ಪ್ರಧಾನಿ ಮೋದಿ ಕೇವಲ ರೂ. 29/ಕೆಜಿ ಸಿಗುವ ಭಾರತ್ ಬ್ರ್ಯಾಂಡ್ ಅಕ್ಕಿ ಲಾಂಚ್ ಮಾಡಿದ್ದು ಐತಿಹಾಸಿಕ ನಿರ್ಣಯ: ಬಿಎಸ್ ಯಡಿಯೂರಪ್ಪ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಗೆ ಹೋಲಿಕೆ ಮಾಡಿದರೆ ಪ್ರಧಾನ ಮೋದಿಯರದ್ದು ಐತಿಹಾಸಿಕ ತೀರ್ಮಾನ ಎಂದು ಯಡಿಯೂರಪ್ಪ ಹೇಳಿದರು. ಮುಕ್ತ ಮಾರುಕಟ್ಟೆಯಲ್ಲಿ ಈಗ ಅಕ್ಕಿ ದರ ಪ್ರತಿ ಕೇಜಿಗೆ 50 ರೂ. ಆಗಿದೆ. ಆದರೆ ಭಾರತ್ ಬ್ರ್ಯಾಂಡ್ ಅಕ್ಕಿಯ ಗುಣಮಟ್ಟ ಉತ್ತಮವಾಗಿರುವುದರಿಂದ ಎಲ್ಲ ವರ್ಗದವರು ಅಂದರೆ ಶ್ರೀಮಂತರು ಸಹ ಅದನ್ನು ಉಪಯೋಗಿಸಬಹುದು ಎಂದು ಯಡಿಯೂರಪ್ಪ ಹೇಳಿದರು.
ಮೈಸೂರು: ಇಂದು ಮೈಸೂರು ಪ್ರವಾಸದಲ್ಲಿದ್ದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಕೇಂದ್ರ ಸರ್ಕಾರದಿಂದ ಲಾಂಚ್ ಆಗಿರುವ ಭಾರತ್ ಬ್ರ್ಯಾಂಡ್ (Bharat brand) ಅಕ್ಕಿಯ ಬಗ್ಗೆ ಮಾತಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಎಲ್ಲ ವರ್ಗಗಳ ಜನರಿಗಾಗಿ ಪ್ರತಿ ಕೇಜಿಗೆ ಕೇವಲ ರೂ. 29 ಯಂತೆ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ಬಿಡುಗಡೆ ಮಾಡಿದ್ದು ಒಂದು ಐತಿಹಾಸಿಕ ನಿರ್ಣಯವಾಗಿದೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಗೆ ಹೋಲಿಕೆ ಮಾಡಿದರೆ ಪ್ರಧಾನ ಮೋದಿಯರದ್ದು ಐತಿಹಾಸಿಕ ತೀರ್ಮಾನ ಎಂದರು. ಮುಕ್ತ ಮಾರುಕಟ್ಟೆಯಲ್ಲಿ ಈಗ ಅಕ್ಕಿ ದರ ಪ್ರತಿ ಕೇಜಿಗೆ 50 ರೂ. ಆಗಿದೆ. ಆದರೆ ಭಾರತ್ ಬ್ರ್ಯಾಂಡ್ ಅಕ್ಕಿಯ ಗುಣಮಟ್ಟ ಉತ್ತಮವಾಗಿರುವುದರಿಂದ ಎಲ್ಲ ವರ್ಗದವರು ಅಂದರೆ ಉಳ್ಳವರು, ಶ್ರೀಮಂತರು ಸಹ ಇದನ್ನು ಉಪಯೋಗಿಸಬಹುದು ಎಂದು ಯಡಿಯೂರಪ್ಪ ಹೇಳಿದರು. ಮೈಸೂರುನಿಂದ ಸುತ್ತೂರು ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದು ಅಲ್ಲಿಂದ ಮಾಜಿ ಮುರುಗೇಶ್ ನಿರಾಣಿಯವರೊಂದಿಗೆ ಹೆಲಿಕಾಪ್ಟರ್ ನಲ್ಲಿ ದಾವಣಗೆರೆಗೆ ಹೋಗಿ ಅಲ್ಲಿಂದ ಬೀದರ್ ಗೆ ಪ್ರಯಾಣಿಸುವುದಾಗಿ ಹೇಳಿದ ಯಡಿಯೂರಪ್ಪ ನಾಳೆ ಬೆಂಗಳೂರುಗೆ ವಾಪಸ್ಸಾಗಲಿದ್ದಾರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ