ಕಲುಷಿತ ನೀರು ಸೇವಿಸಿ ಮಹಿಳೆ ಸಾವು ಕೇಸ್: ಹೊಸಪೇಟೆ ಕಮಿಷನರ್ ಸೇರಿ ಮೂವರ ಅಮಾನತು
ಕಲುಷಿತ ನೀರು ಸೇವಿಸಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಕಮಿಷನರ್ ಸೇರಿ ಮೂವರ ಅಮಾನತಿಗೆ ಶಿಫಾರಸು ಮಾಡಲಾಗಿದೆ. ಹೊಸಪೇಟೆ ಕಮಿಷನರ್ ಬಿ.ಟಿ.ಬಂಡಿವಡ್ಡರ್, ಎಇಇ ಸತೀಶ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಖಾಜಿ ಅಮಾನತಿಗೆ ಶಿಫಾರಸು ಮಾಡಲಾಗಿದೆ.
ವಿಜಯನಗರ, ಜನವರಿ 08: ಕಲುಷಿತ ನೀರು (Contaminated water) ಸೇವಿಸಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಕಮಿಷನರ್ ಸೇರಿ ಮೂವರ ಅಮಾನತಿಗೆ ಶಿಫಾರಸು ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಜಮೀರ್ ಅಹ್ಮದ್ ಮತ್ತು ವಿಜಯನಗರ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ ಮೋಹನ್ ಸೂಚನೆ ಮೇರೆಗೆ ಜಿಲ್ಲೆಯ ಹೊಸಪೇಟೆ ಕಮಿಷನರ್ ಬಿ.ಟಿ.ಬಂಡಿವಡ್ಡರ್, ಎಇಇ ಸತೀಶ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಖಾಜಿ ಅಮಾನತಿಗೆ ಶಿಫಾರಸು ಮಾಡಲಾಗಿದೆ.
4 ದಿನಗಳ ಹಿಂದೆ ಕಾರಿಗನೂರು, ಶಿಕಾರಿ ಕ್ಯಾಂಪ್ ಗ್ರಾಮಗಳಿಗೆ ಗ್ರಾಮಗಳಿಗೆ ಕಲುಷಿತ ನೀರು ಪೂರೈಕೆ ಮಾಡಲಾಗಿತ್ತು. 66 ಜನ ಆಸ್ಪತ್ರೆಗೆ ದಾಖಲಾಗಿದ್ದರು. ಸೀತಮ್ಮ ಎಂಬ ಮಹಿಳೆ ಮೃತಪಟ್ಟಿದ್ದರು. ಗ್ರಾಮಗಳಿಗೆ ಭೇಟಿ ಬಳಿಕ ಸರ್ಕಾರಕ್ಕೆ ಡಿಸಿ ದಿವಾಕರ್ ವರದಿ ನೀಡಿದ್ದರು. ಡಿಸಿ ದಿವಾಕರ್ ವರದಿ ಆಧರಿಸಿ ಮೂವರ ಅಮಾನತಿಗೆ ಶಿಫಾರಸು ಮಾಡಲಾಗಿದೆ.
ಜಿಲ್ಲೆಯ ಹೊಸಪೇಟೆಯ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಓಪನ್ ಮಾಡಲಾಗಿದೆ. ವೈದರು, ಸಿಬ್ಬಂದಿಯಿಂದ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮುನ್ಸಿಪಾಲಿಟಿ ವಾಹನದಲ್ಲಿ ಮೈಕ್ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಗಿದೆ. ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗಿತ್ತು.
ಮುನ್ಸಿಪಾಲಟಿ ಅಧಿಕಾರಿಗಳ ನಿರ್ಲಕ್ಷ್ಯ
ಮುನ್ಸಿಪಾಲಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರಿಗನೂರು ಗ್ರಾಮವೇ ಆಸ್ಪತ್ರೆಗೆ ಸೇರುವಂತಾಗಿತ್ತು. ಗ್ರಾಮಕ್ಕೆ ಸರಬರಾಜು ಆಗುವ ನೀರಿನ ಟ್ಯಾಂಕರ್ ಕಳೆದ ಒಂದು ವರ್ಷದಿಂದ ಸ್ವಚ್ಛಗೊಳಿಸದೆ ಹಿನ್ನೆಲೆ ಈ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಟ್ಯಾಂಕರ್ನಿಂದ ಸಪ್ಲೈ ಆಗುವ ನೀರನ್ನ ಸೇವನೆ ಮಾಡಿದ್ದ ಕಾರಿಗನೂರು ಗ್ರಾಮಸ್ಥರಲ್ಲಿ ಏಕಾಏಕಿ ವಾಂತಿ ಬೇಧಿ ಶುರುವಾಗಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿತ್ತು.
ಇದನ್ನೂ ಓದಿ: ಹೊಸಕೋಟೆಯಲ್ಲಿ ಓರ್ವ ಮಹಿಳೆ ಸಾವು, 271 ಜನ ಅಸ್ವಸ್ಥ: ಬಯಲಾಯ್ತು ವಿಷ ಪ್ರಸಾದ ಹಿಂದಿನ ಸತ್ಯ
ಕಾರಿಗನೂರು ಗ್ರಾಮಕ್ಕೆ ತುಂಗಭದ್ರಾ ಜಲಾಶಯದಿಂದ ಕಳೆದ 20 ವರ್ಷದ ಹಿಂದೆ ನೀರು ಸರಬರಾಜುಗೆ ಪೈಪ್‌ಲೈನ್ ಅಳವಡಿಸಲಾಗಿತ್ತು. ಪೈಪ್‍ಲೈನ್‍ನಲ್ಲಿ ಎಲ್ಲಿ ಲೋಪವಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ. ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಾಗುತ್ತಿದ್ದಂತೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಈ ಕೂಡಲೇ ಶುದ್ಧ ಕುಡಿಯುವ ನೀರು ಪೂರೈಕೆ ಪೈಪ್‍ಲೈನ್ ದುರಸ್ತಿಗೊಳಿಸಬೇಕು. ಸಮಸ್ಯೆಯನ್ನ ಬಗೆ ಹರಿಸುತ್ತವೆ. ಈಗಾಗಲೇ ತಪ್ಪಿತಸ್ಥ ಅಧಿಕಾರಿಗಳಿಗೆ ಶೋಕಾಸ ನೋಟಿಸ್ ನೀಡಲಾಗಿದೆ.. ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.