ಪ್ರಧಾನಿ ಮೋದಿಯವರ ದೀರ್ಘಾಯುಷ್ಯಕ್ಕಾಗಿ ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಮೃತ್ಯುಂಜಯ ಜಪ, ಹೋಮ-ಹವನ

ಪ್ರಧಾನಿ ಮೋದಿಯವರ ದೀರ್ಘಾಯುಷ್ಯಕ್ಕಾಗಿ ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಮೃತ್ಯುಂಜಯ ಜಪ, ಹೋಮ-ಹವನ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 07, 2022 | 10:18 PM

ಹುಬ್ಬಳ್ಳಿ-ಧಾರವಾಡ ಕೇಂದ್ರ ಮಹಿಳಾ ಮೋರ್ಚಾ ಮತ್ತು ಮಹಾನಗರ ಪಾಲಿಕೆ ಸದಸ್ಯರು ಕೂಡ ಶುಕ್ರವಾರ ಹುಬ್ಬಳ್ಳಿ ಜಯನಗರದ ಈಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ, ಮತ್ತು ಹೋಮವನ್ನು ಆಯೋಜಿಸಿದ್ದರು

ಬುಧವಾರದಂದು ಪಂಜಾಬ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಫಿರೋಜ್ ಪುರ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೋಗುವ ಸಮಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಅವರ ಕಾನ್ವಾಯ್ ಅನ್ನು ಹುಸ್ಸೇನಿವಾಲಾ ಬಳಿಯ ಮೇಲ್ಸೇತುವೆ ಮೇಲೆ ತಡೆಹಿಡಿದಿದ್ದು ಎಲ್ಲೆಡೆ ಚರ್ಚೆಯಾಗುತ್ತಿರುವ ವಿಷಯ. ಫಿರೋಜ್​ಪುರ ತಲುಪುವ ಮೊದಲು ಪ್ರಧಾನಿ ಮೋದಿ ಅವರು ಹುಸ್ಸೇನಿವಾಲಾನಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕಿತ್ತು. ಆದರೆ, ರಸ್ತೆಯನ್ನು ತಡೆದ ಪ್ರತಿಭಟನೆಕಾರರನ್ನು ತೆರವುಗೊಳಿಸಲು ಪೊಲೀಸರು ವಿಫಲಗೊಂಡಿದ್ದರಿಂದ ಪ್ರಧಾನಿ ಮೋದಿ ಅಲ್ಲಿಂದ ವಾಪಸ್ಸು ಹೊರಟುಬಿಟ್ಟರು.

ಪಂಜಾಬ್​ನಿಂದ ದೆಹಲಿಗೆ ಹೊರಡುವ ಮೊದಲು ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಎ ಎನ್ ಐ ವರದಿಗಾರನಿಗೆ ಸುರಕ್ಷಿತವಾಗಿ ಮತ್ತು ಜೀವಂತವಾಗಿ ವಾಪಸ್ಸು ಹೋಗುತ್ತಿರುವುದಾಗಿ ನಿಮ್ಮ ಮುಖ್ಯಮಂತ್ರಿಗಳಿಗೆ (ಚರಣ್ಜಿತ್ ಸಿಂಗ್ ಚನ್ನಿ) ತಿಳಿಸಿ ಎಂದರಂತೆ.

ಮರುದಿನವೇ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾನ್ ಅವರು ಭೋಪಾಲ್ ನಲ್ಲಿ ಪ್ರಧಾನಿಯವರ ದೀರ್ಘಾಯುಷ್ಯಕ್ಕಾಗಿ ಮೃತ್ಯುಂಜಯ ಜಪ ಮತ್ತು ಹೋಮ-ಹವನ ಆಯೋಜಿಸಿದ್ದರು. ಅದಾದ ಬಳಿಕ ದೇಶದ ನಾನಾ ಭಾಗಗಳಲ್ಲಿ ಪ್ರಧಾನಿಯವರ ಸುರಕ್ಷತೆ, ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಹೋಮ ಹವನ ನಡೆಸಲಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ ಮಹಿಳಾ ಮೋರ್ಚಾ ಮತ್ತು ಮಹಾನಗರ ಪಾಲಿಕೆ ಸದಸ್ಯರು ಕೂಡ ಶುಕ್ರವಾರ ಹುಬ್ಬಳ್ಳಿ ಜಯನಗರದ ಈಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ, ಮತ್ತು ಹೋಮವನ್ನು ಆಯೋಜಿಸಿದ್ದರು. ಪ್ರಧಾನಿ ಮೋದಿಯವರನ್ನು ಬುಧವಾರ ಸಂಕಷ್ಟದಿಂದ ಪಾರು ಮಾಡಿದ್ದಕ್ಕೆ ಹಾಗೂ ಅವರ ದೀರ್ಘಾಯುಷ್ಯ ಕೋರಿ ಹವನ ಮಾಡಲಾಯಿತು.

ಇದನ್ನೂ ಓದಿ:  ಪ್ರಧಾನಿ ಮೋದಿಯವರ ಕಾನ್ವಾಯ್​ ತಡೆದ ‘ಪ್ರತಿಭಟನೆಕಾರರೊಂದಿಗೆ’ ಪಂಜಾಬ್ ಪೊಲೀಸರು ‘ಹುಸ್ಸೇನಿವಾಲಾ ಟೀ ಪಾರ್ಟಿ’ ನಡೆಸುತ್ತಿದ್ದರು!!!

Published on: Jan 07, 2022 10:18 PM