ಗಾಸಿಪ್ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ, ಮನ-ಮನೆಗಳನ್ನು ಮುರಿಯುತ್ತದೆ, ಇದರಿಂದ ದೂರವಿರಿ: ಡಾ ಸೌಜನ್ಯ ವಶಿಷ್ಠ

ಗಾಸಿಪ್ ಕೇವಲ ಮನ-ಮನೆಗಳನ್ನು ಮಾತ್ರವಲ್ಲದೆ ದೊಡ್ಡ ಸಂಸ್ಥೆಗಳನ್ನು ಒಡೆಯುವಷ್ಟು ಮಾರಕವಾಗಿರುತ್ತದೆ ಅಂತ ಸೌಜನ್ಯ ಎಚ್ಚರಿಸುತ್ತಾರೆ.

ಕನ್ನಡದಲ್ಲೊಂದು ಗಾದೆಮಾತಿದೆ, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಅಂತ. ಕೆಲವರಿಗೆ ಮಾತಾಡುವ ಚಟ ವಿಪರೀತವಾಗಿರುತ್ತದೆ, ಇನ್ನೂ ಕೆಲವರು ಮಾತುಗಳನ್ನೇ ಬಂಡವಾಳ ಮಾಡಿಕೊಂಡು ಬದುಕು ನಡೆಸುತ್ತಾರೆ. ಮತ್ತೇ ಕೆಲವರು ವಿನಾಕಾರಣ ಬೇರೆಯವರ ಮುಂದೆ ಇನ್ನೊಬ್ಬರನ್ನು ಕುರಿತು ಇಲ್ಲವೇ ಒಂದು ಕುಟುಂಬವನ್ನು ಕುರಿತು ಇಲ್ಲಸಲ್ಲದನ್ನು ಮಾತಾಡುತ್ತಾರೆ. ಅವರ ಮಾತಿನಿಂದ ಆಗಬಹುದಾದ ಪರಿಣಾಮದ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಬೇರೆಯವರ ಮನೆಗಳನ್ನು ಹಾಳು ಮಾಡುವ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಇಂಥ ಮಾತುಗಳನ್ನೇ ಗಾಸಿಪ್ ಎನ್ನುತ್ತಾರೆ ಮತ್ತು ಅದು ಯಾವ ಕಾರಣಕ್ಕೂ ಒಳ್ಳೆಯದಲ್ಲ ಎಂದು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.

ಗಾಸಿಪ್ ಕೇವಲ ಮನ-ಮನೆಗಳನ್ನು ಮಾತ್ರವಲ್ಲದೆ ದೊಡ್ಡ ಸಂಸ್ಥೆಗಳನ್ನು ಒಡೆಯುವಷ್ಟು ಮಾರಕವಾಗಿರುತ್ತದೆ ಅಂತ ಸೌಜನ್ಯ ಎಚ್ಚರಿಸುತ್ತಾರೆ. ಗಾಸಿಪ್ ಮಾಡುವ ವ್ಯಕ್ತಿಗಳ ಬಗ್ಗೆ ಹುಷಾರಾಗಿರಬೇಕು, ಯಾಕೆಂದರೆ ನಮ್ಮ ಮುಂದೆ ಬೇರೆಯವರ ಬಗ್ಗೆ ಸುಖಾ ಸುಮ್ಮನೆ ಗಾಸಿಪ್ ಮಾಡುವ ವ್ಯಕ್ತಿ ನಾವಿಲ್ಲದ ಸಮಯದಲ್ಲಿ ನಮ್ಮ ಬಗ್ಗೆಯೂ ಇಲ್ಲಸಲ್ಲದನ್ನು ಮಾತಾಡಿ ಜನರಲ್ಲಿ ಕೆಟ್ಟ ಆಭಿಪ್ರಾಯ ಮೂಡುವಂತೆ ಮಾಡುತ್ತಾನೆ. ನಮಗೆ ಮಾನಸಿಕ ಹಿಂಸೆಯಾಗುವುದನ್ನು ಕಂಡು, ಸಂತೋಷಡುತ್ತಾನೆ, ಗಾಸಿಪ್ ಮಾಡುವವರು ಸ್ಯಾಡಿಸ್ಟಿಕ್ ಮನೋಭಾವ ಹೊಂದಿರುತ್ತಾರೆ ಇದೊಂದ ವಿಕೃತಿ ಅಂತ ಸೌಜನ್ಯ ಹೇಳುತ್ತಾರೆ.

ನಮ್ಮ ಬದುಕು ಚಿಕ್ಕದು ಮತ್ತು ನಾವೆಲ್ಲ ನಮ್ಮದೇ ಆದ ತಾಪತ್ರಯಗಳೊಂದಿಗೆ ಜೀವಿಸುತ್ತಿದ್ದೇವೆ. ಹಾಗಾಗಿ ಬದುಕಿರುವಷ್ಟು ದಿನ ಉತ್ತಮವಾದ ರೀತಿಯಲ್ಲಿ, ಬೇರೆಯವರಿಗೆ ಮಾದರಿಯಾಗುವ ಹಾಗೆ ಜೀವನ ನಡೆಸಬೇಕು. ಬೇರೆಯರನ್ನು ಅವಹೇಳನ ಮಾಡುವುದರಿಂದ ನಮಗೆ ಎಂಥದ್ದೂ ಪ್ರಾಪ್ತಿಯಾಗಲಾರದು.

ನಮ್ಮಿಂದ ಯಾರಾದರೂ ನೊಂದುಕೊಳ್ಳುವಂತಾಗಿದ್ದರೆ, ಅದಕ್ಕಾಗಿ ಕ್ಷಮೆ ಕೇಳಿ, ಸಾರಿ ಅನ್ನಿ ಅಂತ ಸೌಜನ್ಯ ಹೇಳುತ್ತಾರೆ. ಅಥವಾ ಬೇರೆಯವರು ನಿಮ್ಮನ್ನು ನೊಂದುಕೊಳ್ಳುವಂತೆ ಮಾಡಿದ್ದರೆ, ನೇರವಾಗಿ ಆ ವ್ಯಕ್ತಿಯ ಜೊತೆ ವ್ಯವಹರಿಸಿ, ನೀನು ಮಾಡಿದ್ದು ತಪ್ಪು ಅಂತ ಮುಖದ ಮೇಲೆ ಹೇಳಿಬಿಡಿ ಅಂತ ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ:   ಜೋಗದ ಜುಳುಜುಳು ನಾದ: ಸಾವಿರಾರು ಕಂಠಗಳಿಂದ ಜೋಗದ ಝರಿಯಲಿ ಜೋಗದ ಸಿರಿ ಹಾಡಿನ ಕನ್ನಡ ಉತ್ಸವ, ವಿಡಿಯೋ ಇದೆ

Click on your DTH Provider to Add TV9 Kannada