‘ಅಭಿಮಾನಿಗಳು ಕೊಟ್ಟಿದ್ದು ನಿಜವಾದ ಲಾಂಗ್ ಅಲ್ಲ’: ‘ಬ್ಯಾಡ್ ಮ್ಯಾನರ್ಸ್’ ನಟ ಅಭಿಷೇಕ್ ಅಂಬರೀಷ್ ಸ್ಪಷ್ಟನೆ
ಅಭಿಮಾನಿಗಳು ಕೊಟ್ಟಿದ್ದ ಕಿರೀಟ ಮತ್ತು ಲಾಂಗ್ ರೀತಿಯ ವಸ್ತುವನ್ನು ಅವರು ಹಿಡಿದಿದ್ದರು. ಸಾರ್ವಜನಿಕವಾಗಿ ಲಾಂಗ್ ಪ್ರದರ್ಶಿಸಲಾಯಿತೇ ಎಂಬ ಅನುಮಾನ ಕೂಡ ಕೆಲವರಲ್ಲಿ ಮೂಡಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಅಭಿಷೇಕ್ ಅಂಬರೀಷ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಅದು ಲಾಂಗ್ ಅಲ್ಲ. ಅದು ಡಮ್ಮಿ ಕತ್ತಿ’ ಎಂದಿದ್ದಾರೆ.
ಸ್ಯಾಂಡಲ್ವುಡ್ ನಟ ಅಭಿಷೇಕ್ ಅಂಬರೀಷ್ ಅವರು ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ನಟ ದರ್ಶನ್ (Darshan) ಜೊತೆ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆ ಸಂದರ್ಭದ ವಿಡಿಯೋ ಮತ್ತು ಫೋಟೋ ವೈರಲ್ ಆಗಿತ್ತು. ಅಭಿಮಾನಿಗಳು ಕೊಟ್ಟಿದ್ದ ಕಿರೀಟ ಮತ್ತು ಲಾಂಗ್ ರೀತಿಯ ವಸ್ತುವನ್ನು ಅವರು ಹಿಡಿದಿದ್ದರು. ಸಾರ್ವಜನಿಕವಾಗಿ ಲಾಂಗ್ ಪ್ರದರ್ಶಿಸಲಾಯಿತೇ ಎಂಬ ಅನುಮಾನ ಕೂಡ ಕೆಲವರಲ್ಲಿ ಮೂಡಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಸ್ಪಷ್ಟನೆ ನೀಡಿದ್ದಾರೆ. ‘ಅದು ಲಾಂಗ್ ಅಲ್ಲ. ಅದು ಡಮ್ಮಿ ಕತ್ತಿ. ಫೋಟೋದಲ್ಲಿ ಅದು ಸ್ಪಷ್ಟವಾಗಿ ಕಾಣುತ್ತಿದೆ. ಆ ವಿಚಾರವನ್ನು ದೊಡ್ಡದು ಮಾಡಲಾಗಿದೆ. ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿದ್ದನ್ನು ಹಿಡಿದುಕೊಂಡು ಪೋಸ್ ನೀಡಿ ವಾಪಸ್ ಕೊಟ್ಟಿದ್ದೇನೆ. ಒಂದುವೇಳೆ ತಪ್ಪಾಗಿದ್ದರೆ ಕ್ಷಮೆ ಇರಲಿ ’ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.