ಮಂಡ್ಯದಲ್ಲಿ ಭಾರಿ ಮಳೆ: JSS ಶಾಲೆಗೆ ಜಲ ದಿಗ್ಬಂಧನ; ವಿದ್ಯಾರ್ಥಿಗಳಿಗೆ ರಜೆ ಘೋಷಣೆ
ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಮಂಡ್ಯದ ಕೆಲ ಬಡಾವಣೆಗಳಲ್ಲಿ ಅವಾಂತರಗಳು ನಡೆದಿವೆ. ನಗರದ ಜೆಎಸ್ಎಸ್ ಪಬ್ಲಿಕ್ ಸ್ಕೂಲ್ನ ಮೈದಾನ ಮತ್ತು ವಾಹನಗಳು ನೀರಿನಲ್ಲಿ ಮುಳುಗಿದ್ದು, ಬಡಾವಣೆಯಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಮನೆಯ ಹೊರ ಭಾಗದಲ್ಲಿ ಎಲ್ಲಿ ನೋಡಿದರೂ ನೀರು ಕಾಣುತ್ತಿರುವ ಕಾರಣ ಹೊರಬಾರಲಾಗದೆ ನಿವಾಸಿಗಳು ಪರದಾಟ ನಡೆಸಿದ್ದಾರೆ.
ಮಂಡ್ಯ, ಅಕ್ಟೋಬರ್ 10: ತಡರಾತ್ರಿ ಸುರಿದ ಧಾರಾಕಾರ ಮಳೆಗೆ (Rain) ಮಂಡ್ಯದ ಬೀಡಿ ಕಾಲೋನಿ ಹಾಗೂ ಕೆಹೆಚ್‌ಬಿ ಕಾಲೋನಿಯಲ್ಲಿ ಅವಾಂತರಗಳ ಸರಮಾಲೆಯೇ ನಡೆದಿದೆ. ಬಡಾವಣೆಯಲ್ಲಿನ ಮನೆಗಳಿಗೆ ನೀರು ನುಗ್ಗಿರೋದು ಒಂದೆಡೆಯಾದರೆ, ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಜಲಾವೃತವಾಗಿದೆ. ಶಾಲಾ ಮೈದಾನ ಮತ್ತು ವಾಹನಗಳು ನೀರಿನಲ್ಲಿ ಮುಳುಗಿದ್ದು, ಶಾಲೆಗೆ ಆಡಳಿತ ಮಂಡಳಿ ರಜೆ ಘೋಷಿಸಿದೆ. ಮನೆಯ ಹೊರ ಭಾಗದಲ್ಲಿ ಎಲ್ಲಿ ನೋಡಿದರೂ ನೀರು ಕಾಣುತ್ತಿರುವ ಕಾರಣ ಹೊರಬಾರಲಾಗದೆ ನಿವಾಸಿಗಳು ಪರದಾಟ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
