Loading video

ಚಾಮರಾಜನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್​ ಹೃದಯಾಘಾತ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 13, 2025 | 6:20 PM

ಚಾಮರಾಜನಗರದ ಕೇಕ್ ವರ್ಲ್ಡ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ 56 ವರ್ಷದ ವೇಣುಗೋಪಾಲ್ ಎಂಬ ಕೇರಳ ಮೂಲದ ವ್ಯಕ್ತಿಯು ಗ್ರಾಹಕರಿಗೆ ಸಿಹಿ ತಿಂಡಿಗಳನ್ನು ನೀಡುವಾಗ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಾಮರಾಜನಗರ, ಫೆಬ್ರವರಿ 13: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್​ ಹೃದಯಾಘಾತ (heart attack) ಉಂಟಾಗಿರುವಂತಹ ಘಟನೆ ಚಾಮರಾಜನಗರದ ಕೇಕ್ ವಲ್ಡ್ ಬೇಕರಿಯಲ್ಲಿ ನಡೆದಿದೆ. ಗ್ರಾಹಕರಿಗೆ ಸ್ವೀಟ್ಸ್​​ ಪಾರ್ಸಲ್​​ ಮಾಡುವ ವೇಳೆ ಹೃದಯಾಘಾತ ಉಂಟಾಗಿದೆ. ಕೇರಳ ಮೂಲದ ವ್ಯಕ್ತಿ ವೇಣುಗೋಪಾಲ್​(56) ಮೃತ ವ್ಯಕ್ತಿ. ಕಳೆದ 5 ವರ್ಷದಿಂದ ಕೇಕ್​ ವಲ್ಡ್​​ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.