Dhoti comment: ಹೆಚ್​ಡಿ ಕುಮಾರಸ್ವಾಮಿ ಪಂಚೆ ಟೀಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಂಚ್​ ಉತ್ತರ ಇಲ್ಲಿದೆ!

Dhoti comment: ಹೆಚ್​ಡಿ ಕುಮಾರಸ್ವಾಮಿ ಪಂಚೆ ಟೀಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಂಚ್​ ಉತ್ತರ ಇಲ್ಲಿದೆ!

ಸಾಧು ಶ್ರೀನಾಥ್​
|

Updated on: Jan 08, 2022 | 8:49 AM

ಮೇಕೆದಾಟು ಯೋಜನೆಗೆ ಕಾಂಗ್ರೆಸ್​ ಪಕ್ಷದ ಕೊಡುಗೆ ಏನೂ ಇಲ್ಲ ಎಂದು ಕುಮಾರಸ್ವಾಮಿಯವರು ಮಾಡಿರುವ ಸರಣಿ ಟ್ವೀಟ್​​ಗಳನ್ನು ಮಾಧ್ಯಮದವರು ಶುಕ್ರವಾರದಂದು ಬೆಂಗಳೂರಲ್ಲಿ ಡಿ.ಕೆ, ಶಿವಕುಮಾರ್​ ಅವರ ಗಮನಕ್ಕೆ ತಂದಾಗ, ಇತ್ತೀಚಿಗೆ ಕುಮಾರಸ್ವಾಮಿಯವರ ಕಾಮೆಂಟ್​ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ, ಅವರು ದೊಡ್ಡವರು, ಅವರು ಹೇಳಿದ್ದೇ ಸರಿ ಎಂದಿದ್ದಾರೆ.

ಬೆಂಗಳೂರು: ಮೇಕೆದಾಟು ಯೋಜನೆಗೆ ಕಾಂಗ್ರೆಸ್​ ಪಕ್ಷದ ಕೊಡುಗೆ ಏನೂ ಇಲ್ಲ ಎಂದು ಕುಮಾರಸ್ವಾಮಿಯವರು ಮಾಡಿರುವ ಸರಣಿ ಟ್ವೀಟ್​​ಗಳನ್ನು ಮಾಧ್ಯಮದವರು ಶುಕ್ರವಾರದಂದು ಬೆಂಗಳೂರಲ್ಲಿ ಡಿ.ಕೆ, ಶಿವಕುಮಾರ್​ ಅವರ ಗಮನಕ್ಕೆ ತಂದಾಗ, ಇತ್ತೀಚಿಗೆ ಕುಮಾರಸ್ವಾಮಿಯವರ ಕಾಮೆಂಟ್​ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ, ಅವರು ದೊಡ್ಡವರು, ಅವರು ಹೇಳಿದ್ದೇ ಸರಿ ಎಂದು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಕರ್ಫ್ಯೂ ವಾಪಸ್​ ಪಡೆಯಬೇಕು. ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ. ಕೊರೊನಾ ಪಾಸಿಟಿವಿಟಿ ಬಗ್ಗೆ ಕೂಡ ತನಿಖೆ ಮಾಡಬೇಕು. ಈ ಬಗ್ಗೆ ಒಂದು ಆಯೋಗ ರಚನೆ ಆಗಬೇಕು. ಪಾಸಿಟಿವಿಟಿ ಪಟ್ಟಿಯೇ ಬೋಗಸ್ ಎಂದೂ ಶಿವಕುಮಾರ್ ಆರೋಪಿಸಿದ್ದಾರೆ.

ಈ ಮಧ್ಯೆ ಹೆಚ್​ಡಿ ಕುಮಾರಸ್ವಾಮಿ ಪಂಚೆ (Dhoti) ಟೀಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಏನು ಹೇಳಿದರು ಎಂಬುದಕ್ಕೆ ಈ ವಿಡಿಯೋದಲ್ಲಿದೆ ಉತ್ತರ. DKS Exclusive Interview : ಡಿಕೆಶಿ ಪಾದಯಾತ್ರೆಗೆ ಪ್ರೀ ಶೂಟಿಂಗ್ ಮಾಡವ್ರೆ ಎಂದಿರೋ HDK |Tv9kannada