ಗಣೇಶ ಸಮಾರಂಭದಲ್ಲಿ ಅಕ್ಬರ್ ಎಂಬುವವರಿಂದ ಗಾಯನ ಕಾರ್ಯಕ್ರಮ ಮಾಡಿಸುವ ಮೂಲಕ ಗಮನ ಸೆಳೆದ ಕೋಲಾರದ ಭಜರಂಗದಳ; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 20, 2023 | 8:39 PM

ಗಣೇಶ ಕಾರ್ಯಕ್ರಮದಲ್ಲಿ ಸೌಹಾರ್ದತೆಯ ಸಂಕೇತವಾಗಿ ಅಕ್ಬರ್ ಎಂಬುವವರಿಂದ ಗಾಯನ ಕಾರ್ಯಕ್ರಮ ಮಾಡಿಸುವ ಮೂಲಕ ಕೋಲಾರದ ಭಜರಂಗದಳ ಗಮನ ಸೆಳೆಯಿತು. ಅಕ್ಬರ್ ಮೂಲಕ ಹಾಡು ಹೇಳಿಸಿದ ಹಿನ್ನೆಲೆ ಹಿಂದೂ ಮುಸ್ಲಿಂ ಬಾಂಧವ್ಯ ಕಂಡು ಸಂತೋಷ ವ್ಯಕ್ತಪಡಿಸಿದ ಎಸ್ಪಿ ನಾರಾಯಣ್ ಅವರು ವಿಸರ್ಜನೆ ಕೂಡ ಇದೆ ರೀತಿಯಲ್ಲಿ ಮಾಡಿ ಎಂದು ಯುವಕರಿಗೆ ಸಲಹೆ ನೀಡಿದ್ರು.

ಕೋಲಾರ, ಸೆ.20: ಗಣೇಶ ಹಬ್ಬದ(Ganesh Chaturthi)ಕಾರ್ಯಕ್ರಮದಲ್ಲಿ ಗಣೇಶನ ಕುರಿತು ಭರ್ಜರಿ ಹಾಡು ಹಾಡುವ ಮೂಲಕ ಕೋಲಾರದ ಎಸ್ಪಿ ನಾರಾಯಣ್ ಎಲ್ಲರ ಗಮನ ಸೆಳೆದಿದ್ದಾರೆ. ಕೋಲಾರ(Kolar) ನಗರದ ಎಂಜಿ ರಸ್ತೆಯಲ್ಲಿ ಆಯೋಜಿಸಿದ್ದ ಗಣೇಶ ಕಾರ್ಯಕ್ರಮದಲ್ಲಿ ತೆಲುಗು ಗಣೇಶ ಕುರಿತಾದ ಭಕ್ತಿ ಗೀತೆ ಹಾಡುವ ಮೂಲಕ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡರು. ಕೋಲಾರ ನಗರದ ಎಂಜಿ ರಸ್ತೆಯಲ್ಲಿರುವ ಲೋಕಮಾನ್ಯ ತಿಲಕ್ ಗಣೇಶ ವಿಸರ್ಜನಾ ಸಮಿತಿ ಆಯೋಜನೆ ಮಾಡಿದ್ದ ಗಣೇಶ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಅವರು, ತೆಲುಗು ಕೂಲಿ ಚಿತ್ರದಲ್ಲಿನ ಗಣೇಶನ ಮೇಲೆ ಹಾಡಲಾಗಿರುವ ಹಾಡು ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡ್ರು. ದಂಡಾಲಯ್ಯ ಉಂಡಾಲಯ್ಯ ಅನ್ನೋ ಸಾಂಗ್ ಹಾಡಿದ ಎಸ್ಪಿ ನಾರಾಯಣ್ ಅವರು, ನೆರೆದಿದ್ದ ಜನರ ಒತ್ತಾಯದ ಮೇರೆಗೆ ಹಾಡು ಹಾಡಿ ರಂಜಿಸಿದ್ರು, ಎಸ್ಪಿ ನಾರಾಯಣ್ ಹಾಡಿಗೆ ನೆರೆದಿದ್ದ ಜನರಿಂದ ಶಿಳ್ಳೆ ಚಪ್ಪಾಳೆ ಬಂತು. ಇನ್ನೂ ಗಣೇಶ ಕಾರ್ಯಕ್ರಮದಲ್ಲಿ ಸೌಹಾರ್ದತೆಯ ಸಂಕೇತವಾಗಿ ಅಕ್ಬರ್ ಎಂಬುವವರಿಂದ ಗಾಯನ ಕಾರ್ಯಕ್ರಮ ಮಾಡಿಸುವ ಮೂಲಕ ಕೋಲಾರದ ಭಜರಂಗದಳ ಗಮನ ಸೆಳೆಯಿತು. ಅಕ್ಬರ್ ಮೂಲಕ ಹಾಡು ಹೇಳಿಸಿದ ಹಿನ್ನೆಲೆ ಹಿಂದೂ ಮುಸ್ಲಿಂ ಬಾಂಧವ್ಯ ಕಂಡು ಸಂತೋಷ ವ್ಯಕ್ತಪಡಿಸಿದ ಎಸ್ಪಿ ನಾರಾಯಣ್ ಅವರು ವಿಸರ್ಜನೆ ಕೂಡ ಇದೆ ರೀತಿಯಲ್ಲಿ ಮಾಡಿ ಎಂದು ಯುವಕರಿಗೆ ಸಲಹೆ ನೀಡಿದ್ರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ