100 ರೂಪಾಯಿ ಬಾಡಿಗೆಗೆ 6000 ತೆತ್ತ ಆಟೋ ಚಾಲಕ; ವಿಡಿಯೋ ನೋಡಿ
ಆಟೋ ಚಾಲಕ ವಿನೋದ್ 6000 ರೂ. ಹಣ ಸಾಲ ಮಾಡಿ ತನ್ನ ಆಟೋವನ್ನು ಕ್ರೇನ್ ಮೂಲಕ ಲಿಫ್ಟ್ ಮಾಡಿಸಿಕೊಂಡಿದ್ದಾರೆ. ಸೇತುವೆ ಕುಸಿದಿದ್ದಕ್ಕೆ ಕಳಪೆ ಕಾಮಗಾರಿಯೇ ಕಾರಣ. ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು: 100 ರೂಪಾಯಿ ಆಟೋ ಬಾಡಿಗೆಗೆ ಬಂದಿದ್ದ ಆಟೋ ಚಾಲಕ ತನ್ನ ಆಟೋವನ್ನು ರಕ್ಷಿಸಿಕೊಳ್ಳಲು 6000 ಹಣವನ್ನು ದಂಡವಾಗಿ ತೆತ್ತ ಕರುಣಾಜನಕ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಜಿಲ್ಲಾಡಳಿತ, ಮುಕ್ತ ವಿಶ್ವವಿದ್ಯಾನಿಲಯಕ್ಕೆ ಪರಿಪರಿಯಾಗಿ ಬೇಡಿಕೊಂಡರು ಯಾರೂ ಸಹಾಯ ಮಾಡದ ಹಿನ್ನೆಲೆ ಕೊನೆಗೆ ತನ್ನ ಆಟೋವನ್ನು ರಕ್ಷಿಸಲು ತಾನೇ 6000 ಸಾವಿರ ಸಾಲ ಮಾಡಿ ರಕ್ಷಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಮೊನ್ನೆ ರಾತ್ರಿ ಭಾರೀ ಮಳೆ ಸುರಿದಿತ್ತು. ಭಾರೀ ಮಳೆಯಿಂದ ನಗರದ ಮಧುವನ ಲೇಔಟ್‍ನಲ್ಲಿರುವ ಮುಕ್ತ ವಿಶ್ವವಿದ್ಯಾಲಯದ ಗೇಟ್ ಬಳಿಯ ಸೇತುವೆ ಕುಸಿದಿತ್ತು. ಇದರಿಂದ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 40 ವಿದ್ಯಾರ್ಥಿಗಳು ಹೊರಬರಲು ಜಾಗವಿಲ್ಲದೇ ಅಲ್ಲೇ ಲಾಕ್ ಆಗಿದ್ದರು. ವಿಷಯ ತಿಳಿದ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿತ್ತು. ಆದರೆ, ವಿದ್ಯಾರ್ಥಿಗಳನ್ನು ಕರೆತಂದಿದ್ದ ಆಟೋ ಚಾಲಕ ಕಚೇರಿ ಬಳಿಯೇ ಲಾಕ್ ಆಗಿದ್ದರು. ಸೇತುವೆ ದೊಡ್ಡ ಪ್ರಮಾಣದಲ್ಲಿ ಕುಸಿದ ಕಾರಣ ಆಟೋ ಹೊರಬರಲು ಜಾಗವೇ ಇರಲಿಲ್ಲ. ಈ ವೇಳೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಆಟೋ ಚಾಲಕನಿಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ, ಯಾರೂ ಸಹಾಯ ಮಾಡಲಿಲ್ಲ.
ವಿದ್ಯಾರ್ಥಿಗಳನ್ನು ರಕ್ಷಿಸಿದ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಯಾವುದೇ ರೀತಿಯ ಸಹಾಯ ಮಾಡಲಿಲ್ಲ. ಕೊನೆಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ನಿಮ್ಮ ಹಣದಲ್ಲಿ ಆಟೋವನ್ನು ಲಿಫ್ಟ್ ಮಾಡಿಕೊಳ್ಳುವಂತೆ ಸೂಚಿಸಿದರು. ಹೀಗಾಗಿ ಸೇತುವೆ ನಿರ್ಮಾಣಗೊಳ್ಳಲು ತಿಂಗಳುಗಳೇ ಬೇಕು. ಅಲ್ಲಿವರೆಗೆ ಆಟೋ ನಿಂತರೆ ಹಾಳಾಗುತ್ತದೆ. ಜೊತೆಗೆ ಜೀವನ ಹೇಗೆಂದು ಆಟೋ ಚಾಲಕ ವಿನೋದ್ 6000 ರೂ. ಹಣ ಸಾಲ ಮಾಡಿ ತನ್ನ ಆಟೋವನ್ನು ಕ್ರೇನ್ ಮೂಲಕ ಲಿಫ್ಟ್ ಮಾಡಿಸಿಕೊಂಡಿದ್ದಾರೆ. ಸೇತುವೆ ಕುಸಿದಿದ್ದಕ್ಕೆ ಕಳಪೆ ಕಾಮಗಾರಿಯೇ ಕಾರಣ. ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 100 ರೂಪಾಯಿಗೆ ಬಾಡಿಗೆಗೆ ಬಂದು ಆಟೋ ಚಾಲಕ 6000 ಕಳೆದುಕೊಂಡು ಸಾಲಗಾರನಾದಂತಾಗಿದೆ.
ಇದನ್ನೂ ಓದಿ:
ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕ ಮೈಸೂರಿನ ವಸತಿ ಗೃಹದಲ್ಲಿ ನೇಣಿಗೆ ಶರಣು
ಸೇಡು ತೀರಿಸಿಕೊಳ್ಳಲು ಮತ್ತೆ ಬಂದ ಮಂಗ; 22 ಕಿ. ಮೀ ದೂರ ಬಿಟ್ಟು ಬಂದರೂ ಆಟೋ ಚಾಲಕನ ಮೇಲಿನ ದ್ವೇಷ ತೀರಿಲ್ಲ