Bellary News: ಜೆಸ್ಕಾಂ ಎಡವಟ್ಟು: ಮನೆಗೆ 4 ಲಕ್ಷ ವಿದ್ಯುತ್​ ಬಿಲ್​ ನೀಡಿದ ಸಿಬ್ಬಂದಿ

ಇತ್ತೀಚಿಗೆ ಮನೆಗಳಿಗೆ ಹೆಚ್ಚಿನ ವಿದ್ಯುತ್​​ ಬಿಲ್​ ಬರುತ್ತಿದ್ದು, ಗ್ರಾ​​ಹಕರು ಕಂಗಾಲ ಆಗಿದ್ದಾರೆ. ಅದರಂತೆ ಜೆಸ್ಕಾಂ ಸಿಬ್ಬಂದಿ ಓರ್ವ ಗ್ರಾಹಕನಿಗೆ ನಾಲ್ಕು ಲಕ್ಷಕ್ಕೂ ಅಧಿಕ ವಿದ್ಯುತ್​​ ಬಿಲ್​ ನೀಡಿದ್ದಾರೆ.

Bellary News: ಜೆಸ್ಕಾಂ ಎಡವಟ್ಟು: ಮನೆಗೆ 4 ಲಕ್ಷ ವಿದ್ಯುತ್​ ಬಿಲ್​ ನೀಡಿದ ಸಿಬ್ಬಂದಿ
ವಿದ್ಯುತ್​ ಬಿಲ್​​
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ವಿವೇಕ ಬಿರಾದಾರ

Updated on:Jul 10, 2023 | 12:52 PM

ಬಳ್ಳಾರಿ: ಕರ್ನಾಟಕ ಸರ್ಕಾರ (Karnataka Gorvernment) ಗೃಹ ಜ್ಯೋತಿ (Gruha Jyoti) ಯೋಜನೆ ಅಡಿ ಪ್ರತಿ ಮನೆಗೆ 200 ಯುನಿಟ್​ ಉಚಿತ ವಿದ್ಯುತ್​​ ನೀಡಲು ನಿರ್ಧರಿಸಿದೆ. ಯೋಜನೆಗೆ ಈಗಾಗಲೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಇತ್ತ ಎಸ್ಕಾಂ ಗ್ರಾಹಕರಿಗೆ ವಿದ್ಯುತ್​​ ಬಿಲ್​​ ದರ ಏರಿಕೆ ಬಿಸಿ ತಟ್ಟಿದೆ. ಹೆಚ್ಚಿನ ವಿದ್ಯುತ್​​ ಬಿಲ್​ ಬರುತ್ತಿದ್ದು, ಗ್ರಾ​​ಹಕರು ಕಂಗಾಲ ಆಗಿದ್ದಾರೆ. ಜೆಸ್ಕಾಂ ಸಿಬ್ಬಂದಿ ಓರ್ವ ಗ್ರಾಹಕರಿಗೆ ನಾಲ್ಕು ಲಕ್ಷಕ್ಕೂ ಅಧಿಕ ವಿದ್ಯುತ್​​ ಬಿಲ್​ ನೀಡಿದ್ದಾರೆ.

ಹೌದು ಬಳ್ಳಾರಿಯ ಇಂದಿರಾ ನಗರ ನಿವಾಸಿಯಾಗಿರುವ ಮಹೇಶ್​ ಅವರ ಸಿಂಗಲ್ ಬೆಡ್ ರೂಮ್ ಮನೆಗೆ ಈ ತಿಂಗಳು 4,25,852 ರೂ. ಬಿಲ್ ಬಂದಿದೆ. ಇದನ್ನು ಕಂಡ ಗ್ರಾಹಕ ಮಹೇಶ್​ ಹೌಹಾರಿದ್ದಾರೆ. ಈ ಬಗ್ಗೆ ಮಾತನಾಡಿದ ಮಹೇಶ್​ ಶನಿವಾರ ಜೆಸ್ಕಾಂ ಸಿಬ್ಬಂದಿ ಮನಗೆ ಬಂದು ಬಿಲ್ ಕೊಟ್ಟು ಹೋಗಿದ್ದಾರೆ. ಪ್ರತಿ ತಿಂಗಳು ನಮ್ಮ ಮನೆಗೆ 1,700 ರೂ. ರೂ ಬರುತ್ತಿತ್ತು. ಆದರೆ ಈ ಬಾರಿ ಇಷ್ಟೊಂದು ಬಿಲ್​ ಬಂದಿದೆ ಎಂದು ಗಾಬರಿಯಾಗಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನಕ್ಕಾಗಿ ವಿದ್ಯುತ್​ ದರ ಏರಿಕೆ ಮಾಡಿದ್ದಾರೆ; ಹೆಚ್​ಡಿ ಕುಮಾರಸ್ವಾಮಿ ಆರೋಪ

ಇನ್ನು ಇಷ್ಟೊಂದು ವಿದ್ಯುತ್​ ಬಿಲ್​ ಕಂಡ ಸಿಬ್ಬಂದಿ ಮನಗೆ ಕೊಟ್ಟ ಬಿಲ್ ವಾಪಸ್ ಪಡೆದು, ಆನ್ ಲೈನ್​​ನಲ್ಲಿ ಬಿಲ್ ಚೆಕ್ ಮಾಡಿಕೊಂಡು ಬಿಲ್​ ಪಾವತಿ ಮಾಡಿ ಎಂದು ಹೇಳಿ ಹೋಗಿದ್ದಾರೆ. ಅದರಂತೆ ಆನ್​ಲೈನ್​​ನಲ್ಲೂ ಚೆಕ್​ ಮಾಡಿದಾಗ ನಾಲ್ಕು ಲಕ್ಷ ಬಿಲ್ ತೋರಿಸಿದೆ.

ಈ ಬಗ್ಗೆ ಮಹೇಶ್​​ ಅವರು ದೂರು ನೀಡಿದ ಬಳಿಕ, ಮತ್ತೆ ಇಂದು (ಜು.10) ಮನೆಗೆ ಬಂದ ಜೆಸ್ಕಾಂ ಸಿಬ್ಬಂದಿ ಮರುಪರಿಶೀಲನೆ ಮಾಡಿ ಎಂದಿನಂತೆ 885 ರೂ. ಬಿಲ್ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Mon, 10 July 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್