ಬ್ಯಾಂಕಾಕ್ನಲ್ಲಿ ಒಂಟಿ ಕಾಲಿನ ಮಸಾಜ್ ಹೇಗಿತ್ತು? ವಿವರಿಸಿದ ದಿಗಂತ್, ಯೋಗಿ
‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ‘ಟಿವಿ9’ ನಡೆಸಿದ ವಿಶೇಷ ಸಂದರ್ಶನದಲ್ಲಿ ದಿಗಂತ್ ಮತ್ತು ಯೋಗಿ ಅವರು ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.
ನಟರಾದ ದಿಗಂತ್ ಮತ್ತು ಲೂಸ್ ಮಾದ ಯೋಗಿ (Yogi) ಅವರದ್ದು ಹಲವು ವರ್ಷಗಳ ಸ್ನೇಹ. ಅವರಿಬ್ಬರೂ ಜೊತೆಯಾಗಿ ‘ಬ್ಯಾಚುಲರ್ ಪಾರ್ಟಿ’ (Bachelor Party) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಥೈಲೆಂಡ್ನಲ್ಲಿ ನಡೆದಿದೆ. ಬ್ಯಾಂಕಾಕ್ನಲ್ಲಿ ಒಂಟಿ ಕಾಲಿನ ಮಸಾಜ್ ಮಾಡಿಸಿಕೊಂಡ ಬಗ್ಗೆ ದಿಗಂತ್ (Diganth Manchale) ಮಾತನಾಡಿದ್ದಾರೆ. ಜನವರಿ 26ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ‘ಟಿವಿ9’ ನಡೆಸಿದ ವಿಶೇಷ ಸಂದರ್ಶನದಲ್ಲಿ ದಿಗಂತ್ ಮತ್ತು ಯೋಗಿ ಅವರು ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಅಭಿಜಿತ್ ಮಹೇಶ್ ಅವರು ನಿರ್ದೇಶನ ಮಾಡಿದ್ದಾರೆ. ಜಿ.ಎಸ್. ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
