‘ಬಾನ ದಾರಿಯಲಿ’ ಚಿತ್ರದ ಕೀನ್ಯಾದ ಶೂಟಿಂಗ್ ಎಷ್ಟು ಕಷ್ಟವಾಗಿತ್ತು ಎಂಬುದನ್ನು ವಿವರಿಸಿದ ಗಣೇಶ್

Updated on: Sep 06, 2023 | 8:47 AM

ನಟ ಗಣೇಶ್ ಅವರು ‘ಬಾನ ದಾರಿಯಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರದ ವೇದಿಕೆ ಮೇಲೆ ಗಣೇಶ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಕೀನ್ಯಾದಲ್ಲೂ ನಡೆದಿದೆ. ಅಲ್ಲಿ ಶೂಟಿಂಗ್ ದಿನಗಳು ಹೇಗಿತ್ತು ಎಂಬುದನ್ನು ಗಣೇಶ್ ವಿವರಿಸಿದ್ದಾರೆ.

ನಟ ಗಣೇಶ್ ಅವರು ‘ಬಾನ ದಾರಿಯಲಿ’ (Bana Dariyalli Movie) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರದ ವೇದಿಕೆ ಮೇಲೆ ಗಣೇಶ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಕೀನ್ಯಾದಲ್ಲೂ ನಡೆದಿದೆ. ಅಲ್ಲಿ ಶೂಟಿಂಗ್ ದಿನಗಳು ಹೇಗಿತ್ತು ಎಂಬುದನ್ನು ಗಣೇಶ್ (Ganesh) ವಿವರಿಸಿದ್ದಾರೆ. ‘ಕೆಲವೇ ದಿನಗಳು ಶೂಟ್ ಮಾಡಲು ಕೀನ್ಯಾದಲ್ಲಿ ಒಪ್ಪಿಗೆ ಇತ್ತು. ಆದರೆ, ಚಿತ್ರೀಕರಣ ಮಾಡಬೇಕಿದ್ದ ಅವಧಿ ಹೆಚ್ಚಿತ್ತು. ಒಪ್ಪಿಗೆ ತೆಗೆದುಕೊಂಡ ಜಾಗ ಬಿಟ್ಟು ಆಚೀಚೆ ಹೋಗಬಾರದಿತ್ತು. ನಮ್ಮ ಛಾಯಾಗ್ರಾಹಕ ಅಭಿ ಅವರು ಪ್ಯಾಕ್​ಅಪ್ ಆದ ಬಳಿಕವೂ ಮರುದಿನದ ತಯಾರಿ ಮಾಡಿಕೊಳ್ಳುತ್ತಿದ್ದರು’ ಎಂದಿದ್ದಾರೆ ಗಣೇಶ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Sep 06, 2023 08:45 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More