ಬೆಂಗಳೂರು: ವಿದೇಶಿ ಪ್ರಜೆಗಳಿಗೆ ಆಟೋ ಚಾಲಕನಿಂದ ಮಹಾ ಮೋಸ; ವಿಡಿಯೋ ಇಲ್ಲಿದೆ

| Updated By: Rakesh Nayak Manchi

Updated on: Sep 05, 2023 | 3:56 PM

ಬೆಂಗಳೂರಿನಲ್ಲಿ ಕೆಲವು ಆಟೋ ಚಾಲಕರು ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಮೊದಲ ಬಾರಿ ಬೆಂಗಳೂರಿಗೆ ಬಂದ ವ್ಯಕ್ತಿಗಳಿಂದ ಭಾರೀ ಪ್ರಮಾಣದಲ್ಲಿ ಬಾಡಿಗೆ ಕೇಳುವುದನ್ನು ಸಾಮಾನ್ಯವಾಗಿ ನೋಡಬಹುದು. ಇದೀಗ, ಬೆಂಗಳೂರು ಅರಮನೆ ವೀಕ್ಷಣೆಗೆ ಬಂದ ವಿದೇಶಿ ಪ್ರಜೆಗಳಿಗೆ ಆಟೋ ಚಾಲಕನೊಬ್ಬ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.

ಬೆಂಗಳೂರು, ಸೆ.5: ನಗರದಲ್ಲಿರುವ ಅರಮನೆ (Bengaluru Palace) ವೀಕ್ಷಣೆಗೆ ಬಂದಿದ್ದ ವಿದೇಶಿ ಪ್ರಜೆಗಳಿಗೆ ಆಟೋ ಚಾಲಕರೊಬ್ಬರು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿದೇಶಿ ಪ್ರಜೆಗಳ ಗಮನ ಬೇರೆಡೆ ಸೆಳೆಯುತ್ತಲೇ 500 ರೂ. ಬಾಡಿಗೆ ಪಡೆದು 100 ರೂ. ಕೊಟ್ಟಿದ್ದೀರಿ ಎಂದು ಹೇಳಿ ಮತ್ತಷ್ಟು ಹಣ ವಸೂಲಿ ಮಾಡಿದ್ದಾರೆ. ಇದರ ವಿಡಿಯೋವನ್ನು ಮೊಹಮ್ಮದ್ ಫಿಜ್ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಆಟೋದಲ್ಲಿ ಹೋಗದಂತೆ ಸೂಚಿಸಲಾಗಿದೆ. ವಿಡಿಯೋದಲ್ಲಿ ಇರುವಂತೆ, ಪ್ರವಾಸಿಗರಿಂದ 500 ರೂ. ಪಡೆದು ಅದನ್ನು ಶರ್ಟ್​​ ಕೈ ತೋಳಿನ ಒಳಗೆ ಅಡಗಿಸಿಟ್ಟು ಮತ್ತೊಂದು ಕೈಯಲ್ಲಿದ್ದ 100 ರೂ. ತೋರಿಸಿ ಮತ್ತಷ್ಟು ಹಣ ಕೇಳುವುದನ್ನು ನೋಡಬಹುದು. ಭಾರತದ ಕರೆನ್ಸಿ ಬಗ್ಗೆ ಅಷ್ಟಾಗಿ ಅರವಿಲ್ಲದ ವಿದೇಶಿ ಪ್ರಜೆ, ತಾನು 100 ರೂ. ಕೊಟ್ಟಿರಬಹುದು ಎಂದು ತಿಳಿದು ಮತ್ತೆ ಹಣ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on