ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ; ಮುದ್ದಾದ ವಿಡಿಯೋ ವೈರಲ್

|

Updated on: Dec 12, 2024 | 4:04 PM

ಸಾಕಿದ ಮಾವುತ ತನ್ನನ್ನು ಬಿಟ್ಟು ಹೊರಟಾಗ ಆನೆಮರಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸ್ಕೂಟಿಯಲ್ಲಿ ಹೊರಟಿದ್ದ ಮಾವುತನನ್ನು ಅಡ್ಡಹಾಕಿ ಕೆಳಗೆ ಇಳಿಯುವಂತೆ ಮಾಡಿದ ಆನೆಮರಿ ಆತನನ್ನು ತನ್ನ ಸೊಂಡಿಲಿನಿಂದ ಎಳೆದುಕೊಂಡು ಹೋಗದಂತೆ ತಡೆಯುತ್ತಿದೆ. ಆನೆಮರಿ ಮಾವುತನ ಹಿಂದೆ ಓಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಿದ್ದು ಎಂಬ ಮಾಹಿತಿ ಲಭ್ಯವಿಲ್ಲ.

ತನ್ನನ್ನು ಪ್ರೀತಿಯಿಂದ ಸಾಕಿದ ಮಾವುತನು ಬಿಟ್ಟು ಹೊರಟಾಗ ಆತನನ್ನು ಹೋಗದಂತೆ ತಡೆಯಲು ಆನೆಯೊಂದು ಮರಿ ಅವನನ್ನು ಎಳೆದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾವುತ ಆ ಆನೆಮರಿಯನ್ನು ಸಮಾಧಾನಪಡಿಸಲು ಏನೇನೋ ಪ್ರಯತ್ನ ಮಾಡಿದ್ದಾನೆ. ನೀನು ಎಲ್ಲಿಯೂ ಹೋಗಬೇಡ ಗೆಳೆಯಾ, ಇಲ್ಲೇ ಒಟ್ಟಿಗೇ ಇರೋಣ ಎಂದು ಆ ಆನೆಮರಿ ಮಾವುತನ ಹಿಂದೆ ಓಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಿದ್ದು ಎಂಬ ಮಾಹಿತಿ ಲಭ್ಯವಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 12, 2024 04:03 PM