ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ಜೆಡಿ(ಎಸ್) ಕಾರ್ಯಕರ್ತರ ಆಕ್ರೋಶ, ಶ್ರೀನಿವಾಸಪುರ ಬಂದ್ ಮಾಡಿಸಿ ಪ್ರತಿಭಟನೆ

ಆಗಾಗ್ಗೆ ತಮ್ಮ ನಾಲಗೆ ಹರಿಬಿಡುವುದನ್ನು ಅಭ್ಯಾಸ ಮಾಡಿಕೊಂಡಿರುವ ರಮೇಶ್ ಕುಮಾರ್ ಅವರು ಆ ಸಂದರ್ಭದಲ್ಲಿ ನಾರಾಯಣಸ್ವಾಮಿ ಅವರನ್ನು ಕಟು ಭಾಷೆಯಲ್ಲಿ ನಿಂದಿಸಿದರಂತೆ. ಇದರಿಂದ ರೊಚ್ಚಿಗೆದ್ದಿದ್ದ ಪಕ್ಷದ ಕಾರ್ಯಕರ್ತರು ರಮೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ನಡೆಸಿದರು.

TV9kannada Web Team

| Edited By: Arun Belly

Jan 08, 2022 | 1:23 AM

ಕೋಲಾರ ಜಿಲ್ಲೆಯ ಶ್ರೀನಿವಾಸಪುರನಲ್ಲಿ ಶುಕ್ರವಾರ ಬಿಗುವಿನ ವಾತಾವರಣವಿತ್ತು. ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವರ್ತನೆಯನ್ನು ಖಂಡಿಸಿ ಸ್ಥಳೀಯ ಜೆಡಿ(ಎಸ್) ಕಾರ್ಯಕರ್ತರು ಪಕ್ಷದ ಕೋಲಾರ ಜಿಲ್ಲಾ ಘಟಕ ಅಧ್ಯಕ್ಷ ವೆಂಕಟಶಿವಾರೆಡ್ಡಿ ಜಿಕೆ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿ ಪಟ್ಟಣದ ಬಸ್ ನಿಲ್ದಾಣದ ಎದುರು ಟೈರ್ಗಳನ್ನು ಸುಟ್ಟು ಬೆಂಕಿ ಹಚ್ಚಿದರು ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಶ್ರೀನಿವಾಸಪುರದ ಪೊಲೀಸ್ ಠಾಣೆಯೆದುರು ಸಹ ಪ್ರತಿಭಟನೆಕಾರರು ರಮೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅವರ ಆಕ್ರೋಶಕ್ಕೆ ಕಾರಣವೇನೆಂದರೆ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಮೇಶ್ ಕುಮಾರ್ ಮತ್ತು ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮತ್ತು ಜೆಡಿ(ಎಸ್) ಕಾರ್ಯಕರ್ತ ತೂಪಲ್ಲಿ ನಾರಾಯಣಸ್ವಾಮಿ ನಡುವೆ ಪೊಲೀಸ್ ಠಾಣೆಯಲ್ಲಿ ಮಾತಿನ ಚಕಮಕಿ ನಡೆದಿದೆ.

ಆಗಾಗ್ಗೆ ತಮ್ಮ ನಾಲಗೆ ಹರಿಬಿಡುವುದನ್ನು ಅಭ್ಯಾಸ ಮಾಡಿಕೊಂಡಿರುವ ರಮೇಶ್ ಕುಮಾರ್ ಅವರು ಆ ಸಂದರ್ಭದಲ್ಲಿ ನಾರಾಯಣಸ್ವಾಮಿ ಅವರನ್ನು ಕಟು ಭಾಷೆಯಲ್ಲಿ ನಿಂದಿಸಿದರಂತೆ. ಇದರಿಂದ ರೊಚ್ಚಿಗೆದ್ದಿದ್ದ ಪಕ್ಷದ ಕಾರ್ಯಕರ್ತರು ರಮೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ನಡೆಸಿದರು.

ರಮೇಶ್ ಕುಮಾರ್ ಅವರು ಇತ್ತೀಚಿಗೆ ವಿಧಾನ ಸಭೆಯಲ್ಲಿ ರೇಪ್ ಬಗ್ಗೆ ಹಗುರವಾಗಿ ಮಾತಾಡಿ ರಾಷ್ಟ್ರವ್ಯಾಪಿ ಟೀಕೆಗೊಳಗಾಗಿದ್ದರು. ಅವರು ನಿಸ್ಸಂದೇಹವಾಗಿ ಬುದ್ಧಿಜೀವಿ ರಾಜಕಾರಣಿ. ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತಾಡಬಲ್ಲರು.

ಮೊನ್ನೆಯಷ್ಟೇ ಆವರು ಮಹಾತ್ಮಾ ಗಾಂಧಿ ಮತ್ತು ಕಸ್ತೂರ್ ಬಾ ಅವರ ಬಗ್ಗೆ ಅತ್ಯಂತ ಭಾವುಕರಾಗಿ ಮಾತಾಡಿ ಕೇಳುಗರ ಕಣ್ಣಾಲಿಗಳಲ್ಲಿ ನೀರು ಬರುವಂತೆ ಮಾಡಿದ್ದರು.
ಅದ್ಯಾಕೋ ಕೆಲವೊಮ್ಮೆ ಅವರು ನಾಲಗೆ ಮೇಲೆ ನಿಯಂತ್ರಣ ಕಳೆದುಕೊಂಡು ವಿವಾದಕ್ಕೊಳಗಾಗುತ್ತಾರೆ.

ಇದನ್ನೂ ಓದಿ:  ‘ಹು ಅಂತೀಯಾ ಮಾವ’ ಹಾಡಿನ ಮೇಲೆ ಕಾಪಿ ಆರೋಪ; ವೈರಲ್​ ಆಗುತ್ತಿದೆ ಹೋಲಿಕೆಯ ವಿಡಿಯೋ

Follow us on

Click on your DTH Provider to Add TV9 Kannada