‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ವಿಜಯ ಯಾತ್ರೆಯ ಮ್ಯಾಪ್ ಇಲ್ಲಿದೆ; ನಿಮ್ಮೂರಿಗೆ ಭೇಟಿ ನೀಡೋದು ಯಾವಾಗ ನೋಡಿ
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಭಾವನಾತ್ಮಕವಾಗಿ ಎಲ್ಲರನ್ನೂ ಸೆಳೆದುಕೊಳ್ಳುತ್ತಿದೆ. ಚಿತ್ರಕ್ಕೆ ಎರಡನೇ ವಾರವೂ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಈಗ ತಂಡ ‘ವಿಜಯ ಯಾತ್ರೆ’ ಆರಂಭಿಸಿದೆ. ರಾಜ್ಯದ ಪ್ರಮುಖ ನಗರಗಳಿಗೆ ಈ ಟೀಂ ಭೇಟಿ ನೀಡುತ್ತಿದೆ. ಯಾವಾಗ ಯಾವ ಊರಿಗೆ ಭೇಟಿ ನೀಡಲಾಗುತ್ತದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಹೇಮಂತ್ ರಾವ್ ಅವರು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ’ (Sapta Sagaradaache Ello – Side A) ಚಿತ್ರದ ಮೂಲಕ ಮೂರನೇ ಯಶಸ್ಸು ಕಂಡಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ (Hemant Rao) ಕಾಂಬಿನೇಷನ್ನಲ್ಲಿ ಬಂದ ಎರಡನೇ ಸಿನಿಮಾ ಇದು. ಈ ಚಿತ್ರ ಭಾವನಾತ್ಮಕವಾಗಿ ಎಲ್ಲರನ್ನೂ ಸೆಳೆದುಕೊಳ್ಳುತ್ತಿದೆ. ಚಿತ್ರಕ್ಕೆ ಎರಡನೇ ವಾರವೂ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಈಗ ತಂಡ ‘ವಿಜಯ ಯಾತ್ರೆ’ ಆರಂಭಿಸಿದೆ. ರಾಜ್ಯದ ಪ್ರಮುಖ ನಗರಗಳಿಗೆ ಈ ಟೀಂ ಭೇಟಿ ನೀಡುತ್ತಿದೆ. ಯಾವಾಗ ಯಾವ ಊರಿಗೆ ಭೇಟಿ ನೀಡಲಾಗುತ್ತದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಆಗಸ್ಟ್ 31ರಂದು ಪೇಯ್ಡ್ ಪ್ರೀಮಿಯರ್ ಕೂಡ ಆಯೋಜನೆ ಮಾಡಲಾಯಿತು. ಈ ಚಿತ್ರವನ್ನು ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದರು. ಹೀಗಾಗಿ, ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದರು. ಮೊದಲ ವೀಕೆಂಡ್ನಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿತು. ಹೀಗಾಗಿ ತಂಡದವರು ‘ವಿಜಯ ಯಾತ್ರೆ’ ಮಾಡುತ್ತಿದ್ದಾರೆ.
ಸೆಪ್ಟೆಂಬರ್ 5ರಂದು ತಂಡ ಮೈಸೂರು ಹಾಗೂ ಮಂಡ್ಯಕ್ಕೆ ಭೇಟಿ ನೀಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ತಂಡ ಹಾಸನಕ್ಕೆ ಭೇಟಿ ನೀಡಲಿದೆ. ಆ ಬಳಿಕ ಉಡುಪಿಗೆ ತೆರಳಲಿದೆ. ಸೆಪ್ಟೆಂಬರ್ 7ರಂದು ಉಡುಪಿ/ಮಣಿಪಾಲ್ ಹಾಗೂ ಕುಂದಾಪುರಕ್ಕೆ ತಂಡ ಭೇಟಿ ನೀಡಲಿದೆ. ಸೆಪ್ಟೆಂಬರ್ 8ರಂದು ಮಂಗಳೂರಿಗೆ ತಂಡ ತೆರಳಲಿದೆ. ಸೆಪ್ಟೆಂಬರ್ 9ಕ್ಕೆ ಶಿವಮೊಗ್ಗ, ಸೆಪ್ಟೆಂಬರ್ 10ರಂದು ಹುಬ್ಬಳಿ ಹಾಗೂ ಧಾರವಾಡ, ಸೆಪ್ಟೆಂಬರ್ 11 ಬೆಳಗಾವಿ, ಸೆಪ್ಟೆಂಬರ್ 12 ದಾವಣಗೆರೆ ಹಾಗೂ ತುಮಕೂರಿಗೆ ತಂಡ ಭೇಟಿ ನೀಡಲಿದೆ. ಈ ಮೂಲಕ ಅಲ್ಲಿನ ಅಭಿಮಾನಿಗಳ ಜೊತೆ ತಂಡ ಯಶಸ್ಸನ್ನು ಸಂಭ್ರಮಿಸಲಿದೆ.
View this post on Instagram
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಿಕ್ಕ ‘ಬುಕ್ ಮೈ ಶೋ’, ‘ಐಎಂಡಿಬಿ’ ರೇಟಿಂಗ್ ಎಷ್ಟು?
ಶೀಘ್ರದಲ್ಲೇ ತೆಲುಗು ವರ್ಷನ್ ರಿಲೀಸ್
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಪರ ಭಾಷೆಯಲ್ಲಿ ರಿಲೀಸ್ ಆಗಲಿದೆ ಎಂದು ತಂಡ ಈ ಮೊದಲೇ ಘೋಷಣೆ ಮಾಡಿತ್ತು. ಮೊದಲು ತೆಲುಗು ವರ್ಷನ್ ರಿಲೀಸ್ ಮಾಡಲು ನಿರ್ದೇಶಕ ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಆಗಲಿದೆ.