ಗುಳೇದಗುಡ್ಡ ಪಟ್ಟಣದಲ್ಲಿ ಹುಚ್ಚು ಕರಿಮಂಗನ ದಾಳಿ, 30ಕ್ಕೂ ಹೆಚ್ಚು ಜನರಿಗೆ ಗಾಯ
ಹುಚ್ಚುಹಿಡಿದ ಕರಿಮಂಗವೊಂದು (ಮುಸುವ) ಯದ್ವಾತದ್ವಾ ಜನರ ಮೇಲೆರಗಿದ್ದು, 30ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ಜನರು ಕೋಲು ಹಿಡಿದು ಓಡಿಸಲು ಯತ್ನಿಸಿದಾಗ ಕೈಯಲ್ಲೀ ಪ್ಲೇಟ್ ಹಿಡಿದು ಟೆರೇಸ್ ಮೇಲೇರಿ ಪ್ಲೇಟ್ ಅನ್ನು ಬಡಿಯುತ್ತಾ, ಕುಣಿಯುತ್ತಾ ಚೇಷ್ಟೆ ಮಾಡಿದೆ. ಕಪಿಚೇಷ್ಟೆಯ ವಿಡಿಯೋ ಇಲ್ಲಿದೆ.
ಬಾಗಲಕೋಟೆ, ಅಕ್ಟೋಬರ್ 10: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಹುಚ್ಚು ಕರಿಮಂಗ (ಮುಸುವ) ದಾಳಿ ಮಾಡಿದ್ದರಿಂದ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜನರ ತಲೆ, ಕೈ ಸೇರಿದಂತೆ ವಿವಿಧ ಕಡೆ ಮಂಗ ಕಚ್ಚಿ ಗಾಯಗೊಳಿಸಿದೆ. ಗುಳೇದಗುಡ್ಡ ಪಟ್ಟಣದ ಬಾಗವಾನ್ ಪೇಟೆ, ಹರದೊಳ್ಳಿ ದೇವಸ್ಥಾನ ವ್ಯಾಪ್ತಿಯಲ್ಲಿ ಮಂಗ ದಾಳಿ ಮಾಡಿದೆ. ಸದ್ಯ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜನ ಕೋಲು ಹಿಡಿದು ಮಂಗನ ಓಡಿಸಲು ಪ್ರಯತ್ನ ಪಟ್ಟಿದ್ದಾರೆ. ಅಷ್ಟರಲ್ಲಿ ಟೆರೇಸೊಂದರ ಮೇಲೇರಿದ ಮಂಗ ಕೈಯಲ್ಲಿ ಪ್ಲೇಟ್ ಹಿಡಿದು ಚೇಷ್ಟೆ ಮಾಡಿದೆ.