AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಹಬ್ಬದ ದಿನವೇ ತನ್ನ 4 ತಿಂಗಳ ಗಂಡು ಮಗುವನ್ನು ರಸ್ತೆಯ ಮೇಲೆ ಎಸೆದು ಕೊಂದ ತಂದೆ, ಬೆಳಗಾವಿ ಪೊಲೀಸರಿಂದ ಅರೆಸ್ಟ್​

ಕೆಎಸ್ಐಎಸ್‌ಎಫ್ ಪೇದೆಯಾಗಿದ್ದ ಬಸಪ್ಪ ಬಳುಣಕಿ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡ್ತಿದ್ದ. ಒಂದೂವರೆ ವರ್ಷದ ಹಿಂದೆ ಚಿಂಚಲಿಯ ಲಕ್ಷ್ಮೀ ಜೊತೆ ಬಸಪ್ಪ ವಿವಾಹವಾಗಿದ್ದ. ಲಕ್ಷ್ಮೀ-ಬಸಪ್ಪ ದಂಪತಿಗೆ 4 ತಿಂಗಳ ಹಿಂದೆ ಗಂಡು ಮಗುವಾಗಿತ್ತು. ಮಗುವಾದ ಬಳಿಕ ಲಕ್ಷ್ಮೀ ಚಿಂಚಲಿಯ ತಾಯಿಯ ಮನೆಯಲ್ಲಿ ವಾಸವಿದ್ದಳು. ಸೆ. 18ರಂದು ಚಿಂಚಲಿ ಗ್ರಾಮಕ್ಕೆ ಆಗಮಿಸಿದ್ದ ಬಸಪ್ಪ ಊರಲ್ಲಿ ಜಾತ್ರೆಯಿದೆ, ಮಗುವನ್ನು ಒಯ್ಯುತ್ತೇನೆ ಎಂದಿದ್ದಾನೆ.

ಗಣೇಶ ಹಬ್ಬದ ದಿನವೇ ತನ್ನ 4 ತಿಂಗಳ ಗಂಡು ಮಗುವನ್ನು ರಸ್ತೆಯ ಮೇಲೆ ಎಸೆದು ಕೊಂದ ತಂದೆ, ಬೆಳಗಾವಿ ಪೊಲೀಸರಿಂದ ಅರೆಸ್ಟ್​
ಗಂಡು ಮಗುವನ್ನು ರಸ್ತೆ ಮೇಲೆ ಎಸೆದು ಕೊಂದ ತಂದೆ
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Edited By: |

Updated on:Sep 20, 2023 | 12:50 PM

Share

ಚಿಕ್ಕೋಡಿ: ಗಣೇಶ ಹಬ್ಬದ ದಿನದಂದೇ ತನ್ನ ನಾಲ್ಕು ತಿಂಗಳ ಗಂಡು ಮಗುವನ್ನು ತಂದೆ ಸಾಯಿಸಿದ್ದಾನೆ. ಸಿಟ್ಟಿನಿಂದ ಡಾಂಬರ್ ರಸ್ತೆ ಮೇಲೆ 4 ತಿಂಗಳ ಮಗು ಎಸೆದು ಕೊಂದಿದ್ದಾನೆ. ತಾಯಿಯ ತವರು ಮನೆ ಬಳಿ ರಸ್ತೆಯಲ್ಲೇ ಉಸಿರು ಚೆಲ್ಲಿದೆ ಹಸುಗೂಸು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಸೆಪ್ಟೆಂಬರ್​​ 18ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ದುರದುಂಡಿ ಗ್ರಾಮದ ಬಸಪ್ಪ ಬಳುನಕಿ ಎಂಬಾತನಿಂದ 4 ತಿಂಗಳ ಮಗು ಸಂಚಿತ್‌ ಹತ್ಯೆಗೀಡಾಗಿದ್ದಾನೆ.

ಕೆಎಸ್ಐಎಸ್‌ಎಫ್ ಪೇದೆಯಾಗಿದ್ದ ಬಸಪ್ಪ ಬಳುಣಕಿ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡ್ತಿದ್ದ. ಒಂದೂವರೆ ವರ್ಷದ ಹಿಂದೆ ಚಿಂಚಲಿಯ ಲಕ್ಷ್ಮೀ ಜೊತೆ ಬಸಪ್ಪ ವಿವಾಹವಾಗಿದ್ದ. ಲಕ್ಷ್ಮೀ-ಬಸಪ್ಪ ದಂಪತಿಗೆ 4 ತಿಂಗಳ ಹಿಂದೆ ಗಂಡು ಮಗುವಾಗಿತ್ತು. ಮಗುವಾದ ಬಳಿಕ ಲಕ್ಷ್ಮೀ ಚಿಂಚಲಿಯ ತಾಯಿಯ ಮನೆಯಲ್ಲಿ ವಾಸವಿದ್ದಳು.

ಇದನ್ನೂ ಓದಿ: ನೈಟ್​ ಶಿಫ್ಟ್​​ನಲ್ಲಿ ಮಹಿಳಾ ಇಂಜಿನಿಯರ್ ಜೊತೆ ಅಸಭ್ಯ ವರ್ತನೆ: ಸಾಕ್ಷ್ಯಾಧಾರ ಲಭ್ಯ, ಜೆಸ್ಕಾಂ ಇಂಜಿನಿಯರ್ ಸಸ್ಪೆಂಡ್​

ಸೆಪ್ಟೆಂಬರ್ 18ರಂದು ಚಿಂಚಲಿ ಗ್ರಾಮಕ್ಕೆ ಆಗಮಿಸಿದ್ದ ಬಸಪ್ಪ ಊರಲ್ಲಿ ಜಾತ್ರೆಯಿದೆ, ಮಗುವನ್ನು ಒಯ್ಯುತ್ತೇನೆ ಎಂದಿದ್ದಾನೆ. ಬೈಕ್ ಮೇಲೆ ನಾಲ್ಕು ತಿಂಗಳ ಮಗುವನ್ನು ಕರೆದುಕೊಂಡು ಹೋಗಲು ತಂದೆ ಬಸಪ್ಪ ಮುಂದಾಗಿದ್ದಾನೆ. ಈ ವೇಳೆ, ಬೇಡ ಅಷಚ್ಟು ಚಿಕ್ಕ ಮಗುವನ್ನು ಕರೆದುಕೊಂಡು ಹೋಗಲು ಸಾಧ್ಯವಾಗದು ಅಂತಾ ಮನೆಯವರು ತಡೆದಿದ್ದಾರೆ. ಅದಕ್ಕೆ ಮಗುವನ್ನು ಮೇಲಕ್ಕೆ ಎಸೆದು ಮಗು ಸಾಯುವಂತೆ ಮಾಡಿದ್ದಾನೆ ಅಪ್ಪ.

ಇದನ್ನೂ ಓದಿ: ಮಗುವನ್ನು ಕಾರಿನಲ್ಲೇ ಮಲಗಿಸಿ ಮರೆತು ಹೋಗಿದ್ದ ತಂದೆ, 7 ಗಂಟೆಯ ಬಳಿಕ ವಾಪಸಾಗುವಷ್ಟರಲ್ಲಿ

ಪತಿಯ ದುಷ್ಕೃತ್ಯವನ್ನು ಕಣ್ಣೀರು ಹಾಕುತ್ತಾ ಬಿಚ್ಚಿಟ್ಟಿದ್ದಾಲೇ ಪತ್ನಿ ಲಕ್ಷ್ಮೀ. ವರದಕ್ಷಿಣೆ ನೀಡುವಂತೆ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಬೈಕ್, ಬಂಗಾರ, ಹಣ ನೀಡಿಲ್ಲ ಎಂದು ಕಿರುಕುಳ ನೀಡುತ್ತಿದ್ದ ಎಂದು ಬಸಪ್ಪನ ವಿರುದ್ಧ ಆರೋಪಿಸಿದ್ದಾರೆ. ಆರೋಪಿ ಬಸಪ್ಪನನ್ನು ವಶಕ್ಕೆ ಪಡೆದ ಕುಡಚಿ ಠಾಣೆ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಎಸ್‌ಪಿ ಭೀಮಾಶಂಕರ ಗುಳೇದ್ ಹೇಳಿಕೆ:

ಚಿಂಚಲಿಯಲ್ಲಿ 4 ತಿಂಗಳ ಹಸುಗೂಸನ್ನು ತಂದೆಯೇ ರಸ್ತೆಗೆ ಎಸೆದಿದ್ದರಿಂದ ಮಗು ಮೃತಪಟ್ಟಿದೆ. ರಸ್ತೆಗೆ ಎಸೆದು 4 ತಿಂಗಳ ಮಗುವನ್ನು ಸಾಯಿಸಿರುವ ಪ್ರಕರಣದಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ತಂದೆ ಬಸಪ್ಪನನ್ನು ರಾತ್ರಿಯೇ ವಶಕ್ಕೆ ಪಡೆದಿದ್ದೇವೆ. ದುರದೃಷ್ಟವಶಾತ್ ಆರೋಪಿ KSISF ಪೇದೆಯಾಗಿದ್ದಾನೆ. KSISF ಧಾರವಾಡ ಮೂರನೇ ಬಟಾಲಿಯನ್‌ಗೆ ಸೇರಿದ ಪೇದೆಯಾಗಿದ್ದು, ಸದ್ಯಕ್ಕೆ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಬೆಳಗಾವಿಯಲ್ಲಿ ಎಸ್‌ಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಮಗುವಿನ ತಾಯಿ ಕುಡಚಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಮಗುವಿನ ಕೊಲೆ ಜೊತೆಗೆ ಮಗು ತಂದೆ ಬಸಪ್ಪ, ಆತನ ತಂದೆ, ತಾಯಿ ಅಕ್ಕ ಎಲ್ಲರೂ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ರು ಎಂದು ದೂರು ನೀಡಿದ್ದಾರೆ. ನಿನ್ನೆ ಮನೆಗೆ ಬಂದು ನೀವು ನನಗೆ ಬೈಕ್ ಕೊಡಿಸಿಲ್ಲ, ಈವರೆಗೆ ನನ್ನ ಚೆನ್ನಾಗಿ ನೋಡಿಕೊಂಡಿಲ್ಲ. ನನಗೆ ಹುಟ್ಟಿದ ಮಗು ಇದು, ಇದು ಇದ್ರೆ ಎಷ್ಟು ಸತ್ತರೆ ಎಷ್ಟು ಅಂತಾ ಹೇಳಿ ಕೈಯಿಂದ ಕಿತ್ತುಕೊಂಡು ರಸ್ತೆಗೆ ಎಸೆದಿದ್ದರಿಂದ ಮಗು ಮೃತಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಮೀನು ವಿವಾದ: ಗರ್ಭಿಣಿ ಹೊಟ್ಟೆಗೆ ಒದ್ದ ಹಿನ್ನೆಲೆ ಶಿಶು ಸಾವು

ತುಮಕೂರು, ಸೆಪ್ಟೆಂಬರ್​ 20: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾಗಸಂದ್ರ ಗೊಲ್ಲರಹಟ್ಟಿಯಲ್ಲಿ ಗಲಾಟೆ ವೇಳೆ ಗರ್ಭಿಣಿ ಹೊಟ್ಟೆಗೆ ಒದ್ದ ಹಿನ್ನೆಲೆ ಗರ್ಭಸ್ಥ ಶಿಶು ಸಾವನ್ನಪ್ಪಿದೆ. ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಬಿಡಿಸಲು ಬಂದ 5 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಗ್ರಾಮದ ಕುಮಾರ್ ಹಾಗೂ ಹರೀಶ್, ಗಿಡಯ್ಯ ಪಾಪಣ್ಣ, ಕಲಿ ನಡುವೆ ಜಗಳ ನಡೆದಿತ್ತು. ಜಗಳ ಬಿಡಿಸಲು ಬಂದ ಕುಮಾರ್ ಪತ್ನಿ ಹರ್ಷಿತಾ ಮೇಲೆ ಹಲ್ಲೆ ನಡೆಸಲಾಗಿದೆ.

ಗಲಾಟೆ ವೇಳೆ ದಾಯಾದಿಗಳು ಗರ್ಭಿಣಿ ಹೊಟ್ಟೆಗೆ ಅಮಾನುಷವಾಗಿ ಕಾಲಿನಿಂದ ಒದ್ದಿದ್ದಾರೆ. ಗರ್ಭಿಣಿಗೆ ಬಲವಾದ ಪೆಟ್ಟು ಹಿನ್ನೆಲೆ ಹೊಟ್ಟೆಯಲ್ಲಿದ್ದ ಶಿಶು ಸಾವಿಗೀಡಾಗಿದೆ. ಬಳಿಕ ದಂಪತಿ, ಹಲ್ಲೆ ಹಾಗೂ ಶಿಶು ಸಾವಿನ‌ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಆದರೆ ಕೇವಲ ಹಲ್ಲೆ ಪ್ರಕರಣ ಮಾತ್ರ ದಾಖಲಿಸಿಕೊಂಡಿರುವ ಸಿ.ಎಸ್. ಪುರ ಠಾಣೆ ಪೊಲೀಸರು, ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Wed, 20 September 23

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ