AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಕಲ್ ಮೇಲಿಂದ ಬಿದ್ದೆ ಎಂದು ನರಳುತ್ತಾ ಬಂದು ಸಹಾಯಕ್ಕೆ ಕೈಚಾಚಿದ ಪುಟ್ಟ ಕಂದ

ಅಂಕಲ್ ಮೇಲಿಂದ ಬಿದ್ದೆ ಎಂದು ನರಳುತ್ತಾ ಬಂದು ಸಹಾಯಕ್ಕೆ ಕೈಚಾಚಿದ ಪುಟ್ಟ ಕಂದ

ರಮೇಶ್ ಬಿ. ಜವಳಗೇರಾ
|

Updated on:Sep 16, 2025 | 9:08 PM

Share

ಬೀದರ್ ನಲ್ಲಿ 7 ವರ್ಷದ ಮಲಮಗಳು ಸಾನ್ವಿ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿತ್ತು. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಭಾವಿಸಲಾಗಿತ್ತು. ಆದ್ರೆ, ಪಕ್ಕದ ಮನೆಯ ಸಿಸಿಟಿವಿ ದೃಶ್ಯಗಳಿಂದ ಸಾನ್ವಿಯನ್ನು ಮಲತಾಯಿಯೇ ಕೊಲೆ ಮಾಡಿರುವುದು ಗೊತ್ತಾಗಿದೆ. ಆಸ್ತಿಗಾಗಿ ಹಣದ ವ್ಯಾಮೋಹಕ್ಕೆ ಬಿದ್ದ ಮಲತಾಯಿ ರಾಧ, ಮಲಮಗಳನ್ನೇ 3ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾಳೆ. ಈ ಘಟನೆ ಆಗಸ್ಟ್ 27 ರಂದು ನಡೆದಿತ್ತಾದರೂ, ಅಕ್ಕಪಕ್ಕದ ಮನೆಯವರ ಸಿಸಿಟಿವಿ ದೃಶ್ಯಗಳು ಲಭ್ಯವಾದ ಬಳಿಕ ಕ್ರೂರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಲತಾಯಿ ರಾಧಾಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೀದರ್, (ಸೆಪ್ಟೆಂಬರ್ 16): ಬೀದರ್ ನಲ್ಲಿ 7 ವರ್ಷದ ಮಲಮಗಳು ಸಾನ್ವಿ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿತ್ತು. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಭಾವಿಸಲಾಗಿತ್ತು. ಆದ್ರೆ, ಪಕ್ಕದ ಮನೆಯ ಸಿಸಿಟಿವಿ ದೃಶ್ಯಗಳಿಂದ ಸಾನ್ವಿಯನ್ನು ಮಲತಾಯಿಯೇ ಕೊಲೆ ಮಾಡಿರುವುದು ಗೊತ್ತಾಗಿದೆ. ಆಸ್ತಿಗಾಗಿ ಹಣದ ವ್ಯಾಮೋಹಕ್ಕೆ ಬಿದ್ದ ಮಲತಾಯಿ ರಾಧ, ಮಲಮಗಳನ್ನೇ 3ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾಳೆ. ಈ ಘಟನೆ ಆಗಸ್ಟ್ 27 ರಂದು ನಡೆದಿತ್ತಾದರೂ, ಅಕ್ಕಪಕ್ಕದ ಮನೆಯವರ ಸಿಸಿಟಿವಿ ದೃಶ್ಯಗಳು ಲಭ್ಯವಾದ ಬಳಿಕ ಕ್ರೂರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಲತಾಯಿ ರಾಧಾಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ನೋಡಿ; ಮನೆ ಮೇಲಿಂದ ಮಗುವನ್ನು ತಳ್ಳಿದ ಮಲತಾಯಿ: ಬಿದ್ದು ಒದ್ದಾಡಿ ಪ್ರಾಣ ಬಿಟ್ಟ ಸಾನ್ವಿ, ವಿಡಿಯೋ ಕರುಳು ಚುರುಕ್ ಅನ್ನುತ್ತೆ

ಇನ್ನು ಸಾನ್ವಿ ಬಿದ್ದು, ನರಳಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳನ್ನು ನೋಡುತ್ತಿದ್ದರೆ ಎಂತವರ ಕಣ್ಣಲ್ಲೂ ನೀರು ಬರುತ್ತೆ. ಮಲತಾಯಿ ತಳ್ಳಿದ್ದರಿಂದ ಮೂರನೇ ಮಹಡಿಯಿಂದ ಬಿದ್ದ ಸಾನ್ವಿ, ಮೇಲೆದ್ದೇಳು ಆಗದೇ ನರಳಾಡಿದ್ದಾಳೆ. ಆದರೂ ಎದ್ದು ಬಂದು ರಸ್ತೆಯಲ್ಲಿ ಹೋಗುತ್ತಿದ್ದ ಭೀಮರಾವ್ ಬಳತೆ ಎಂಬುವರಿಗೆ ಅಂಕಲ್ ಎಂದು ಕೂಗಿದ್ದಾಳೆ. ತಕ್ಷಣ ಯಾಕೋ ಬೇಟಾ ಅಲ್ಲಿ ಹೋಗಿದ್ದಿ ಎಂದು ಭಿಮರಾವ್ ಬಳತೆ ಕೇಳಿದ್ದಾರೆ. ಆಗ ಸಾನ್ವಿ ಅಂಕಲ್ ಮೇಲಿಂದ ಬಿದ್ದೆ ಎಂದು‌ ಕೈ ಸನ್ನೇ ಮೂಲಕ ಮನೆ ತೋರಿಸಿದ್ದಾಳೆ. ಇನ್ನು ಕಂದಮ್ಮನ ನರಳಾಟವನ್ನು ಸ್ವತಃ ಭೀಮರಾವ್ ಅವರು ಟಿವಿ9ಗೆ ವಿವರಿಸಿದ್ದಾರೆ.

 

Published on: Sep 16, 2025 09:08 PM