ಪಲ್ಸರ್ ಸರಣಿಯ ಪಲ್ಸರ್ ಎಫ್250 ಮತ್ತು ಎನ್250 ಬೈಕ್ ಗಳನ್ನು ಬಿಡುಗಡೆ ಮಾಡಿದೆ ಬಜಾಜ್ ಆಟೋ
ಪಲ್ಸರ್ ಸರಣಿಯಲ್ಲಿ ಕಂಪನಿಯು 150 ಸಿಸಿ ಮತ್ತು 180 ಸಿಸಿಯ ಎರಡು ಬೈಕ್ ಗಳನ್ನು ಮಾರ್ಕೆಟ್ ಗೆ ರಿಲೀಸ್ ಮಾಡಿತ್ತು. ಈಗ 250 ಸಿಸಿ ಯ ಪಲ್ಸರ್ ಎನ್250 ಮತ್ತು ಎಫ್250 ಬೈಕ್ಗಳನ್ನು ಗುರುವಾರದಂದು ಭಾರತದಲ್ಲಿ ರಿಲೀಸ್ ಮಾಡಲಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಎರಡು ವರ್ಷ ಮೊದಲು ಅಸ್ತಿತ್ವಕ್ಕೆ ಬಂದ ಬಜಾಜ್ ಆಟೋ ಸಂಸ್ಥೆ ಸಹ ಅಮೃತ ಮಹೋತ್ಸವ ಆಚರಿಸಿಕೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಕಂಪನಿಯು ಉನ್ನತ ಗುಣಮಟ್ಟದ ವಾಹನಗಳನ್ನು ತಯಾರಿಸುತ್ತಾ ಬಂದಿದೆ ಎನ್ನವುದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಈ ಸಂಸ್ಥೆಯ ಬಗ್ಗೆ ಮಾತಾಡುವ ಪ್ರಸಂಗ ಯಾಕೆ ಎದುರಾಗಿದೆಯೆಂದರೆ, ಗುರುವಾರದಂದು ಅದು ಪಲ್ಸರ್ ಸರಣಿಯ ಎರಡು ಬೈಕ್ ಗಳನ್ನು ಲಾಂಚ್ ಮಾಡಿದೆ. ನಿಮಗೆ ನೆನಪರಿಬಹುದು 2001 ರಲ್ಲಿ ರಸ್ತೆಗಳಿಗಿಳಿದ ಬಜಾಜ್ ಬೈಕ್ ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ಭಾಷ್ಯ ಬರೆಯಿತು. ಅಲ್ಲಿಂದ ಈವತ್ತಿನವರೆಗೂ ಈ ವಾಹನದ ಬೇಡಿಕೆ ಮತ್ತು ಜನಪ್ರಿಯತೆ ಕಮ್ಮಿಯಾಗಿಲ್ಲ.
ಪಲ್ಸರ್ ಸರಣಿಯಲ್ಲಿ ಕಂಪನಿಯು 150 ಸಿಸಿ ಮತ್ತು 180 ಸಿಸಿಯ ಎರಡು ಬೈಕ್ ಗಳನ್ನು ಮಾರ್ಕೆಟ್ ಗೆ ರಿಲೀಸ್ ಮಾಡಿತ್ತು. ಈಗ 250 ಸಿಸಿ ಯ ಪಲ್ಸರ್ ಎನ್250 ಮತ್ತು ಎಫ್250 ಬೈಕ್ಗಳನ್ನು ಗುರುವಾರದಂದು ಭಾರತದಲ್ಲಿ ರಿಲೀಸ್ ಮಾಡಲಾಗಿದೆ.
ಈ ವರ್ಷ ಲಾಂಚ್ ಆಗಿರುವ ಬೈಕ್ ಗಳಲ್ಲಿ ಅತಿಹೆಚ್ಚು ಚರ್ಚೆ ನಿಸ್ಸಂದೇಹವಾಗಿ ಪಲ್ಸರ್ ಬೈಕ್ ಕುರಿತು ಆಗಿದೆ. ಎರಡು ದಶಕಗಳ ನಂತರ ಪಲ್ಸರ್ ಸರಣಿಯಲ್ಲಿ ಹೊಸ ಮಾಡೆಲ್ಗಳು ಲಾಂಚ್ ಆಗಿರೋದು ಸಹಜವಾಗೇ ಜನರಲ್ಲಿ ಕುತೂಹಲ ಮೂಡಿಸಿದೆ.
ಬಜಾಜ್ ಕಂಪನಿಯು ಈಗಾಗಲೇ ಮೋಟಾರ್‌ಸೈಕಲ್‌ನ ಕೆಲವು ಟೀಸರ್‌ಗಳನ್ನು ಬಿಡಡುಗಡೆ ಮಾಡಿದ್ದು ನವೀಕರಿಸಿದ ಎಕ್ಸಾಸ್ಟ್ ನೋಟ್, ಸಂಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಿರುವ ಸ್ಟೈಲಿಂಗ್ ಅನ್ನು ಹೊಸ 250 ಸಿಸಿ ಬೈಕ್ ಗಳು ಹೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಸ್ಪೋರ್ಟಿ ಲುಕ್‌ಗಾಗಿ ಡಬಲ್-ಬ್ಯಾರೆಲ್ ಎಕ್ಸಾಸ್ಟ್ ಅನ್ನು ಸಹ ಬೈಕ್ ಗಳು ಒಳಗೊಂಡಿವೆ. ಬಜಾಜ್ ಪಲ್ಸರ್ ಎನ್250 ಮತ್ತು ಬಜಾಜ್ ಪಲ್ಸರ್ ಎಫ್250 ಬೈಕ್ ಗಳು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಎಲ್ಇಡಿ ಡಿಆರ್‌ಎಲ್‌ಗಳು, ಸ್ಪ್ಲಿಟ್ ಸೀಟ್‌ಗಳು, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು ಹೊಸ ಹಿಂಭಾಗದ ಮೊನೊಶಾಕ್ ಸಸ್ಪೆನ್ಷನ್‌ನೊಂದಿಗೆ ಬರುತ್ತವೆ.
ಅಂದಹಾಗೆ, ಬಜಾಜ್ ಪಲ್ಸರ್ ಎಫ್250 ಎಕ್ಸ್ ಶೋ ರೂಮ್ ಬೆಲೆ ರೂ 1,40,000 ಆಗಿದ್ದರೆ, ಎನ್ 250ಯ ಬೆಲೆ ರೂ. 1,38,000.
ಇದನ್ನೂ ಓದಿ: David Warner: ರೊನಾಲ್ಡೊ ರೀತಿ ಕೊಕಾ-ಕೋಲಾ ಬಾಟಲ್‌ಗಳನ್ನು ದೂರಕ್ಕೆ ತಳ್ಳಿದ ಡೇವಿಡ್ ವಾರ್ನರ್: ವಿಡಿಯೋ ವೈರಲ್