ಶರಣ್ ಡ್ಯಾನ್ಸ್ ನೋಡಿ ಎಂಜಾಯ್ ಮಾಡುವವರು ಈ ಮಂಡಿ ಚಿಪ್ಪಿನ ಕಥೆ ಕೇಳಲೇಬೇಕು
ಜಿಮ್ ರವಿ ಹೀರೋ ಆಗಿ ನಟಿಸಿರುವ ‘ಪುರುಷೋತ್ತಮ’ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಶರಣ್ ಅತಿಥಿಯಾಗಿ ಆಗಮಿಸಿದ್ದರು. ಆ ವೇಳೆ ತಮ್ಮ ಡ್ಯಾನ್ಸ್ ಜರ್ನಿ ಕುರಿತು ಶರಣ್ ಮಾತನಾಡಿದರು.
ಕಾಮಿಡಿ ಸಿನಿಮಾಗಳ ಮೂಲಕ ಜನಪ್ರಿಯರಾದ ನಟ ಶರಣ್ ಅವರು ಓರ್ವ ಅಪ್ಪಟ ಹಾಸ್ಯ ಕಲಾವಿದ. ಅಷ್ಟೇ ಅಲ್ಲ, ಅವರು ಅತ್ಯುತ್ತಮವಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ. ಈಗಾಗಲೇ ಅನೇಕ ಹಾಡುಗಳ ಮೂಲಕ ಅದು ಸಾಬೀತಾಗಿದೆ. ಹಾಗಂತ ಶಾಸ್ತ್ರೀಯವಾಗಿ ಶರಣ್ ಡ್ಯಾನ್ಸ್ ಕಲಿತಿಲ್ಲ. ಪ್ರತಿ ಹಾಡಿನ ಶೂಟಿಂಗ್ ಸಮಯದಲ್ಲೂ ಅವರು ಸಿಕ್ಕಾಪಟ್ಟೆ ಕಷ್ಟಪಡಬೇಕಾಗುತ್ತದೆ. ಆ ಬಗ್ಗೆ ಅವರು ಈಗ ಹೇಳಿಕೊಂಡಿದ್ದಾರೆ. ‘ರ‍್ಯಾಂಬೋ’ ಸಿನಿಮಾದ ‘ಜಯ ಜಯ ಜಾಕೆಟ್ಟು, ಜಯನ್ ಗಂಡ ರಾಕೆಟ್ಟು..’ ಹಾಡಿನಿಂದ ಅವರ ಮಂಡಿ ಸ್ಪೆಪ್ ಫೇಮಸ್ ಆಯಿತು. ಅದಕ್ಕೆ ಕಾರಣ ಏನು ಎಂಬುದನ್ನು ಶರಣ್ ವಿವರಿಸಿದ್ದಾರೆ.
ಜಿಮ್ ರವಿ ಹೀರೋ ಆಗಿ ನಟಿಸಿರುವ ‘ಪುರುಷೋತ್ತಮ’ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಶರಣ್ ಅತಿಥಿಯಾಗಿ ಆಗಮಿಸಿದ್ದರು. ಆ ವೇಳೆ ತಮ್ಮ ಡ್ಯಾನ್ಸ್ ಜರ್ನಿಯಲ್ಲಿ ಇರುವ ಮಂಡಿ ಚಿಪ್ಪಿನ ಸ್ಟೆಪ್ ಕುರಿತು ಶರಣ್ ಮಾತನಾಡಿದರು. ಒಂದುವೇಳೆ ತಾವು ಚೆನ್ನಾಗಿ ಡ್ಯಾನ್ಸ್ ಮಾಡಿದ್ದರೆ ಅದಕ್ಕೆ ಕೊರಿಯೋಗ್ರಾಫರ್ಗಳು ನೇರ ಕಾರಣ ಎಂಬುದು ಅವರ ವಿನಯಪೂರ್ವಕ ಮಾತುಗಳು.
ಇದನ್ನೂ ಓದಿ:
ನಮಗೆ ಕೊರೊನಾ ಕಲಿಸಿದ ಪಾಠ ಜೀವನಪರ್ಯಂತ ಮರೆಯುವಂತಿಲ್ಲ; ನಟ ಶರಣ್
ಜೀವನದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಕ್ಕೆ ಮರುಗಿದ ಶರಣ್ ಸಿನಿಮಾದ ನಟಿ