Bengaluru: ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ; ಪ್ರಯಾಣಿಕರು ಬದುಕಿದ್ದೇ ಪವಾಡ!

Edited By:

Updated on: Jan 11, 2026 | 11:21 AM

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನ ನಾಲ್ಕನೇ ಕ್ರಾಸ್​​ನಲ್ಲಿ ರಸ್ತೆಗುಂಡಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಆಟೋ ಪಲ್ಟಿಯಾಗಿದೆ. ಚಾಲಕ ಮತ್ತು ಪ್ರಯಾಣಿಕ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರು, ಜನವರಿ 11: ರಸ್ತೆಗುಂಡಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಆಟೋ ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನ ನಾಲ್ಕನೇ ಕ್ರಾಸ್​​ನಲ್ಲಿ ನಡೆದಿದೆ. ಪಲ್ಟಿಯಾದ ರಭಸಕ್ಕೆ ಆಟೋದಿಂದ‌ ಪ್ರಯಾಣಿಕ ಹಾರಿ ಬಿದ್ದಿದ್ದರೆ, ಗ್ಲಾಸ್​​ ಒಡೆದು ಚಾಲಕ ಹೊರ ಬಂದಿದ್ದಾನೆ. ನೀರು ಲೀಕೇಜ್ ಆಗಿ ರಸ್ತೆಯಲ್ಲಿ ಗುಂಡಿ ಆಗಿದ್ದರೂ ಅದರ ಸುತ್ತ ಯಾವುದೇ ಬ್ಯಾರಿಕೇಡ್​​ ಹಾಕದಿರುವುದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.