AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಮ್​ನಲ್ಲಿ ಬಾಗುರುಂಬಾ ದಹೋವು 2026; 10,000 ಬೋಡೋ ಕಲಾವಿದರ ನೃತ್ಯ ವೀಕ್ಷಿಸಿ ಶ್ಲಾಘಿಸಿದ ಮೋದಿ

ಅಸ್ಸಾಮ್​ನಲ್ಲಿ ಬಾಗುರುಂಬಾ ದಹೋವು 2026; 10,000 ಬೋಡೋ ಕಲಾವಿದರ ನೃತ್ಯ ವೀಕ್ಷಿಸಿ ಶ್ಲಾಘಿಸಿದ ಮೋದಿ

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 18, 2026 | 8:33 PM

Share

ಗುವಾಹಟಿ, ಜನವರಿ 18: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್ ರಾಜಧಾನಿ ಗುವಾಹಟಿಯಲ್ಲಿ ಬಾಗುರುಂಬಾ ದಹೋವು (Bagurumba Dwhou) 2026 ಉತ್ಸವದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಅಸ್ಸಾಮ್​ನ ಸಾಂಸ್ಕೃತಿ ಪರಂಪರೆ ಅನಾವರಣಗೊಂಡಿತು. ಒಂದು ಕಾಲದಲ್ಲಿ ತುಪಾಕಿ, ಗನ್​ಗಳನ್ನು ಹಿಡಿದು ಪ್ರತ್ಯೇಕತೆಗೆ ಹೋರಾಡುತ್ತಿದ್ದ ಬೋಡೋ ಜನಾಂಗದವರು ಇದೀಗ ತಮ್ಮ ಅದ್ಭುತ ಸಾಂಸ್ಕೃತಿಕ ವೈಭವ ಪ್ರದರ್ಶಿಸಿದರು. ಬೋಡೋ ಸಮುದಾಯದ 10,000ಕ್ಕೂ ಅಧಿಕ ಕಲಾವಿದರು ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿರು. ಪ್ರಧಾನಿ ನರೇಂದ್ರ ಮೋದಿ ಅವರು ಈ ದೃಶ್ಯ ವೈಭವ ಕಂಡು ಮೂಕವಿಸ್ಮಿತರಾದರು.

ಗುವಾಹಟಿ, ಜನವರಿ 18: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಸ್ಸಾಮ್ ರಾಜಧಾನಿ ಗುವಾಹಟಿಯಲ್ಲಿ ಬಾಗುರುಂಬಾ ದಹೋವು (Bagurumba Dwhou) 2026 ಉತ್ಸವದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಅಸ್ಸಾಮ್​ನ ಸಾಂಸ್ಕೃತಿ ಪರಂಪರೆ ಅನಾವರಣಗೊಂಡಿತು. ಒಂದು ಕಾಲದಲ್ಲಿ ತುಪಾಕಿ, ಗನ್​ಗಳನ್ನು ಹಿಡಿದು ಪ್ರತ್ಯೇಕತೆಗೆ ಹೋರಾಡುತ್ತಿದ್ದ ಬೋಡೋ ಜನಾಂಗದವರು ಇದೀಗ ತಮ್ಮ ಅದ್ಭುತ ಸಾಂಸ್ಕೃತಿಕ ವೈಭವ ಪ್ರದರ್ಶಿಸಿದರು. ಬೋಡೋ ಸಮುದಾಯದ 10,000ಕ್ಕೂ ಅಧಿಕ ಕಲಾವಿದರು ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿರು. ಪ್ರಧಾನಿ ನರೇಂದ್ರ ಮೋದಿ ಅವರು ಈ ದೃಶ್ಯ ವೈಭವ ಕಂಡು ಮೂಕವಿಸ್ಮಿತರಾದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್​ಗೆ ಎರಡು ದಿನಗಳ ಭೇಟಿ ಪೂರ್ಣಗೊಳಿಸಿದ್ದಾರೆ. ನಿನ್ನೆ ಬೋಡೋ ನೃತ್ಯ ಕಾರ್ಯಕ್ರಮ ಇತ್ತು. ಇವತ್ತು ಭಾನುವಾರ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಪ್ರಾಜೆಕ್ಟ್​ಗೆ ಭೂಮಿಪೂಜೆ ನೆರವೇರಿಸಿದರು. ಎರಡು ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ಟ್ರೈನ್​ಗಳಿಗೆ ಚಾಲನೆ ನೀಡಿದರು. ಕಾಲಿಯಾಬಾರ್​ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಷಣದ ಮೂಲಕ ಅಸ್ಸಾಮ್ ಭೇಟಿ ಮುಗಿಸಲಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ