ಪ್ರತಿ ದಿನ ಬೆಳ್ಳಿ ತಟ್ಟೆಯಲ್ಲೇ ಊಟ ಮಾಡುತ್ತಿದ್ದ ನಟಿ ಬಿ. ಸರೋಜಾದೇವಿ

Updated By: ಮದನ್​ ಕುಮಾರ್​

Updated on: Sep 16, 2025 | 9:46 PM

ನಟಿ ಬಿ. ಸರೋಜಾದೇವಿ ಅವರಿಗೆ ಇತ್ತೀಚೆಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಅವರ ಮಗಳು ಇಂಧೂ ಅವರು ಮಾತನಾಡಿದ್ದಾರೆ. ತಾಯಿಯ ಬಗೆಗಿನ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಪ್ರತಿ ದಿನ ಬೆಳ್ಳಿ ತಟ್ಟೆಯಲ್ಲೇ ಸರೋಜಾದೇವಿ ಅವರು ಊಟ ಮಾಡುತ್ತಿದ್ದರು.

ನಟಿ ಬಿ. ಸರೋಜಾದೇವಿ (B Saroja Devi) ಅವರಿಗೆ ಇತ್ತೀಚೆಗೆ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಅವರ ಮಗಳು ಇಂಧೂ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ತಾಯಿ ಬಗೆಗಿನ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ‘ಅವರನ್ನು ನಮ್ಮ ಅಜ್ಜಿ ಆ ರೀತಿ ಬೆಳೆಸಿದ್ದರು. ಬೆಳ್ಳಿ ತಟ್ಟೆಯಲ್ಲೇ ಊಟ ಕೊಡುತ್ತಿದ್ದರು. ಅಮ್ಮ ಎಂದಿಗೂ ಆರ್ಟಿಫಿಷಿಯಲ್ ಆಭರಣ ಹಾಕಿಕೊಂಡಿಲ್ಲ. ಶೂಟಿಂಗ್​​ನಲ್ಲಿ ಕೂಡ ಅವರು ನಿಜವಾದ ಒಡವೆ ಧರಿಸುತ್ತಿದ್ದರು’ ಎಂದು ಇಂಧೂ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.