Glass Bridge Tragedy: ಇಂಡೋನೇಷ್ಯಾದಲ್ಲಿ 30 ಅಡಿ ಎತ್ತರದ ಗ್ಲಾಸ್ ಬ್ರಿಡ್ಜ್ ಒಡೆದು ಟೂರ್​​ ಗೈಡ್​ ಸಾವು, ಇಬ್ಬರಿಗೆ ಗಾಯ

ಸಾಧು ಶ್ರೀನಾಥ್​

Updated on: Oct 28, 2023 | 4:22 PM

ಪ್ರವಾಸಿಗರು ಗಾಜಿನ ಸೇತುವೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಗಾಜಿನ ಸೇತುವೆಯ ಮೇಲಿನ ಎರಡು ದೊಡ್ಡ ಗಾಜುಗಳು ಮುರಿದು ಬಿದ್ದಿವೆ. ಪರಿಣಾಮ ಇಬ್ಬರು 30 ಅಡಿ ಎತ್ತರದಿಂದ ಬಿದ್ದಿದ್ದಾರೆ. ಇಂಡೋನೇಷ್ಯಾದ ಪ್ರಸಿದ್ಧ ಗಾಜಿನ ಸೇತುವೆಯ ಮೇಲೆ ಫ್ಯಾನ್ಸಿ ವಾಸ್ತುಶಿಲ್ಪದಿಂದ ಮಾಡಲ್ಪಟ್ಟ ಸೇತುವೆ ಮೇಲೆ ಈ ಅಪಘಾತ ಸಂಭವಿಸಿದೆ.

ಅಲಂಕಾರಿಕ ವಾಸ್ತುಶಿಲ್ಪದೊಂದಿಗೆ ಭವ್ಯವಾಗಿ ನಿರ್ಮಿಸಲಾದ ಗಾಜಿನ ಸೇತುವೆಯು ಛಿದ್ರಗೊಂಡಿದೆ. ಅದರ ಮೇಲೆ ನಡೆದುಕೊಂಡು ಹೋಗುತ್ತಿದ್ದ ಜನರು ಏಕಾಏಕಿ 30 ಅಡಿ ಕೆಳಗೆ ಬಿದ್ದಂತಹ ಅನುಭವಕ್ಕೆ ತುತ್ತಾಗಿದ್ದಾರೆ. ಅದರಲ್ಲಿ ಒಬ್ಬ ಟೂರ್​​ ಗೈಡ್​ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. 11 ಪ್ರವಾಸಿಗರು ಗಾಜಿನ ಸೇತುವೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಗಾಜಿನ ಸೇತುವೆಯ ಮೇಲಿನ ಎರಡು ದೊಡ್ಡ ಜಾಗುಗಳು ಮುರಿದು ಬಿದ್ದಿವೆ. ಪರಿಣಾಮ ಇಬ್ಬರು 30 ಅಡಿ ಎತ್ತರದಿಂದ ಬಿದ್ದಿದ್ದಾರೆ.

ಅಷ್ಟೊಂದು ಎತ್ತರದಿಂದ ಬಿದ್ದವರಲ್ಲಿ ಒಬ್ಬರು ಗಾಯಗೊಂಡಿದ್ದು, ಮತ್ತೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂಡೋನೇಷ್ಯಾದ ಪ್ರಸಿದ್ಧ ಗಾಜಿನ ಸೇತುವೆಯ ಮೇಲೆ ಫ್ಯಾನ್ಸಿ ವಾಸ್ತುಶಿಲ್ಪದಿಂದ ಮಾಡಲ್ಪಟ್ಟ ಸೇತುವೆ ಮೇಲೆ ಅಪಘಾತ ಸಂಭವಿಸಿದೆ. ಇದೇ ವೇಳೆ ಇನ್ನಿಬ್ಬರು ಪ್ರವಾಸಿಗರು ಮಾರ್ಗದರ್ಶಕರ ಹಗ್ಗದ ಸಹಾಯದಿಂದ ಪ್ರಾಣ ಉಳಿಸಿಕೊಂಡರು. ಉಳಿದವರು ತಮ್ಮನ್ನು ತಾವು ನಿಯಂತ್ರಿಸಿಕೊಂಡು ಸುರಕ್ಷಿತವಾಗಿ ಕೆಳಗಿಳಿದುಬಂದಿದ್ದಾರೆ.

ಇದನ್ನೂ ಓದಿ: ಇಂದೇ ಹೊರಡಿ ಮಡಿಕೇರಿಗೆ! ಗ್ಲಾಸ್ ಬ್ರಿಡ್ಜ್ ಮೇಲಿಂದ ಬಗ್ಗಿ ನೋಡಿದರೆ ಎದೆ ಝಲ್ ಝಲ್​! ಇಲ್ಲಿದೆ ಒಂದು ಝಲಕ್​!

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. ವಿಡಿಯೋ ದೃಶ್ಯ ನೋಡಲು ತುಂಬಾ ಭಯಾನಕವಾಗಿವೆ.

Published on: Oct 28, 2023 04:19 PM
Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು