AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಉಳಿಸಿಕೊಳ್ಳಲು ಗಣೇಶ್ ಪರದಾಟ: ‘ಬಾನ ದಾರಿಯಲ್ಲಿ’ ಟ್ರೈಲರ್ ಬಿಡುಗಡೆ

Baana Daariyalli: ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಖತ್ ಕಲರ್​ಫುಲ್ ಆಗಿ ಸಿನಿಮಾವನ್ನು ಚಿತ್ರೀಕರಿಸಲಾಗಿದ್ದು, ಸಿನಿಮಾದಲ್ಲಿ ರೊಮ್ಯಾಂಟಿಕ್ ಆದ ಪ್ರೇಮಕತೆಯಿದೆ. ಸಿನಿಮಾ ಸೆಪ್ಟೆಂಬರ್ 28 ರಂದು ಬಿಡುಗಡೆ ಆಗುತ್ತಿದೆ.

ಪ್ರೀತಿ ಉಳಿಸಿಕೊಳ್ಳಲು ಗಣೇಶ್ ಪರದಾಟ: 'ಬಾನ ದಾರಿಯಲ್ಲಿ' ಟ್ರೈಲರ್ ಬಿಡುಗಡೆ
ಬಾನ ದಾರಿಯಲ್ಲಿ
Follow us
ಮಂಜುನಾಥ ಸಿ.
|

Updated on:Sep 05, 2023 | 9:02 PM

‘ಪ್ರೀತಿ ಕಳೆದುಕೊಂಡರೆ ತುಂಬಾ ಕಷ್ಟ ಅಂತಾರೆ, ಪ್ರೀತಿಸಿದ ಹುಡುಗಿಯನ್ನೇ ಕಳೆದುಕೊಂಡರೆ?’ ಗಣೇಶ್ (Ganesh) ನಟನೆಯ ‘ಬಾನ ದಾರಿಯಲ್ಲಿ ಸಿನಿಮಾದ ಸಂಭಾಷಣೆ ಇದು. ಈ ಸಂಭಾಷಣೆಯೊಂದೇ ಸಾಕು ಗಣೇಶ್ ಅಭಿಮಾನಿಗಳು ಹುರುಪು ತುಂಬಿಕೊಳ್ಳಲು. ‘ಬಾನ ದಾರಿಯಲ್ಲಿ’ ಸಿನಿಮಾದ ಮೂಲಕ ಮತ್ತೊಂದು ರೊಮ್ಯಾಂಟಿಕ್, ಸ್ಯಾಡ್ ಪ್ರೇಮಕತೆಯೊಂದಿಗೆ ಗಣೇಶ್ ಮರಳಿದ್ದಾರೆ. ‘ಬಾನ ದಾರಿಯಲ್ಲಿ’ ಸಿನಿಮಾದ ಟ್ರೈಲರ್ ಇಂದು (ಸೆಪ್ಟೆಂಬರ್ 05) ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಪ್ರೇಮದರ್ಶನದ ಜೊತೆಗೆ ವಿಶ್ವಪರ್ಯಟನೆಯನ್ನು ಮಾಡಿಸಿದಂತೆ ಚಿತ್ರತಂಡ.

ಟ್ರೈಲರ್​ನಲ್ಲಿ ಗಣೇಶ್ ಹಾಗೂ ನಟಿ ರೀಮಾ ನಾಣಯ್ಯ, ರುಕ್ಮಿಣಿ ವಸಂತ್ ಅವರುಗಳ ಜೊತೆಗೆ ರಂಗಾಯಣ ರಘು ಸಹ ಪದೇ ಪದೇ ಕಾಣಿಸಿಕೊಂಡಿದ್ದಾರೆ. ಜಾಲಿ ಹುಡುಗನೊಬ್ಬ ಗಂಭೀರವಾಗಿ ಪ್ರೀತಿಯಲ್ಲಿ ಬಿದ್ದು, ಆ ಪ್ರೀತಿಗೆ ಪ್ರೀತಿಸಿದ ಹುಡುಗಿಯ ಪೋಷಕರು ಅಡ್ಡಾದಾಗ ಶಕ್ತಿ ಬಳಸಿ ಅಲ್ಲದೆ ವ್ಯಕ್ತಿತ್ವ ಬಳಸಿ ಹೇಗೆ ಅಡ್ಡಿಯನ್ನು ತೊಲಗಿಸಿ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೆ, ಅಸಲಿಗೆ ನಿಜಕ್ಕೂ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೋ ಅಥವಾ ಇಲ್ಲವೋ ಎಂಬುದೇ ಕತೆ.

ಇದನ್ನೂ ಓದಿ:Viral Video: ಸಪ್ತಸಾಗರದಾಚೆ ಎಲ್ಲೋ; ಸುನಿಧಿ ಗಣೇಶ್ ಹಾಡಿರುವ ಟೈಟಲ್ ಟ್ರ್ಯಾಕ್​ ವೈರಲ್

ಗಣೇಶ್ ಟ್ರೇಡ್​ಮಾರ್ಕ್ ಆದ ಕಾಮಿಡಿ, ರೊಮ್ಯಾನ್ಸ್, ತರ್ಲೆ, ಸುಂದರವಾದ ನಟಿಯರು, ಅಷ್ಟೆ ಸುಂದರವಾದ ಹಾಡುಗಳು ಈ ಸಿನಿಮಾದಲ್ಲಿಯೂ ಇವೆಯೆಂಬುದು ಟ್ರೈಲರ್ ಮೂಲಕ ತಿಳಿದು ಬರುತ್ತಿದೆ. ಸಿನಿಮಾವನ್ನು ಕರ್ನಾಟಕ ಮಾತ್ರವೇ ಅಲ್ಲದೆ ಹೊರದೇಶಗಳಲ್ಲಿಯೂ ಚಿತ್ರೀಕರಿಸಿರುವುದು ತಿಳಿದು ಬರುತ್ತಿದೆ. ಪ್ರಾಣಿ ಸಫಾರಿ, ಸಮುದ್ರ ಸರ್ಫಿಂಗ್, ಕ್ರಿಕೆಟ್ ಆಟ ಇನ್ನೂ ಹಲವನ್ನು ಈ ಸಿನಿಮಾ ಒಳಗೊಂಡಿದೆ.

‘ಬಾನ ದಾರಿಯಲ್ಲಿ’ ಸಿನಿಮಾ ಟ್ರೈಲರ್

‘ಬಾನ ದಾರಿಯಲ್ಲಿ’ ಸಿನಿಮಾವನ್ನು ಗಣೇಶ್​ರ ಹಳೆಯ ಗೆಳೆಯ ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಸಖತ್ ಕಲರ್​ಫುಲ್ ಆಗಿ ನಿರ್ದೇಶನ ಮಾಡಿದ್ದಾರೆ. ಹಲವು ಹೊಸ ಲೊಕೇಶನ್​ಗಳಲ್ಲಿ ಶೂಟ್ ಮಾಡಲಾಗಿದೆ. ಸಿನಿಮಾಕ್ಕೆ ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಅಭಿಲಾಷ್ ಕಲಾತಿ ಸಿನಿಮಾಟೊಗ್ರಫಿ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಬಾನ ದಾರಿಯಲ್ಲಿ’ ಸಿನಿಮಾವು ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Tue, 5 September 23

ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ