ಬೆಟ್ಟದ ದೇವರಿಗೆ ದೇಹದ ಮೇಲಿನ ಚೇಳುಗಳ ಅರ್ಪಣೆ.. ಕರ್ನೂಲ್ ಜಿಲ್ಲೆಯಲ್ಲಿ ಇದೆ ಈ ವಿಚಿತ್ರ ಪದ್ಧತಿ!
Kurnool District: ಈ ಒಂದು ದಿನ ಅವರಿಗೆ ಏನೂ ಅಗೋಲ್ಲ ಎಂಬ ನಂಬಿಕೆಯಿದೆ. ಚೇಳು ಕಚ್ಚಿದರೆ ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮಾಡಿದರೆ ಸಾಕು ಏನೂ ಆಗುವುದಿಲ್ಲ ಎನ್ನುತ್ತಾರೆ ಭಕ್ತರು. ಹೀಗೆ ಆಚರಣೆ ಮಾಡಿದಾಗ ಶ್ರಾವಣದ ಮೂರನೇ ಸೋಮವಾರ ಅಥವಾ ಅದರ ಹಿಂದಿನ ದಿನ ಅಥವಾ ನಂತರದ ದಿನದಲ್ಲಿ ಮಳೆಯಾಗುತ್ತದೆ ಎಂದು ಭಕ್ತರು ಹೇಳುತ್ತಾರೆ.
ಆಂಧ್ರದ ಕರ್ನೂಲು ಜಿಲ್ಲೆ ಮತ್ತು ಸುತ್ತಮುತ್ತಲಿನ ಜನರು ಚೇಳುಗಳನ್ನು ತಮ್ಮ ದೇಹದ ಭಾಗಗಳಲ್ಲಿ ಹರಿದಾಡಿಸಿಕೊಂಡು ಕುಟುಕಿಸಿಕೊಳ್ಳುತ್ತಾರೆ. ಶ್ರಾವಣ ಮಾಸದ ಮೂರನೇ ಸೋಮವಾರದಂದು ಕರ್ನೂಲು ಜಿಲ್ಲೆಯ ಕೊಡುಮೂರು ಬೆಟ್ಟದಲ್ಲಿರುವ ಬೆಟ್ಟದ ದೇವರಿಗೆ ಚೇಳುಗಳ ಮೂಲಕ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಈ ಚೇಳುಗಳನ್ನು ನೈವೇದ್ಯವಾಗಿ ಅರ್ಪಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ ಭಕ್ತರು ಚೇಳುಗಳನ್ನು ತಮ್ಮ ಕೈ, ತಲೆ, ಮುಖ ಮತ್ತು ತಮ್ಮ ನಾಲಿಗೆಯ ಮೇಲೆಯೂ ಹಾಕಿಕೊಳ್ಳುತ್ತಾರೆ. ಈ ಒಂದು ದಿನ ಅವರಿಗೆ ಏನೂ ಅಗೋಲ್ಲ ಎಂಬ ನಂಬಿಕೆಯಿದೆ. ಚೇಳು ಕಚ್ಚಿದರೆ ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮಾಡಿದರೆ ಸಾಕು ಏನೂ ಆಗುವುದಿಲ್ಲ ಎನ್ನುತ್ತಾರೆ ಭಕ್ತರು. ಹೀಗೆ ಆಚರಣೆ ಮಾಡಿದಾಗ ಶ್ರಾವಣದ ಮೂರನೇ ಸೋಮವಾರ ಅಥವಾ ಅದರ ಹಿಂದಿನ ದಿನ ಅಥವಾ ನಂತರದ ದಿನದಲ್ಲಿ ಮಳೆಯಾಗುತ್ತದೆ ಎಂದು ಭಕ್ತರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Tue, 5 September 23