ಮಂಗಳೂರು: ಚಲಿಸುತ್ತಿದ್ದ ಬಸ್​ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಮಂಗಳೂರು: ಚಲಿಸುತ್ತಿದ್ದ ಬಸ್​ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಅಶೋಕ್​ ಪೂಜಾರಿ, ಮಂಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 08, 2024 | 4:20 PM

ಬಸ್​ನಲ್ಲಿ ಚಲಿಸುವಾಗ ಎಚ್ಚರದಿಂದರಬೇಕು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾದಂತಿದೆ. ಅದರಲ್ಲೂ ಬಾಗಿಲ ಬಳಿ ನಿಲ್ಲುವಾಗ ಸ್ವಲ್ಪ ಯಾಮಾರಿದರೂ ಜೀವಕ್ಕೆ ಕುತ್ತು ತರುತ್ತದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ(Bantwal) ತಾಲೂಕಿನ ಮಾಣಿ‌ ಎಂಬಲ್ಲಿ ಸೀಟು ಬಿಟ್ಟು ಕೊಡಲು ಹೋಗಿ ಆಯತಪ್ಪಿ ಬಸ್ಸಿನಿಂದ ಬಿದ್ದು ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ, ಫೆ.08: ಚಲಿಸುತ್ತಿದ್ದ ಬಸ್​ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ(Bantwal) ತಾಲೂಕಿನ ಮಾಣಿ‌ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಿನ್ನಿಕಲ್ ನಿವಾಸಿ ರಾಧ(66) ಮೃತ ಮಹಿಳೆ. ಮಗುವನ್ನು ಹಿಡಿದುಕೊಂಡು ಬಸ್ ಹತ್ತಿದ ಮಹಿಳೆಗೆ ಸೀಟು ಬಿಟ್ಟುಕೊಟ್ಟಿದ್ದ ಮೃತ ರಾಧಾ ಅವರು, ಬಸ್​ನ ಸರಳು ಹಿಡಿಯುವ ವೇಳೆ ಕೈ ಜಾರಿ ಬಸ್​ನಿಂದ ಹೊರಗೆ ಬಿದ್ದು ಗಾಯವಾಗಿತ್ತು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮಹಿಳೆ ಬಸ್‌ನಿಂದ ಹೊರಗೆಬಿದ್ದ ಭಯಾನಕ ದೃಶ್ಯ ಬಸ್​ಗೆ ಅಳವಡಿಸಿದ್ದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ