ಎಲ್ಲೆಲ್ಲೂ ರಾಮ ಜಪ; ಹಾವೇರಿಯ ಬೇಕರಿಯೊಂದರಲ್ಲಿ ಕೇಕ್​ನಲ್ಲಿ ಮೂಡಿದ ಅಯೋಧ್ಯೆ ರಾಮ ಮಂದಿರ

| Updated By: ಆಯೇಷಾ ಬಾನು

Updated on: Jan 16, 2024 | 1:35 PM

ಬೇಕರಿ ಸರ್ಕಲ್ ಎಂಬ ಹೆಸರಿನ ಬೇಕರಿಯಲ್ಲಿ 35 ಕೆ.ಜಿ ಶುಗರ್ ಪೇಸ್ಟ್ ಕೇಕ್ ನಿಂದ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸುಮಾರು 40 ಸಾವಿರ ಖರ್ಚು ಮಾಡಲಾಗಿದೆ. ಸತತ 5 ದಿನಗಳ ಪರಿಶ್ರಮದಿಂದಾಗಿ ಅದ್ಭುತವಾದ ರಾಮ ಮಂದಿರ ನಿರ್ಮಾಣವಾಗಿದೆ.

ಹಾವೇರಿ, ಜ.16: ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ (Ayodhya Ram Mandir). ಮತ್ತೊಂದೆಡೆ ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಪ್ರತಿಯೊಬ್ಬ ಭಕ್ತರು ಅಯೋಧ್ಯೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಮತ್ತೆ ಕೆಲವರು ತಾವು ಇರುವಲ್ಲಿಯೇ ನಾನಾ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯಾದ್ಯಂತ ರಾಮ ನಾಮ ಜಪ ಶುರುವಾಗಿದೆ. ರಾಣೆಬೆನ್ನೂರು ನಗರದ ಬೇಕರಿಯಲ್ಲಿ ಶುಗರ್ ಪೇಸ್ಟ್​ ಬಳಸಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ.

ಬೇಕರಿ ಸರ್ಕಲ್ ಎಂಬ ಹೆಸರಿನ ಬೇಕರಿಯಲ್ಲಿ 35 ಕೆ.ಜಿ ಶುಗರ್ ಪೇಸ್ಟ್ ಕೇಕ್ ನಿಂದ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸುಮಾರು 40 ಸಾವಿರ ಖರ್ಚು ಮಾಡಲಾಗಿದೆ. ಸತತ 5 ದಿನಗಳ ಪರಿಶ್ರಮದಿಂದಾಗಿ ಅದ್ಭುತವಾದ ರಾಮ ಮಂದಿರ ನಿರ್ಮಾಣವಾಗಿದೆ. ಈ ಕೇಕ್ ಮಂದಿರ ರಾಣೆಬೆನ್ನೂರು ನಗರದ ಜನರ ಗಮನ ಸೆಳೆಯುತ್ತಿದೆ.

ಜನವರಿ 22ರಂದು ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಇಂದಿನಿಂದ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ನಾಳೆ ಮಂದಿರ ಆವರಣಕ್ಕೆ ರಾಮಲಲ್ಲಾ ಮೂರ್ತಿ ಪ್ರವೇಶವಾಗಲಿದ್ದು, ಜನವರಿ 18ರಂದು ಗರ್ಭಗುಡಿಯಲ್ಲಿ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮನ ಮೂರ್ತಿ ಇರಿಸಲಾಗುತ್ತದೆ. ಜನವರಿ 21ರವರೆಗೂ ಅಯೋಧ್ಯೆಯಲ್ಲಿ ಪೂಜೆ ಪುನಸ್ಕಾರ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on