ಕೊರೊನಾಗೆ ಡೋಂಟ್ ಕೇರ್ ಎಂದ ಕೊಪ್ಪಳದ ಜನ! ಗುಂಪಾಗಿ ಕುಳಿತು ಮದ್ಯ ಸೇವನೆ
ಕೊಪ್ಪಳದಲ್ಲಿ ಕಾಟಾಚಾರಕ್ಕೆ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಯಾವುದೇ ಭಯವಿಲ್ಲದೆ ಜನ ಓಡಾಡುತ್ತಿದ್ದಾರೆ. ಗುಂಪು ಗುಂಪಾಗಿ ನಿಂತು ಚಹಾ ಸೇವಿಸುತ್ತಿದ್ದಾರೆ. ಟೀ ಸ್ಟಾಲ್, ಹಣ್ಣಿನ ಅಂಗಡಿಗಳು ಎಂದಿನಂತೆ ತೆರೆದಿವೆ. ಇನ್ನು ಬಸ್ ಕೂಡಾ ಸಂಚರಿಸುತ್ತಿವೆ.
ಕೊಪ್ಪಳ: ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ನಿನ್ನೆ (ಜ.7) ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಇರಲಿದೆ. ಈ ನಡುವೆ ಮದ್ಯಪ್ರಿಯರು ಬಾರ್ಗಳ ಮುಂದೆಯೇ ಕುಳಿತು ಮದ್ಯ ಸೇವಿಸುತ್ತಿದ್ದಾರೆ. ಕೊಪ್ಪಳ ಬಸ್ ನಿಲ್ದಾಣದ ಬಳಿ ಬೆಳಂಬೆಳಗ್ಗೆ ಜನ ಮದ್ಯ ಕಿಕ್ ಏರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಭಯವಿಲ್ಲದೆ ಗುಂಪಾಗಿ ಕುಳಿತು ಮದ್ಯ ಸೇವಿಸುತ್ತಿದ್ದಾರೆ. ಮದ್ಯದ ಅಂಗಡಿ ಬಂದ್ ಆಗಿದ್ದರೂ, ಬಾರ್ ಮುಂದೆ ಕುಳಿತು ಮದ್ಯ ಸೇವಿಸುತ್ತಿದ್ದಾರೆ. ನಿನ್ನೆಯೇ ಮದ್ಯ ಖರೀದಿಸಿದ್ದೇವು ಅಂತ ಮದ್ಯಪ್ರಿಯರು ಹೇಳುತ್ತಿದ್ದಾರೆ.
ಕೊಪ್ಪಳದಲ್ಲಿ ಕಾಟಾಚಾರಕ್ಕೆ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಯಾವುದೇ ಭಯವಿಲ್ಲದೆ ಜನ ಓಡಾಡುತ್ತಿದ್ದಾರೆ. ಗುಂಪು ಗುಂಪಾಗಿ ನಿಂತು ಚಹಾ ಸೇವಿಸುತ್ತಿದ್ದಾರೆ. ಟೀ ಸ್ಟಾಲ್, ಹಣ್ಣಿನ ಅಂಗಡಿಗಳು ಎಂದಿನಂತೆ ತೆರೆದಿವೆ. ಇನ್ನು ಬಸ್ ಕೂಡಾ ಸಂಚರಿಸುತ್ತಿವೆ. ಜನ ನಿರ್ಲಕ್ಷ್ಯ ಮೆರೆಯುತ್ತಿದ್ದರು ಪೊಲೀಸರು, ನಗರಸಭೆ ಸಿಬ್ಬಂದಿ ಮಾತ್ರ ತಲೆ ಕೆಡೆಸಿಕೊಂಡಿಲ್ಲ.
ಇದನ್ನೂ ಓದಿ
Karnataka Dams Water Level: ಮಳೆ ಕಡಿಮೆಯಾಗಿರುವುದರಿಂದ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?