AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆ ಬಗ್ಗೆಯೇ ಆಘಾತಕಾರಿ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ!

ಹಾಸನಾಂಬೆ ಬಗ್ಗೆಯೇ ಆಘಾತಕಾರಿ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ!

Ganapathi Sharma
|

Updated on:Oct 10, 2025 | 2:14 PM

Share

ಬ್ರಹ್ಮಾಂಡ ಗುರೂಜಿ ಹಾಸನಾಂಬೆ ದೇಗುಲದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಮುಂದಿನ ವರ್ಷದಿಂದ ಹಾಸನಾಂಬೆಯ ಸಾನಿಧ್ಯ ಇಲ್ಲದಿರಬಹುದು, ಇದು ಕೊನೆಯ ದರ್ಶನವಾಗಬಹುದು ಎಂದಿದ್ದಾರೆ. 2025-32ರೊಳಗೆ ಸಿದ್ದೇಶ್ವರನ ಕೃಪೆಯಿಂದ ಘಟಪ್ರಭ ಪರಿವರ್ತನೆ ಆಗಲಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಬ್ರಹ್ಮಾಂಡ ಗುರೂಜಿ ಮಾತಿನ ವಿಡಿಯೋ ಇಲ್ಲಿದೆ.

ಹಾಸನ, ಅಕ್ಟೋಬರ್ 10: ಬ್ರಹ್ಮಾಂಡ ಗುರೂಜಿ ಅವರು ಹಾಸನಾಂಬೆ ದೇಗುಲದ ಕುರಿತು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಈ ವರ್ಷ ಹಾಸನಾಂಬೆಗೆ ಕೊನೆಯ ವರ್ಷವಾಗಿದ್ದು, ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರಲ್ಲ ಎಂದು ಗುರೂಜಿ ತಿಳಿಸಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಮುಂದಿನ ದಿನಗಳಲ್ಲಿ ಅವಕಾಶಗಳು ಅಡಚಣೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. 2025 ರಿಂದ 2032ರ ಅವಧಿಯಲ್ಲಿ ಸಿದ್ದೇಶ್ವರನ ಕೃಪೆಯಿಂದ ‘‘ಘಟಪ್ರಭ ಪರಿವರ್ತನೆ’’ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಸಮಯದಲ್ಲಿ ಏಳು ಜನ ಅಕ್ಕ-ತಂಗಿಯರು ಸೇರಲಿದ್ದಾರೆ ಎಂದಿದ್ದಾರೆ. ಈ ಕೊನೆಯ ಅವಧಿಯಲ್ಲಿ ದರ್ಶನ ಪಡೆದವರು ಸಂತೋಷ ಪಡುತ್ತಾರೆ ಎಂದು ಹೇಳಿದ ಗುರೂಜಿ, ಮಹಿಳೆಯರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಗುರೂಜಿ ಅವರು ಹೇಳಿದ ಪ್ರಕಾರ, ಸಿದ್ದೇಶ್ವರನ ಕೃಪಾಶೀರ್ವಾದದಿಂದ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳು ನಡೆಯಲಿವೆ. ರೇವಣ ಸಿದ್ದೇಶ್ವರ, ಹಾಸನದ ಸಿದ್ದೇಶ್ವರ, ಜೇನುಕಲ್ ಸಿದ್ದೇಶ್ವರ ಸೇರಿದಂತೆ ವಿವಿಧ ಸಿದ್ದೇಶ್ವರರ ಶಿವನ ಶಕ್ತಿ ಒಂದು ಕಡೆ ಸೇರಲಿದೆ. ವಿಶೇಷವಾಗಿ 2025 ರಿಂದ 2032 ರ ಅವಧಿಯಲ್ಲಿ ಈ ಬದಲಾವಣೆಗಳು ಘಟಿಸಲಿವೆ. ಸಿದ್ದೇಶ್ವರ ಸಾನಿಧ್ಯ ತೆಗೆದಾಗ, ಇಲ್ಲಿ ಸೇರಿರುವ ಏಳು ಜನ ಅಕ್ಕ-ತಂಗಿಯರು ಸೇರಿ ‘‘ಘಟಪ್ರಭ ಪರಿವರ್ತನೆ’’ ಎಂಬ ದೊಡ್ಡ ಬದಲಾವಣೆ ಆಗಲಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಭಕ್ತರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಗುರೂಜಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ವರ್ಷದಿಂದ ಮಹಿಳೆಯರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ‘ಈ ಜಗತ್ಪ್ರಸಿದ್ದ ಹಾಸನಾಂಬೆಯ ವೈಶಿಷ್ಟ್ಯತೆಯನ್ನು ಈ ಕೊನೆಯ ಅವಧಿಯಲ್ಲಿ ನಾವು ದರ್ಶನ ಮಾಡಿದೆವಲ್ಲ ಎಂದು ಸಂತೋಷ ಪಡುತ್ತೇವೆ. ಮುಂದಿನ ಅವಕಾಶಗಳು ನಮಗಲ್ಲ. ಯಾವ ಜನರಿಗೂ ಹಾಸನಾಂಬೆ ದರ್ಶನ ಆಗುವ ಅವಕಾಶಗಳು ಕಡಿಮೆ, ಅಡಚಣೆಗಳು ಎಷ್ಟು ಬರುತ್ತವೆ ಎಂಬುದನ್ನು ನೀವೇ ಮುಂದೆ ನೋಡುತ್ತೀರಿ’ ಎಂದು ಗುರೂಜಿ ಹೇಳಿದ್ದಾರೆ.

ಜಗತ್ತಿಗೆ ಮತ್ತೊಂದು ಗಂಡಾಂತರ: ಬ್ರಹ್ಮಾಂಡ ಗುರೂಜಿ ಭವಿಷ್ಯ

ಕೊನೆಯದಾಗಿ ಎಲ್ಲರಿಗೂ ಹಾಸನಾಂಬೆ ಆಯುರಾರೋಗ್ಯ, ಐಶ್ವರ್ಯವನ್ನು ನೀಡಿ ಕಾಪಾಡಲಿ ಎಂದು ಗುರೂಜಿ ಹಾರೈಸಿದ್ದಾರೆ. ಅಲ್ಲದೆ, ಜಗತ್ತಿಗೆ ಮತ್ತೊಂದು ಗಂಡಾಂತರ ಕಾದಿದೆ ಎಂದು ಭವಷ್ಯ ನುಡಿದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

Published on: Oct 10, 2025 02:05 PM