ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ
ಸ್ವೀಟ್ಸ್ ತಿನ್ನೋದಾ.. ಸ್ನ್ಯಾಕ್ಸ್ ತಿನ್ನೋದಾ.. ಒಂದಕ್ಕಿಂತ ಒಂದು ಸೂಪರ್ ಟೇಸ್ಟ್.. ನೋಡೋಕೂ ಅಷ್ಟೇ ಸಖತ್ತಾಗಿದೆ.. ಅಷ್ಟಕ್ಕೂ ನಾವು ಯಾವುದರ ಬಗ್ಗೆ ಹೇಳ್ತಿದ್ದೀವಿ ಅಂದ್ರಾ.. ಈ ಸ್ಟೋರಿ ನೋಡಿ..
ಸ್ವೀಟ್ಸ್, ಸ್ನ್ಯಾಕ್ಸ್ ಒಂದಕ್ಕಿಂತ ಒಂದು ಸೂಪರ್.. ಅದ್ರಲ್ಲೂ ಇದನ್ನೆಲ್ಲಾ ಅವರೇಬೇಳೆಯಲ್ಲಿ ಮಾಡಿದ್ದಾರೆ ಅನ್ನೋದು ಮತ್ತೊಂದು ಸ್ಪೆಷಾಲಿಟಿ. ಅವರೆಕಾಯಿ ಸೀಸನ್ ಆಗಿರೋದ್ರಿಂದ ಬೆಂಗಳೂರಿನಲ್ಲಿ ಅವರೆಕಾಯಿ ಮೇಳ ಆಯೋಜನೆ ಮಾಡಿದ್ದು, ರೈತರಿಂದ ನೇರವಾಗಿ ಖರೀದಿ ಮಾಡಿ ಖಾದ್ಯಗಳನ್ನು ತಯಾರಿಸಿದ್ರು. ಅವರೆಕಾಳಿನಿಂದ ಮಾಡಿದ್ದ ಸುಮಾರು 70ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳನ್ನು ಮಾಡಿದ್ರು. ಅವರೆಕಾಳು ಮಿಕ್ಸ್ಚರ್, ಅವರೆ ಉಪ್ಪಿಟ್ಟು, ಅವರೆ ದೋಸೆ, ಅವರೆ ನಿಪ್ಪಟ್ಟು, ಅವರೆ ಹಲ್ವಾ, ಅವರೆ ಚಿಕ್ಕಿ, ಅವರೆ ದೋಸೆ, ಅವರೆ ವಡೆ, ಅವರೆ ಜಿಲೇಬಿ, ಅವರೆ ಬೋಂಡ, ಅವರೆ ಹೋಳಿಗೆ ಎಲ್ಲರ ಬಾಯಲ್ಲೂ ನೀರೂರಿಸುತ್ತಿದೆ.
ಕೊವಿಡ್ ಕಾರಣದಿಂದ ಈ ವರ್ಷವೂ ಸಿಂಪಲ್ಲಾಗಿ ಮೇಳ ಆಯೋಜಿಸಲಾಗಿದೆ. ಆದ್ರೂ ಗ್ರಾಹಕರು ಅವರೆಮೇಳಕ್ಕೆ ಬಂದು ಅವರೆಕಾಳುಗಳ ಖಾದ್ಯಗಳನ್ನ ಟೇಸ್ಟ್ ಮಾಡ್ತಿದ್ದಾರೆ. ಡಿಫ್ರೆಂಟ್ ಟೇಸ್ಟ್ಗೆ ಫಿದಾ ಆಗಿ ತಾವೂ ತಿಂದು ತಮ್ಮ ಫ್ಯಾಮಿಲಿಯವ್ರಿಗೂ ಪಾರ್ಸೆಲ್ ತಗೊಂಡು ಹೋಗ್ತಿದ್ದಾರೆ.
ವಿವಿ ಪುರಂನಲ್ಲಿ ನಡೆಯುತ್ತಿರೋ ಅವರೆಕಾಳು ಮೇಳ ಈ ತಿಂಗಳ ಅಂತ್ಯದವರೆಗೂ ಇರಲಿದೆ. ಹೀಗಾಗಿ ಜನ ಮಿಸ್ ಮಾಡಿಕೊಳ್ದೇ ಒಮ್ಮೆ ಟೇಸ್ಟ್ ಮಾಡಿ. ಇಲ್ದಿದ್ರೆ ಮುಂದಿನ ವರ್ಷದತನಕ ಕಾಯ್ಬೇಕಾಗುತ್ತೆ.