ನೈಟ್​ ಶಿಫ್ಟ್​​ನಲ್ಲಿ ಮಹಿಳಾ ಇಂಜಿನಿಯರ್ ಜೊತೆ ಅಸಭ್ಯ ವರ್ತನೆ: ಸಾಕ್ಷ್ಯಾಧಾರ ಲಭ್ಯ, ಜೆಸ್ಕಾಂ ಇಂಜಿನಿಯರ್ ಸಸ್ಪೆಂಡ್​

ಉಷ್ಣ ವಿದ್ಯುತ್​ ಸ್ಥಾವರವನ್ನು ಹೊಂದಿರುವ ರಾಯಚೂರಿನಲ್ಲಿ ಜೆಸ್ಕಾಂ ಮಹಿಳಾ ಇಂಜಿನಿಯರ್ ಗೆ ಹಿರಿಯ ಇಂಜಿನಿಯರ್ ನಿಂದ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ನಡೆದಿದೆ. ಸಾಕ್ಷ್ಯಾಧಾರ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಜೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್​ನನ್ನು ಕೊನೆಗೂ ಸಸ್ಪೆಂಡ್ ಮಾಡಲಾಗಿದೆ.

ನೈಟ್​ ಶಿಫ್ಟ್​​ನಲ್ಲಿ ಮಹಿಳಾ ಇಂಜಿನಿಯರ್ ಜೊತೆ ಅಸಭ್ಯ ವರ್ತನೆ: ಸಾಕ್ಷ್ಯಾಧಾರ ಲಭ್ಯ, ಜೆಸ್ಕಾಂ ಇಂಜಿನಿಯರ್ ಸಸ್ಪೆಂಡ್​
ಅಸಭ್ಯ ವರ್ತನೆ: ಸಾಕ್ಷ್ಯಾಧಾರ ಲಭ್ಯ, ಜೆಸ್ಕಾಂ ಇಂಜಿನಿಯರ್ ಸಸ್ಪೆಂಡ್​
Follow us
ಭೀಮೇಶ್​​ ಪೂಜಾರ್
| Updated By: ಸಾಧು ಶ್ರೀನಾಥ್​

Updated on:Sep 20, 2023 | 11:00 AM

ರಾಯಚೂರು, ಸೆಪ್ಟೆಂಬರ್​ 20: ಉಷ್ಣ ವಿದ್ಯುತ್​ ಸ್ಥಾವರವನ್ನು ಹೊಂದಿರುವ ರಾಯಚೂರಿನಲ್ಲಿ ಜೆಸ್ಕಾಂ ಮಹಿಳಾ ಇಂಜಿನಿಯರ್ ಗೆ ಹಿರಿಯ ಇಂಜಿನಿಯರ್ ನಿಂದ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ನಡೆದಿದೆ. ಸಾಕ್ಷ್ಯಾಧಾರ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಜೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್​ನನ್ನು ಕೊನೆಗೂ ಸಸ್ಪೆಂಡ್ ಮಾಡಲಾಗಿದೆ. ಜೆಸ್ಕಾಂ ಇಇ ಶ್ರೀನಿವಾಸ್ ನನ್ನು ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.

ರಾಯಚೂರಿನ 220 ಕೆವಿ ಸ್ವೀಕರಣಾ ಕೇಂದ್ರದಲ್ಲಿ ಘಟನೆ ನಡೆದಿದ್ದು, ರಾತ್ರಿ ಪಾಳಯದಲ್ಲಿದ್ದ ಮಹಿಳಾ ಇಂಜಿನಿಯರ್ ಜೊತೆ ಇಇ ಶ್ರೀನಿವಾಸ್ ಅಸಭ್ಯವಾಗಿ ವರ್ತಿಸಿರುವುದು ಪ್ರಾಥಮಿಕ ತನಿಖೆ ವೇಳೆ ಸಾಬೀತಾಗಿರುವ ಹಿನ್ನೆಲೆ ಅಮಾನತು ಆದೇಶ ಹೊರಬಿದ್ದಿದೆ.

ಇದನ್ನೂ ಓದಿ: ವಿದೇಶದಲ್ಲಿ ಕುಳಿತು ಸುಳ್ಯದಲ್ಲಿರುವ ಹೆಂಡತಿಗೆ ತ್ರಿವಳಿ ತಲಾಖ್ ನೀಡಿದ ಭೂಪ!

ಇದೇ ಆಗಸ್ಟ್ 25 ರಂದುರಾತ್ರಿ ಪಾಳಯದಲ್ಲಿದ್ದ ಮಹಿಳಾ ಇಂಜಿನಿಯರ್ ಆಫ್ರೀನ್ ಎಂಬುವವರ ಜೊತೆ ರೀಡಿಂಗ್ ಮಾಪನಗಳನ್ನು ತೆಗೆದುಕೊಳ್ಳಲು ಹೋದಾಗ ಇಇ ಶ್ರೀನಿವಾಸ್ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಇತರೆ ಮಹಿಳಾ ಸಿಬ್ಬಂದಿ ಹಾಗೂ ಇನ್ನಿತರ ಸಿಬ್ಬಂದಿ ಸಹಾಯದೊಂದಿಗೆ ಪ್ರತಿಭಟನೆ ನಡೆದಿತ್ತು.

ಇದನ್ನೂ ಓದಿ: Bellary News: ಜೆಸ್ಕಾಂ ಎಡವಟ್ಟು: ಮನೆಗೆ 4 ಲಕ್ಷ ವಿದ್ಯುತ್​ ಬಿಲ್​ ನೀಡಿದ ಸಿಬ್ಬಂದಿ

ಘಟನೆ ಬಗ್ಗೆ ಖುದ್ದು ಸಂತ್ರಸ್ತೆ ಇಂಜಿನಿಯರ್ ಆಫ್ರಿನ್ ಹೇಳಿಕೆ ದಾಖಲಿಸಿಕೊಂಡಿದ್ದ ಹಿರಿಯ ಅಧಿಕಾರಿಗಳ ತಂಡ, ಪ್ರಾಥಮಿಕ ತನಿಖೆ ವೇಳೆ ಆಫ್ರಿನ್ ಗೆ ಲೈಂಗಿಕ ಕಿರುಕುಳ ನೀಡಿರೊ ಬಗ್ಗೆ ಸಾಕ್ಷಾಧಾರ ಲಭ್ಯವಾದ ಬೆನ್ನಲ್ಲೇ ಇಇ ಶ್ರೀನಿವಾಸ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ರಾಯಚೂರಿನಲ್ಲಿ ಟ್ರ್ಯಾಕ್ಟರ್ ಮತ್ತು ಟಾಟಾ ಏಸ್ ಮಧ್ಯೆ ಡಿಕ್ಕಿ: ಚಾಲಕ ಸಾವು

ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ತಡರಾತ್ರಿ ಟ್ರ್ಯಾಕ್ಟರ್ ಮತ್ತು ಟಾಟಾ ಏಸ್ ಮಧ್ಯೆ ಡಿಕ್ಕಿ; ಡಿಕ್ಕಿ ರಭಸಕ್ಕೆ ಟಾಟಾ ಏಸ್ ವಾಹನದ ಚಾಲಕ ಮೆಹಬೂಬ್ (28) ಮೃತಪಟ್ಟಿದ್ದಾನೆ.

ಮಾನ್ವಿ ಕಡೆಯಿಂದ ಚೀಕಲಪರ್ವಿ ಕಡೆ ಬರುತ್ತಿದ ಟಾಟಾ ಏಸ್, ಮರಳು ತುಂಬಿಕೊಂಡು ಮಾನ್ವಿ ಕಡೆ ಹೊರಟಿದ್ದ ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಟಾಟಾ ಎಸಿ ಚಾಲಕ ಮೆಹಬೂಬ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಸ್ಥಳೀಯರು ಕಾರಿನಲ್ಲಿ ಮಾನ್ವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೆಹಬೂಬ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 am, Wed, 20 September 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್