AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಮಾಡುವ ಬದಲು ಸರ್ಕಾರ ಬಡವರನ್ನು ಗುಂಡಿಟ್ಟು ಕೊಲ್ಲುವುದು ಒಳಿತು ಎಂದರೊಬ್ಬ ಆಟೋ ಡ್ರೈವರ್!

ಲಾಕ್​ಡೌನ್​ ಮಾಡುವ ಬದಲು ಸರ್ಕಾರ ಬಡವರನ್ನು ಗುಂಡಿಟ್ಟು ಕೊಲ್ಲುವುದು ಒಳಿತು ಎಂದರೊಬ್ಬ ಆಟೋ ಡ್ರೈವರ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Jan 07, 2022 | 7:50 PM

Share

ವೀಕೆಂಡ್ ಲಾಕ್ಡೌನ್ ಯಾವ ಆಧಾರದಲ್ಲಿ ಸರ್ಕಾರ ಮಾಡುತ್ತಿದೆ? ಇದರಿಂದ ಕೇವಲ ಬಡವರು ಮಾತ್ರ ತೊಂದರೆಗೊಳಗಾಗುತ್ತಾರೆ. ಲಾಕ್​ಡೌನ್ ಮಾಡುವ ಬದಲು ಸರ್ಕಾರ ಬಡವರನ್ನು ಗುಂಡಿಟ್ಟು ಕೊಲ್ಲುವುದು ಲೇಸು ಎಂದು ಅವರು ಹತಾಷೆಯಿಂದ ಹೇಳಿದರು.

ವಾರಾಂತ್ಯದ ಲಾಕ್​ಡೌನ್ ಬಿಸಿ ಎಲ್ಲರಿಗೂ ತಾಕುತ್ತಿದೆ. ತಿಂಗಳು ಮುಗಿಯುತ್ತಿದ್ದಂತೆ ಸಂಬಳ ಪಡೆಯುವ ವರ್ಗಕ್ಕೆ ಲಾಕ್ ಡೌನ್ನಿಂದ ತೊಂದರೆಯಾಗಲಾರದು ಅದರೆ, ದಿನಗೂಲಿ ಮಾಡುವವರಿಗೆ, ಆಟೋ ಚಾಲಕರಿಗೆ ವೀಕೆಂಡ್ ಲಾಕ್​ಡೌನ್ ಆಗಲೀ ಅಥವಾ ವಾರವಿಡೀ ಲಾಕ್​ಡೌನ್; ತೀವ್ರ ಸ್ವರೂಪದ ಸಂಕಷ್ಟವನ್ನು ತಂದೊಡ್ಡುತ್ತವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾರಾಂತ್ಯದ ಲಾಕ್ ಡೌನ್ ಘೋಷಿಸಿದ್ದು ಅದು ಶುಕ್ರವಾರ ರಾತ್ರಿಯಿಂದ ಜಾರಿಗೆ ಬರುತ್ತದೆ. ಅಂದರೆ ಶನಿವಾರ ಮತ್ತು ರವಿವಾರ ಕೆಲವೊಂದು ಸೇವೆಗಳನ್ನು ಹೊರತುಪಡಿಸಿ ಉಳಿದಿದ್ದೆಲ್ಲ ಬಂದ್. ಶನಿವಾರ ಮತ್ತು ರವಿವಾರ ಆಟೋ ಮತ್ತು ಕ್ಯಾಬ್ಗಳು ರಸ್ತೆಗಿಳಿಯುವುದಿಲ್ಲ.

ಈ ಹಿನ್ನೆಲೆಯಲ್ಲಿ ಟಿವಿ9 ವರದಿಗಾರ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದ ಬಳಿ ಒಬ್ಬ ಆಟೋ ಚಾಲಕನನ್ನು ಮಾತಾಡಿಸಿ ಲಾಕ್ ಡೌನ್ ನಿಂದ ಅವರಿಗಾಗುವ ತೊಂದರೆಗಳ ಬಗ್ಗೆ ಕೇಳಿದರು. ಆಟೋ ಚಾಲಕ ಆಡಿದ ಮಾತುಗಳಲ್ಲಿ ಸತ್ಯಾಂಶ ಅಡಗಿದೆ ಅಂತ ನಿಮಗೂ ಗೊತ್ತಾಗುತ್ತದೆ.

ಕಳೆದ ಎರಡು ವರ್ಷಗಳಿಂದ ಪದೇಪದೆ ಆಗುತ್ತಿರುವ ಲಾಕ್​ಡೌನ್ ನಿಂದ ಬದುಕು ದುಸ್ತರಗೊಂಡಿದೆ, ಮಕ್ಕಳ ಸ್ಕೂಲ್ ಫೀ ಕಟ್ಟುವುದು ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ ತಮ್ಮ ಪಾಲಿಗೆ ಶಾಪವಾಗಿ ಪರಿಣಮಿಸಿದೆ, ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದ ಅವರು ರಸ್ತೆ ಮೇಲೆ ಆಟೋಗಳು ಓಡಾಡುವುದರಿಂದ ಕೋವಿಡ್-19 ಮಹಾಮಾರಿ ಹಬ್ಬುವುದಿಲ್ಲ, ಅದನ್ನು ಜನ ವಿದೇಶಗಳಿಂದ ಹೊತ್ತು ತರುತ್ತಿದ್ದಾರೆ, ಬೇರೆ ದೇಶಗಳಿಂದ ಬರುವ ವಿಮಾನಗಳನ್ನು ರದ್ದು ಮಾಡುವ ಕೆಲಸವನ್ನು ಸರ್ಕಾರ ಮೊದಲು ಮಾಡಬೇಕು ಎಂದರು.

ಕೊರೋನಾ ಕೇವಲ ಶನಿವಾರ ಮತ್ತು ರವಿವಾರ ಮಾತ್ರ ಹಬ್ಬುತ್ತದೆ, ಉಳಿದ ದಿನಗಳಲ್ಲಿ ಬೆಚ್ಚಗೆ ಮಲಗುತ್ತದೆಯೇ ಎಂದು ಆಟೋ ಚಾಲಕ ಕೇಳಿದರು. ವೀಕೆಂಡ್ ಲಾಕ್ಡೌನ್ ಯಾವ ಆಧಾರದಲ್ಲಿ ಸರ್ಕಾರ ಮಾಡುತ್ತಿದೆ? ಇದರಿಂದ ಕೇವಲ ಬಡವರು ಮಾತ್ರ ತೊಂದರೆಗೊಳಗಾಗುತ್ತಾರೆ. ಲಾಕ್​ಡೌನ್ ಮಾಡುವ ಬದಲು ಸರ್ಕಾರ ಬಡವರನ್ನು ಗುಂಡಿಟ್ಟು ಕೊಲ್ಲುವುದು ಲೇಸು ಎಂದು ಅವರು ಹತಾಷೆಯಿಂದ ಹೇಳಿದರು.

ಇದನ್ನೂ ಓದಿ:  Samantha: ‘ಹೂ ಅಂತೀಯಾ ಮಾವ..’ ಡ್ಯಾನ್ಸ್​ ಹಿಂದಿನ ಕಷ್ಟವನ್ನು ವಿಡಿಯೋ ಮೂಲಕ ವಿವರಿಸಿದ ಸಮಂತಾ  

Published on: Jan 07, 2022 07:50 PM