200 ರೂ. ಟಿಕೆಟ್ ದರ ನಿಗದಿಗೆ ಮಲ್ಟಿಪ್ಲೆಕ್ಸ್ ಒಕ್ಕೂಟ ಆಕ್ಷೇಪ: ಪ್ರಿಯಾ ಹಾಸನ್ ಪ್ರತಿಕ್ರಿಯೆ
ಸಿನಿಮಾ ಟಿಕೆಟ್ ದರ 200 ರೂಪಾಯಿ ಮೀರಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಅದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಒಕ್ಕೂಟವು ಕೋರ್ಟ್ಗೆ ಅರ್ಜಿ ಹಾಕಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಮಾಡಲಾಗಿದೆ. ನಟಿ, ನಿರ್ಮಾಪಕಿ ಪ್ರಿಯಾ ಹಾಸನ್ ಅವರು ಈ ವೇಳೆ ಮಾತನಾಡಿದರು.
‘ಸಿನಿಮಾ ಟಿಕೆಟ್ ಬೆಲೆ (Movie Ticket Price) 200 ರೂಪಾಯಿಗೆ ನಿಗದಿ ಮಾಡಿರುವುದಕ್ಕೆ ಕೆಲವರ ವಿರೋಧ ಇದೆ. ಅಂಥವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ನಮಗೆ ಅದು ಸರಿ ಎನಿಸಿಲ್ಲ. ಹಾಗಾಗಿ ನಾವೆಲ್ಲ ನಿರ್ಮಾಪಕರು ಸೇರಿ ವಾಣಿಜ್ಯ ಮಂಡಳಿಯಿಂದ (Karnataka Film Chamber of Commerce) ಮನವಿ ಕೊಡುತ್ತಿದ್ದೇವೆ. 200 ರೂಪಾಯಿ ಟಿಕೆಟ್ ದರದಿಂದ ಪ್ರೇಕ್ಷಕರಿಗೆ ಅನುಕೂಲ ಆಗುತ್ತಿದೆ. ಟಿಕೆಟ್ ಬೆಲೆ ಕಡಿಮೆ ಇದ್ದರೆ ಫ್ಯಾಮಿಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ನಮ್ಮ ಮನವಿಯನ್ನು ಸ್ವೀಕರಿಸಿ ಮಲ್ಟಿಪ್ಲೆಕ್ಸ್ ಒಕ್ಕೂಟದವರು ತಮ್ಮ ಅರ್ಜಿಯನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯಕ್ಕೆ ಹೋಗಿ ಫೈಟ್ ಮಾಡಲು ನಾವು ಕೂಡ ರೆಡಿ ಇದ್ದೇವೆ’ ಎಂದು ಪ್ರಿಯಾ ಹಾಸನ್ (Priya Hassan) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

