ಪ್ರಧಾನಿ ಮೋದಿಯವರ ಕಾನ್ವಾಯ್​ ತಡೆದ ‘ಪ್ರತಿಭಟನೆಕಾರರೊಂದಿಗೆ’ ಪಂಜಾಬ್ ಪೊಲೀಸರು ‘ಹುಸ್ಸೇನಿವಾಲಾ ಟೀ ಪಾರ್ಟಿ’ ನಡೆಸುತ್ತಿದ್ದರು!!!

ಪ್ರಧಾನಿ ಮೋದಿಯವರ ಕಾನ್ವಾಯ್​ ತಡೆದ ‘ಪ್ರತಿಭಟನೆಕಾರರೊಂದಿಗೆ’ ಪಂಜಾಬ್ ಪೊಲೀಸರು ‘ಹುಸ್ಸೇನಿವಾಲಾ ಟೀ ಪಾರ್ಟಿ’ ನಡೆಸುತ್ತಿದ್ದರು!!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 06, 2022 | 5:29 PM

ಪೊಲೀಸರು ಪ್ರತಿಭಟನೆಕಾರರೊಂದಿಗೆ ಆರಾಮಾಗಿ, ಯಾವುದೇ ಆತಂಕವಿಲ್ಲದೆ ಚಹಾ ಸೇವಿಸುತ್ತಿದ್ದಾರೆ. ಪ್ರಧಾನ ಮಂತ್ರಿಗಳು ನಮ್ಮ ದೇಶದಲ್ಲಿ ಅತಿಹೆಚ್ಚು ಭದ್ರತೆ ಹೊಂದಿರುವ ಪದಾಧಿಕಾರಿಯಾಗಿದ್ದಾರೆ. ಅಂಥವರನ್ನು ಒಂದು ಸೇತುವೆ ಮೇಲೆ 20 ನಿಮಿಷಗಳ ಕಾಲ ತಡೆಯುವುದು ತೀವ್ರ ಸ್ವರೂಪದ ಭದ್ರತಾ ಲೋಪ ಮಾತ್ರವಲ್ಲ ಗಂಭೀರ ಅಪರಾಧವೂ ಆಗಿದೆ.

ಇದು ಉದ್ಧಟತನದ ಪರಮಾವಧಿ. ದೇಶದ ಪ್ರಧಾನಿ ಮಂತ್ರಿಯವರ, ಅವರು ಯಾವ ಪಕ್ಷದವರು ಅನ್ನೋದು ಮುಖ್ಯವಲ್ಲ, ಅವರು ಭಾರತದ ಪ್ರಧಾನಿ ಅನ್ನೋದಷ್ಟೇ ಇಲ್ಲಿ ಮುಖ್ಯ-ಕಾನ್ವಾಯ್ ಅನ್ನು ರಸ್ತೆಯ ಮೇಲೆ 20 ನಿಮಿಷಗಳ ಕಾಲ ರಸ್ತೆ ಮೇಲೆ ತಡೆಯುವುದು ಉದ್ಧಟತನ ಅಂತ ಹೇಳಿದರೆ ಅದು ಅಂಡರ್-ಟ್ಟೇಟ್​​ಮೆಂಟ್​ ಅನಿಸಿಕೊಳ್ಳುತ್ತದೆ. ಬುಧವಾರ ರಾತ್ರಿ ನಮಗೆಲ್ಲ ಗೊತ್ತಾದ ಸಂಗತಿಯೇನೆಂದರೆ, ಪ್ರತಿಭಟನೆಕಾರರ ಗುಂಪೊಂದು ಪ್ರಧಾನಿಯವರ ಕ್ಯಾವಲ್​ಕೇಡನ್ನು ಹುಸ್ಸೇನಿವಾಲಾ ಮೇಲ್ಸೇತುವೆ ಮೇಲೆ ತಡೆಯಿತು. ಪಂಜಾಬ್ ಮುಖ್ಯಮಂತ್ರಿ ಚರಣ್​ಜಿ​ತ್​​​ ಸಿಂಗ್ ಚನ್ನಿ ಅವರು, ಪ್ರಧಾನಿಗಳು ಕೊನೆಗಳಿಗೆಯಲ್ಲಿ ತಮ್ಮ ಪ್ರವಾಸದ ವಿಧಾನವನ್ನು ಬದಲಾಯಿಸಿದ್ದರಿಂದ ಸಮಸ್ಯೆ ಎದುರಾಯಿತು, ಪಂಜಾಬ್ ಪೊಲೀಸ್​​ಗೆ ಪ್ರತಿಭಟನೆಗೆ ಕುಳಿತವರ ಮನವೊಲಿಸಿ ರಸ್ತೆ ತೆರವುಗೊಳಿಸಲು ಕನಿಷ್ಠ ಅರ್ಧ ಗಂಟೆಯಾದರೂ ಬೇಕಿತ್ತು ಅದರೆ ಅಷ್ಟರಲ್ಲಿ ಪ್ರಧಾನಿ ವಾಪಸ್ಸು ಹೋಗಿಬಿಟ್ಟಿದ್ದರು ಅಂತ ಹೇಳಿದರು.

ಆದರೆ, ಪೋಲಿಸರು ಪ್ರತಿಭಟನೆಕಾರನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದರೆ ಅಥವಾ ಅವರೊಂದಿಗೆ ಟಿ-ಪಾರ್ಟಿ ಮಾಡಿದರೆ ಅಂತ ನೀವೇ ನೋಡಿ. ಈ ವಿಡಿಯೋನಲ್ಲಿ ನಿಮಗೆ ವಿಷಯ ಸ್ಪಷ್ಟವಾಗುತ್ತದೆ.

ಪೊಲೀಸರು ಪ್ರತಿಭಟನೆಕಾರರೊಂದಿಗೆ ಆರಾಮಾಗಿ, ಯಾವುದೇ ಆತಂಕವಿಲ್ಲದೆ ಚಹಾ ಸೇವಿಸುತ್ತಿದ್ದಾರೆ. ಪ್ರಧಾನ ಮಂತ್ರಿಗಳು ನಮ್ಮ ದೇಶದಲ್ಲಿ ಅತಿಹೆಚ್ಚು ಭದ್ರತೆ ಹೊಂದಿರುವ ಪದಾಧಿಕಾರಿಯಾಗಿದ್ದಾರೆ. ಅಂಥವರನ್ನು ಒಂದು ಸೇತುವೆ ಮೇಲೆ 20 ನಿಮಿಷಗಳ ಕಾಲ ತಡೆಯುವುದು ತೀವ್ರ ಸ್ವರೂಪದ ಭದ್ರತಾ ಲೋಪ ಮಾತ್ರವಲ್ಲ ಗಂಭೀರ ಅಪರಾಧವೂ ಆಗಿದೆ.

ಅಸಲಿಗೆ ರಸ್ತೆ ತಡೆದವರು ಪ್ರತಿಭಟನೆಕಾರರೇ ಅಥವಾ ಪ್ರತಿಭಟನೆಯ ಸೋಗು ಮಾಡುತ್ತಿದ್ದ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರೇ ಅನ್ನುವುದು ಸ್ಪಷ್ಟವಾಗುತ್ತಿಲ್ಲ.

ಈ ‘ಪ್ರತಿಭಟನೆಕಾರರು’ ಪ್ರಧಾನಿ ಮೋದಿ ಅವರ ಮೇಲೆ ಹಲ್ಲೆ ನಡೆಸುವ ಉದ್ದೇಶ ಹೊಂದಿರಲಿಲ್ಲ ಅನ್ನವುದಕ್ಕೂ ಖಚಿತ ಪುರಾವೆಗಳಿಲ್ಲ. ‘ನಾನು ಸುರಕ್ಷಿತವಾಗಿ ವಾಪಸ್ಸು ಬಂದಿದ್ದೇ ದೊಡ್ಡ ಸಂಗತಿ,’ ಎಂದು ಪ್ರಧಾನಿ ಹೇಳಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ಫಿರೋಜ್ ಪುರ್​ನ ಹುಸ್ಸೇನಿವಾಲಾನಲ್ಲಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ ನೀಡಲಿದ್ದ ಪ್ರಧಾನಿ ಮೋದಿ ಮತ್ತು ಅವರ ಕಾನ್ವಾಯ್ ತಡೆದಿರುವುದು ದೇಶದೆಲ್ಲೆಡೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ:   ಸಂಗಾತಿಯನ್ನು ಕಳೆದುಕೊಂಡು ಮರುಗುತ್ತಿರುವ ನವಿಲು: ಮನಕಲಕುವ ವಿಡಿಯೋ ವೈರಲ್​

Published on: Jan 06, 2022 05:29 PM