ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ

Edited By:

Updated on: Mar 21, 2025 | 5:21 PM

ದಾವಣಗೆರೆ ಜಿಲ್ಲಾ ನ್ಯಾಯಾಧೀಶರ ಮನೆಗೆ ಕಳ್ಳತನ ಮಾಡಲು ಐದು ಜನರ ತಂಡ ಪ್ರಯತ್ನಿಸಿ ವಿಫಲವಾಗಿದೆ. ಕುಂದುವಾಡದ ತುಂಗಭದ್ರಾ ಬಡಾವಣೆಯಲ್ಲಿ ಘಟನೆ ನಡೆದಿದೆ. ಜಡ್ಜ್ ಮನೆಗೆ ಹಿಂದಿನ ಬಾಗಿಲಿನಿಂದ ಕಳ್ಳತನಕ್ಕೆ ಕಳ್ಳರು ಬಂದಿದ್ದು, ಈ ವೇಳೆ ಜಡ್ಜ್ ಮನೆಗೆ ಭದ್ರತೆ ನೀಡಿದ್ದ ಪೊಲೀಸರು ಕಂಡು ಓಡಿ ಹೋಗಿದ್ದಾರೆ.

ದಾವಣಗೆರೆ, ಮಾರ್ಚ್​ 21: ದಾವಣಗೆರೆ ಜಿಲ್ಲಾ ನ್ಯಾಯಾಧೀಶರ ಮನೆಗೆ ಕಳ್ಳತನ (theft) ಮಾಡಲು ಐದು ಜನರ ತಂಡ ಪ್ರಯತ್ನಿಸಿ ವಿಫಲವಾಗಿದೆ. ಕುಂದುವಾಡದ ತುಂಗಭದ್ರಾ ಬಡಾವಣೆಯಲ್ಲಿ ಘಟನೆ ನಡೆದಿದೆ. ಜಡ್ಜ್ ಮನೆಗೆ ಹಿಂದಿನ ಬಾಗಿಲಿನಿಂದ ಕಳ್ಳತನಕ್ಕೆ ಕಳ್ಳರು ಬಂದಿದ್ದು, ಈ ವೇಳೆ ಜಡ್ಜ್ ಮನೆಗೆ ಭದ್ರತೆ ನೀಡಿದ್ದ ಪೊಲೀಸರು ಕಂಡು ಓಡಿ ಹೋಗಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಕ್ಕೂ ಒಂದು ವಾರದ ಮೊದಲು, ಅದೇ ಪ್ರದೇಶದಲ್ಲಿ ಮೂರು ಮನೆಗಳಲ್ಲಿ ಕಳ್ಳತನ ನಡೆದಿತ್ತು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.