಟ ಆಭರಣಗಳನ್ನು ಯಶಸ್ವಿಯಾಗಿ ಬಿಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಜೀವನದಲ್ಲಿ ಕಷ್ಟಗಳು ಬಂದಾಗ ಆಭರಣಗಳನ್ನು ಅಡವಿಡುವುದು ಸಾಮಾನ್ಯ. ಆದರೆ, ಇಟ್ಟ ಚಿನ್ನಾಭರಣಗಳನ್ನು ಮರಳಿ ಪಡೆಯುವುದು ಹಲವರಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಶಾಸ್ತ್ರಗಳ ಪ್ರಕಾರ ಒಂದು ವಿಶಿಷ್ಟ ವಿಧಾನವನ್ನು ಅನುಸರಿಸುವ ಮೂಲಕ ಅಡವಿಟ್ಟ ಆಭರಣಗಳನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಶುಕ್ರವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ (ಬೆಳಗ್ಗೆ 6:30ರ ಒಳಗೆ) ಸ್ನಾನ ಮಾಡಿ ಶುಚಿಯಾಗಬೇಕು. ನಂತರ, ಹಳದಿ ಬಟ್ಟೆಯೊಂದನ್ನು ತೆಗೆದುಕೊಂಡು ಅದರಲ್ಲಿ ಎರಡು ಅರಿಶಿನ ಕೊಂಬುಗಳು, ಒಂದು ರೂಪಾಯಿ ನಾಣ್ಯ ಮತ್ತು ಸ್ವಲ್ಪ ಬಿಳಿ ಸಾಸಿವೆಯನ್ನು ಇಟ್ಟು ಗಂಟು ಕಟ್ಟಬೇಕು. ಈ ಗಂಟನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಇಷ್ಟದೇವರು ಅಥವಾ ಕುಲದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ನಂತರ ಅಡವಿಟ್ಟ ಆಭರಣಗಳ ರಸೀದಿಯ ಮೇಲೆ ಈ ಮುಡುಪನ್ನು ಇಟ್ಟು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತು, 90 ದಿನಗಳೊಳಗೆ ಆಭರಣಗಳನ್ನು ಬಿಡಿಸಿಕೊಳ್ಳುವ ಶಕ್ತಿಯನ್ನು ಕರುಣಿಸುವಂತೆ ಬೇಡಿಕೊಳ್ಳಬೇಕು.
ಈ ಮುಡುಪನ್ನು ಬೀರು ಅಥವಾ ದೇವರ ಹತ್ತಿರ ಇಡಬೇಕು. ಪ್ರತಿ ಶುಕ್ರವಾರವೂ ಅದೇ ರೀತಿ ಪ್ರಾರ್ಥನೆ ಮಾಡಬೇಕು. ಇದನ್ನು ಮೂರು ಅಥವಾ ಆರು ಶುಕ್ರವಾರಗಳ ಕಾಲ ಮಾಡಿದರೆ, ಖಂಡಿತವಾಗಿಯೂ ಅಡವಿಟ್ಟ ಚಿನ್ನಾಭರಣಗಳನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಕುಲದೇವರು ಗೊತ್ತಿಲ್ಲದವರು ಶ್ರೀ ವಿಷ್ಣು ಅಥವಾ ಕಲಿಯುಗ ವೆಂಕಟನಾಥನನ್ನು ನೆನೆದು ಓಂ ನಮೋ ವೆಂಕಟೇಶಾಯ ಎಂಬ ಮಂತ್ರವನ್ನು ಜಪಿಸಬಹುದು. ಶ್ರದ್ಧೆ ಮತ್ತು ನಂಬಿಕೆಯಿಂದ ಮಾಡಿದಾಗ ಖಂಡಿತ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್

